ಸೌರವ್​ ಗಂಗೂಲಿ ಸಂಗ್ರಹ ಚಿತ್ರ
ಕ್ರಿಕೆಟ್

ಇನ್ನು ಡೆಲ್ಲಿ ಕ್ಯಾಪಿಟಲ್ಸ್​ ತಂಡದಲ್ಲೂ ಶುರುವಾಗಲಿದೆ ದಾದಾಗಿರಿ!

ಟೀಮ್​ ಇಂಡಿಯಾದ ಮಾಜಿ ನಾಯಕ ಸೌರವ್​ ಗಂಗೂಲಿ ಮುಂಬರುವ ಐಪಿಎಲ್​ 20ನೇ ಆವೃತ್ತಿಗೆ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ನೂತನ ಮುಖ್ಯ ಕೋಚ್​ ಆಗಿ ಮಂಗಳವಾರ ನೇಮಕ

ನವದೆಹಲಿ: ಟೀಮ್​ ಇಂಡಿಯಾದ ಮಾಜಿ ನಾಯಕ ಸೌರವ್​ ಗಂಗೂಲಿ ಮುಂಬರುವ ಐಪಿಎಲ್​ 20ನೇ ಆವೃತ್ತಿಗೆ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ನೂತನ ಮುಖ್ಯ ಕೋಚ್​ ಆಗಿ ಮಂಗಳವಾರ ನೇಮಕಗೊಂಡಿದ್ದಾರೆ. 54 ವರ್ಷದ ಗಂಗೂಲಿ 2019ರಿಂದ ಡೆಲ್ಲಿ ಫ್ರಾಂ ಚೈಸಿ ಪರ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತ ಬಂದಿದ್ದಾರೆ.

ಮೊದಲಿಗೆ ತಂಡದ ಸಲಹೆಗಾರ ಆಗಿದ್ದ ಗಂಗೂಲಿ ಕಳೆದರಡು ವರ್ಷಗಳಿಂದ ಪುರುಷರ ಮತ್ತು ಮಹಿಳಾ ತಂಡದ ಕ್ರಿಕೆಟ್​ ನಿರ್ದೇಶಕರಾಗಿದ್ದರು. "ಐಪಿಎಲ್​ನಲ್ಲಿ ಮುಖ್ಯ ಕೋಚ್​ ಆಗಿ ಕಾರ್ಯನಿರ್ವಹಿಸುವುದನ್ನು ಎದುರು ನೋಡುತ್ತಿರುವೆ. ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಇದರೊಂದಿಗೆ ನಾನು ಹಲವಾರು ವರ್ಷಗಳಿಂದ ಉತ್ತಮ ಸಂಬಂಧವನ್ನು ಹೊಂದಿರುವೆ. ತಂಡದ ಮಾಲೀಕರು, ವ್ಯವಸ್ಥಾಪಕರು, ತರಬೇತಿ ಸಿಬ್ಬಂದಿ ಮತ್ತು ಆಟಗಾರರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಿರುವೆ. ನಾವು ಬಲಿಷ್ಠ ತಂಡವನ್ನು ಹೊಂದಿದ್ದೇವೆ. ಹೊಸ ಋತುವಿನಲ್ಲಿ ತಂಡವನ್ನು ಇನ್ನಷ್ಟು ಬಲಿಷ್ಠವಾಗಿ ಕಟ್ಟುವತ್ತ ಗಮನಹರಿಸುವೆ' ಎಂದು ಗಂಗೂಲಿ ಹೇಳಿದ್ದಾರೆ. ಡೆಲ್ಲಿ ತಂಡ ಕಳೆದ ಆವೃತ್ತಿಯಲ್ಲಿ 6ನೇ ಸ್ಥಾನ ಗಳಿಸಿತ್ತು. ಮೊದಲ ಆವೃತ್ತಿಯಿಂದ ಆಡುತ್ತಿದ್ದರೂ, ಇದುವರೆಗೆ ಟ್ರೋಫಿ ಗೆಲ್ಲದ ಐಪಿಎಲ್​ನ 2 ತಂಡಗಳಲ್ಲಿ ಡೆಲ್ಲಿ ಕೂಡ ಒಂದಾಗಿದೆ.

ಇತ್ತೀಚೆಗೆ ರಿಷಭ್​ ಪಂತ್​ ಲಖನೌ ಸೂಪರ್​ಜೈಂಟ್ಸ್​ನಿಂದ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ವರ್ಗಾವಣೆಯಾಗಿದ್ದು, ಮಾಜಿ ಆಲ್ರೌಂಡರ್​ ಯುವರಾಜ್​ ಸಿಂಗ್​ ಬ್ಯಾಟಿಂಗ್​ ಕೋಚ್​ ಆಗಿ ಡೆಲ್ಲಿ ತಂಡ ಸೇರಿಕೊಳ್ಳುವ ನಿರೀೆ ಇದೆ. ಗಂಗೂಲಿ ಇದೇ ಮೊದಲ ಬಾರಿಗೆ ಐಪಿಎಲ್​ ತಂಡವೊಂದರ ಮುಖ್ಯ ಕೋಚ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ವರ್ಷ ಅವರು ದ. ಆಫ್ರಿಕಾ ಟಿ20 ಲೀಗ್​ನಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್​ ತಂಡದ ಮುಖ್ಯ ಕೋಚ್​ ಆಗಿದ್ದರು.