ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಕಾರ್ಯವೈಖರಿಗೆ ಶ್ರೀಕಾಂತ್ ಗರಂ
- ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಕಾರ್ಯವೈಖರಿಗೆ ಶ್ರೀಕಾಂತ್ ಗರಂ
- ಶ್ರೀಲಂಕಾ ದುರ್ಬಲ ತಂಡ; ಅವರೊಟ್ಟಿಗಿನ ಪಂದ್ಯಕ್ಕೆ ಗಂಭೀರ್ ಅಗತ್ಯವಿಲ್ಲ ಎಂದ ಕ್ರಿಸ್ ಶ್ರೀಕಾಂತ್
- ತಂಡದವರ ಜೊತೆ ಉತ್ತಮ ಸಂವನ ನಡೆಸಿದರೆ ಯಾವುದೇ ಬಿಕ್ಕಟ್ಟು ಎದುರಾಗಲ್ಲ ಎಂದ ಮಾಜಿ ಆಟಗಾರ
ನವದೆಹಲಿ: ಒಂದು ಸಮಯದಲ್ಲಿ ಟೆಸ್ಟ್ ಕ್ರಿಕೆಟ್ನ ಅಧಿಪತಿಗಳಂತೆ ಮೆರೆಯುತ್ತಿದ್ದ ಟೀಂ ಇಂಡಿಯಾ, ಇತ್ತೀಚೆಗೆ ಶ್ರೀಲಂಕಾ ಜೊತೆಗಿನ ಪಂದ್ಯವೊಂದನ್ನು ಹೊರತುಪಡಿಸಿ ಬೇರಾವ ತಂಡಗಳ ಮೇಲೆ ಅಭೂತಪೂರ್ವ ಆಟವನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾಗಿಲ್ಲ.
ಇದರ ಹಿನ್ನಲೆಯಲ್ಲಿಯೇ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿರುವ ಗೌತಮ್ ಗಂಭೀರ್ ಸಾಕಷ್ಟು ಟೀಕೆ-ಟಿಪ್ಪಣಿಗಳನ್ನು ಎದುರಿಸುತ್ತಿದ್ದಾರೆ. ಈದೀಗ ಭಾರತ ತಂಡದ ಮಾಜಿ ನಾಯಕ ಕ್ರಿಸ್ ಶ್ರೀಕಾಂತ್ (Srikkanth on Gautam Gambhir), ಗಂಭೀರ್ ವಿರುದ್ಧ ಕಠಿಣ ಪದಗಳನ್ನು ಪ್ರಯೋಗಿಸಿದ್ದಾರೆ.
ಅವನಿಗೆ ಅಲ್ಲಿ ಏನೂ ಕೆಲಸವಿಲ್ಲ!
ಶ್ರೀಲಂಕಾ ವಿರುದ್ಧದ ಟೆಸ್ಟ್ ಟೂರ್ನಿ ಬಗ್ಗೆ ಮಾತನಾಡುತ್ತಾ ಹಿರಿಯ ಆಟಗಾರ ಶ್ರೀಕಾಂತ್, ಶ್ರೀಲಂಕಾ ತಂಡ ತುಂಬಾ ಬಲಹೀನವಾಗಿದೆ, ಹೀಗಾಗಿ ಟೀಂ ಇಂಡಿಯಾ ಖಂಡಿತವಾಗಿ ಜಯಭೇರಿಯನ್ನು ಬಾರಿಸುತ್ತದೆ. ಗೌತಮ್ ಗಂಭೀರ್ ಶ್ರೀಲಂಕಾಗೆ ಹೋಗಿರಬೇಕಾದ ಯಾವುದೇ ಅವಶ್ಯಕತೆಯೇ ಇಲ್ಲ, ಅಲ್ಲಿ ಅವನಿಗೆ ಏನೂ ಕೆಲಸವೇ ಇಲ್ಲ ಎಂದಿದ್ದಾರೆ.
ಹಾಗೆಯೇ ಗಂಭೀರ್ ಬಗ್ಗೆ ಮಾತನಾಡುತ್ತಾ, ಆದರೆ ಗಂಭೀರ್ನ ನಿರ್ಧಾರವನ್ನೇ ನಂಬಲು, ಒಪ್ಪಲು ಸಾಧ್ಯವಾಗುವುದಿಲ್ಲ. ಮೊದಲ ಟೆಸ್ಟ್ನಲ್ಲಿ 200 ಕ್ಕೂ ಅಧಿಕ ರನ್ಗಳಿಸಿರುವ ದೇವದತ್ ಪಡಿಕ್ಕಲ್ನು ಮುಂದಿನ ಪಂದ್ಯದಿಂದ ಹೊರಗಿಟ್ಟರೆ ಆಶ್ಚರ್ಯ ಪಡಬೇಕಿಲ್ಲ.
ಆದರೆ, ಈ ಶ್ರೀಲಂಕಾ, ಅಫಘಾನಿಸ್ತಾದ ಬದಲು ಬಲಿಷ್ಠ ತಂಡಗಳ ವಿರುದ್ಧ ನಮ್ಮವರು ಗೆಲ್ಲಬೇಕು, ಗೆಲ್ಲುವಂತ ತಂಡ ನಮ್ಮ ಬಳಿ ಇರಬೇಕು ಎಂದಿದ್ದಾರೆ. ಟೆಸ್ಟ್ ಕ್ರಿಕೆಟ್ನಿಂದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಆರ್. ಅಶ್ವಿನ್ ನಿವೃತ್ತಿ ಘೋಷಿಸಿದ ನಂತರ, ತಂಡದಲ್ಲಿ ಬಲಹೀನತೆ ಎದ್ದುಕಾಣುತ್ತಿದ್ದು, ಹೊಸ ತಂಡವನ್ನು ಕಟ್ಟುವತ್ತ ಬಿಸಿಸಿಐ ಪ್ರಯತ್ನಶೀಲವಾಗಿರುವ ಸಂದರ್ಭದಲ್ಲಿ ಶ್ರೀಕಾಂತ್ ಹೇಳಿಕೆ ಸಂಚಲನಕ್ಕೆ ಕಾರಣವಾಗಿದೆ.
ಅವನೊಬ್ಬ ಉತ್ತಮ ಆಟಗಾರ!
ಹಾಗೆಯೇ, ಗೌತಮ್ ಗಂಭೀರ್ ಬಗ್ಗೆ ಹೊಗಳಿ ಮಾತನಾಡಿರುವ ಶ್ರೀಕಾಂತ್, ನಾನು ಗಂಭೀರ್ನನ್ನು ಟೀಕಿಸುತ್ತಿದ್ದ, ಬದಲಾಗಿ ತಪ್ಪುಗಳನ್ನು ಸರಿಮಾಡಿಕೊಳ್ಳುವಂತೆ ಹೇಳುತ್ತಿದ್ದೆನೆ.
ಗಂಭೀರ್ವೊಬ್ಬ ಉತ್ತರ ಬ್ಯಾಟ್ಸಮನ್ ಹಾಗೂ ಅವನಿಗೆ ಕ್ರಿಕೆಟ್ನ್ನು ಓದುವ ಕಲೆ ಸಿದ್ದಿಯಾಗಿದೆ. ಆದರೆ ಆಟಗಾರರೊಂದಿಗೆ ತನ್ನ ಸಂವಹನ ಕಲೆ ಎಷ್ಟರ ಮಟ್ಟಿಗೆಯಿದೆ? ತನ್ನ ಕೋಚಿಂಗ್ಗೆ ಆಟಗಾರರು ಒಗ್ಗಿಕೊಳ್ಳುತ್ತಿದ್ದಾರೆಯೇ? ಎಂಬುದಕ್ಕೆ ಉತ್ತರ ಹುಡುಕಬೇಕು. ನನಗೆ ತಿಳಿದಂತೆ ತಂಡದ ಪ್ರತಿ ಆಟಗಾರರೊಂದಿಗೆ ಸರಿಯಾದ ಸಂವಹನ ನಡೆಸಿದರೆ ಬಿಕ್ಕಟ್ಟಿಗೆ ಜಾಗವೇ ಇರುವುದಿಲ್ಲ ಎಂದು ಶ್ರೀಕಾಂತ್ ಸಲಹೆ ನೀಡಿದ್ದಾರೆ, (ಏಜನ್ಸೀಸ್).