ENG vs IND ಎರಡನೇ ಟಿ20  
ಕ್ರಿಕೆಟ್

ಸಂಜು, ಇಶಾನ್​, ಅಭಿಷೇಕ್​ ಆಡಿಸಬೇಡಿ... ಆಂಗ್ಲರ ಮಣ್ಣಿನಲ್ಲಿ ವೈಭವ್ ಆಡಿದ್ದೇ ತಡ ಮಾಜಿ ಕ್ರಿಕೆಟಿಗ ಕೆಂಡಾಮಂಡಲ

ಪ್ರಮುಖ ಮುಖ್ಯಾಂಶಗಳು

  • ಎರಡನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್​ ಎದುರು ಸೋತ ಟೀಮ್ ಇಂಡಿಯಾ
  • ವೈಭವ್​ ಸೂರ್ಯವಂಶಿಗೆ ಅವಕಾಶ ಕೊಟ್ಟಿದ್ದಕ್ಕೆ ಮಾಜಿ ಕ್ರಿಕೆಟಿಗ ಗರಂ
ENG vs IND: ನಿನ್ನೆ (ಜು.04) ಆಂಗ್ಲರ ನಾಡಿನಲ್ಲಿ ನಡೆದ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ 4 ವಿಕೆಟ್​ಗಳ ಅಂತರದಲ್ಲಿ ಸೋಲುಂಡಿತು. ಈ ಮ್ಯಾಚ್​ನಲ್ಲಿ ತಂಡದಲ್ಲಿ ಸ್ಥಾನ ಪಡೆದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ, 12 ರನ್​ ಗಳಿಸಿ ಔಟ್ ಆದರೂ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದರು. ಇದು ಕ್ರಿಕೆಟ್​ ಫ್ಯಾನ್ಸ್​ಗಳಿಗೆ ಖುಷಿ ತಂದರೆ ಮಾಜಿ ಕ್ರಿಕೆಟಿಗನಿಗೆ ಬೆಂಕಿ ಇಟ್ಟಂತಾಗಿದೆ.
ತಮ್ಮ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯದಲ್ಲೇ ಹೊಸ ದಾಖಲೆ ನಿರ್ಮಿಸಿದ ವೈಭವ್​ಗೆ ಕ್ರಿಕೆಟ್​ ಪ್ರೇಮಿಗಳು ಮತ್ತು ಹಿರಿಯ ಕ್ರಿಕೆಟಿಗರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತು. ಮತ್ತೊಂದೆಡೆ, ಇಂಗ್ಲೆಂಡ್​ ವಿರುದ್ಧದ ಎರಡನೇ ಟಿ20 ಮ್ಯಾಚ್​ನಲ್ಲಿ ಎರಡು ಸಿಕ್ಸರ್​ಗಳನ್ನು ಬಾರಿಸಿ 12 ರನ್​ಗೆ ಔಟ್​ ಆದ ವೈಭವ್​​, ದುಪ್ಪಟ್ಟು ನಿರೀಕ್ಷೆಯಿಟ್ಟುಕೊಂಡಿದ್ದ ಅಭಿಮಾನಿಗಳಿಗೆ ನಿರಾಶೆ ಮಾಡಿದರು. ಇದನ್ನೇ ಗುರಿಯಾಗಿಸಿ ಮಾತನಾಡಿರುವ ಆಕಾಶ್​ ಚೋಪ್ರಾ, ಸಂಜು ಸ್ಯಾಮ್ಸನ್​, ಅಭಿಷೇಕ್ ಶರ್ಮ ಮತ್ತು ಇಶಾನ್​ ಕಿಶನ್​ರನ್ನು ಆಡಿಸಲೇಬೇಡಿ ಎಂದಿದ್ದಾರೆ.
ಟೀಮ್ ಮ್ಯಾನೇಜ್​ಮೆಂಟ್ ನ್ಯಾಯದಲ್ಲಿ ನಂಬಿಕೆ ಇಟ್ಟಿದಿದ್ದರೆ, ಖಂಡಿತ ಸಂಜು ಸ್ಯಾಮ್ಸನ್‌ಗೆ ಇನ್ನೊಂದು ಪಂದ್ಯದಲ್ಲಿ ಅವಕಾಶ ಕೊಡುತ್ತಿತ್ತು. ಆದರೆ, ಸ್ಯಾಮ್ಸನ್ ಬದಲಿಗೆ ಸೂರ್ಯವಂಶಿ ಆಯ್ಕೆಯಾದರು ಮತ್ತು ಮ್ಯಾಂಚೆಸ್ಟರ್‌ನಲ್ಲಿ ಅಭಿಷೇಕ್ ಶರ್ಮಾ ಜೊತೆಗೆ ಓಪನಿಂಗ್ ಆಡಿದರು. ಇಲ್ಲಿ ವೈಭವ್​ಗೆ ಸ್ಥಾನವನ್ನು ಕೊಡುವ ಮೂಲಕ ನಿರ್ಧಾರ ತೆಗೆದುಕೊಳ್ಳುವವರು ಸ್ಯಾಮ್ಸನ್‌ಗೆ ನ್ಯಾಯ ಒದಗಿಸಲಿಲ್ಲ ಎಂದು ಆಕಾಶ್ ಚೋಪ್ರಾ ಕಿಡಿಕಾರಿದ್ದಾರೆ.
"ವೈಭವ್ ಸೂರ್ಯವಂಶಿ ತಮ್ಮ ಚೊಚ್ಚಲ ಪಂದ್ಯವನ್ನಾಡಿದರು ಸರಿ. ಆದರೆ, ಭಾರತೀಯ ತಂಡ ಏನು ಯೋಚಿಸುತ್ತಿದೆ ಅನ್ನೋದು ನನಗೆ ತಿಳಿದಿಲ್ಲ. ಹಿಂದಿನ ಮೂರು ಪಂದ್ಯಗಳಲ್ಲಿ ಸಂಜು ವಿಫಲರಾದರು ಎಂಬುದು ಗೊತ್ತಿದೆ. ಇದೇ ಕಾರಣಕ್ಕೆ, ನೀವು ಅವರನ್ನು ತಂಡದಿಂದ ಕೈಬಿಟ್ಟಿದ್ದೀರಿ. ಇಲ್ಲಿ ಸ್ಯಾಮ್ಸನ್​ರನ್ನು ಆಡಿಸುವ ಬಗ್ಗೆ ಯೋಚನೆಯೇ ಮಾಡಿಲ್ಲ. ನೀವು ನ್ಯಾಯದಲ್ಲಿ ನಂಬಿಕೆ ಇಟ್ಟಿದ್ದರೆ, ಸಂಜು ಇನ್ನೊಂದು ಇನ್ನಿಂಗ್ಸ್​ಗೆ ಅರ್ಹರು ಎಂದು ಹೇಳಿದರು,(ಏಜೆನ್ಸೀಸ್).