ಐರ್ಲೆಂಡ್ ವಿರುದ್ಧ ಸರಣಿ ಸೋಲಿನ ಬೆನ್ನಲ್ಲೇ ತೀವ್ರ ಟೀಕೆಗಳಿಗೆ ಗುರಿಯಾದ ಟೀಮ್ ಇಂಡಿಯಾ ಕೋಚ್ ಗಂಭೀರ್
ನವದೆಹಲಿ: ಟಿ20 ವಿಶ್ವ ಚಾಂಪಿಯನ್ ಭಾರತ ತಂಡ ಕ್ರಿಕೆಟ್ ಶಿಶು ಐರ್ಲೆಂಡ್ ವಿರುದ್ಧ ಸರಣಿ ಸೋಲು ಕಂಡ ಬೆನ್ನಲ್ಲೇ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗಳಿಗೆ ಗುರಿಯಾಗಿದ್ದಾರೆ. 15 ವರ್ಷದ ಬ್ಯಾಟಿಂಗ್ ಸೆನ್ಸೇಶನ್ ವೈಭವ್ ಸೂರ್ಯವಂಶಿಗೆ ಸರಣಿಗೆಯಲ್ಲಿ ಅವಕಾಶ ಕಲ್ಪಿಸದ ಬಗ್ಗೆಯೂ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಗಂಭೀರ್ರನ್ನು ನಮ್ಮ ತರಬೇತಿ ಬಳಗಕ್ಕೆ ಸೇರಿಸಿಕೊಳ್ಳುವ ಆಸಕ್ತಿ ಇಲ್ಲ ಎಂದು "ಐಸ್ಲೆಂಡ್ ಕ್ರಿಕೆಟ್' ಕೂಡ ಟಾಂಗ್ ನೀಡಿದೆ. ಭಾರತ ಟಿ20ಯಲ್ಲಿ ಸತತ 16 ಸರಣಿಗಳ ಅಜೇಯ ಓಟದ ಬಳಿಕ ಸೋಲು ಕಂಡಿದೆ.
ಭಾರತ ತಂಡದಲ್ಲಿ ಹೆಚ್ಚಿನ ಆಲ್ರೌಂಡರ್ಗಳನ್ನು ತುಂಬಿರುವ ಗಂಭೀರ್ ಕ್ರಮವನ್ನು ಪ್ರಶ್ನಿಸಿರುವ ಸಂಜಯ್ ಮಂಜ್ರೇಕರ್, ಮಧ್ಯಮ ಕ್ರಮಾಂಕದಲ್ಲಿ ತಜ್ಞ ಬ್ಯಾಟರ್ಗಳ ಅಗತ್ಯವಿದೆ ಎಂದಿದ್ದಾರೆ. ಐರ್ಲೆಂಡ್ ಎದುರು ಸರಣಿ ಸೋತಿರುವುದು ಭಾರತೀಯ ಕ್ರಿಕೆಟ್ನ ಅತ್ಯಂತ ಕೆಟ್ಟ ನಿರ್ವಹಣೆಗಳಲ್ಲಿ ಒಂದಾಗಿದೆ ಎಂದು ಸುನೀಲ್ ಗಾವಸ್ಕರ್ ದೂರಿದ್ದಾರೆ.