ಮಾಜಿ ಕ್ರಿಕೆಟಿಗ ಶಿಖರ್ ಧವನ್ ಎರಡನೇ ವಿವಾಹ
ನವದೆಹಲಿ: ಟೀಮ್ ಇಂಡಿಯಾದ ಮಾಜಿ ಎಡಗೈ ಆರಂಭಿಕ ಶಿಖರ್ ಧವನ್ (Shikhar Dhawan) ಗೆಳತಿ ಸೋಫಿ ಶೈನ್ (Sophie Shine) ಜತೆಗೆ ಶನಿವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೋಫಿ ಜತೆಗಿನ ವಿವಾಹಕ್ಕೆ ಪೂರ್ವಭಾವಿಯಾಗಿ ನಡೆದ ಸಂಗೀತ್ ಮತ್ತು ಹಳದಿ ಸಮಾರಂಭವೂ ಅದ್ದೂರಿಯಾಗಿ ನಡೆದಿದೆ. ಈ ಖಾಸಗಿ ಸಮಾರಂಭದಲ್ಲಿ ಕ್ರಿಕೆಟಿಗ ಯಜುವೇಂದ್ರ ಚಾಹಲ್ ಕೂಡ ಭಾಗವಹಿಸಿದ್ದರು.
40 ವರ್ಷದ ಧವನ್ಗೆ ಇದು 2ನೇ (wedding) ವಿವಾಹವಾಗಿದೆ. ಈ ಮುನ್ನ ತನಗಿಂತ 10 ವರ್ಷ ಹಿರಿಯರಾದ ಮೆಲ್ಬೋರ್ನ್ ನಿವಾಸಿ ಅಯೇಷಾ ಮುಖರ್ಜಿ ಜತೆಗೆ 2012ರಲ್ಲಿ ವಿವಾಹವಾಗಿದ್ದರು ಮತ್ತು 2023ರಲ್ಲಿ ವಿಚ್ಛೇದನ ಪಡೆದಿದ್ದರು. ಅವರಿಗೆ ಓರ್ವ ಪುತ್ರ ಇದ್ದಾನೆ.
ಐರ್ಲೆಂಡ್ ಮೂಲದ ಸೋಫಿ ಜತೆಗೆ ಧವನ್ ಜನವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 35 ವರ್ಷದ ಸೋಫಿ ಮಾರ್ಕೆಂಟಿಂಗ್ ಮತ್ತು ಮ್ಯಾನೇಜ್ಮೆಂಟ್ ವೃತ್ತಿಪರರಾಗಿದ್ದು, ಶಿಖರ್ ಧವನ್ ೌಂಡೇಶನ್ಗೂ ಸಾರಥ್ಯ ವಹಿಸಿದ್ದಾರೆ.