RCB vs PBKS: ಇಂದು (ಮೇ.17) ಧರ್ಮಶಾಲಾದಲ್ಲಿ ನಡೆಯುತ್ತಿರುವ ಆರ್ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ 19ನೇ ಆವೃತ್ತಿಯ ಪಂದ್ಯದ ಮೊದಲ ಇನ್ನಿಂಗ್ಸ್ ಮುಕ್ತಾಯಗೊಂಡಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಪಂಜಾಬ್, ರಜತ್ ಪಾಟೀದಾರ್ ಪಡೆಗೆ ಬ್ಯಾಟಿಂಗ್ ಮಾಡುವಂತೆ ಹೇಳಿತು. ಅಂತೆಯೇ, 20 ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ ಆರ್ಸಿಬಿ 222 ರನ್ಗಳನ್ನು ಕಲೆಹಾಕಿತು. ತಂಡದ ಪರ ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ ದೇವದತ್ತ ಪಡಿಕ್ಕಲ್ (45 ರನ್) ಮತ್ತು ವಿರಾಟ್ ಕೊಹ್ಲಿ (55 ರನ್) ಸಿಕ್ಸರ್ ಮತ್ತು ಬೌಂಡರಿಗಳನ್ನು ಬಾರಿಸಿದರು. ಈ ಮೂಲಕ ಪವರ್ಪ್ಲೇನಲ್ಲಿ ಹೆಚ್ಚುವರಿ ರನ್ಗಳನ್ನು ಕಲೆಹಾಕಿದರು.
ಇನ್ನು ಪಡಿಕ್ಕಲ್ ವಿಕೆಟ್ ಬೆನ್ನಲ್ಲೇ ರಜತ್ ಪಾಟೀದಾರ್ ಅಲಭ್ಯತೆ ಕಾರಣ ಕಣಕ್ಕಿಳಿದ ವೆಂಕಟೇಶ್ ಅಯ್ಯರ್, ಪಂಜಾಬ್ ಬೌಲರ್ಗಳನ್ನು ಚೆಂಡಾಡಿದರು. ಕೇವಲ ಸಿಕ್ಸರ್ಗಳಲ್ಲೇ ಡೀಲ್ ಮಾಡಿದ ವೆಂಕಿ, 40 ಎಸೆತಗಳಲ್ಲಿ 73 ರನ್ ಸಿಡಿಸಿದರು. ಇದರಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ಗಳನ್ನು ಬಾರಿಸಿದರು. ಆರ್ಸಿಬಿ ನೀಡಿದ 223 ರನ್ಗಳ ಗುರಿಯನ್ನು ಪಂಜಾಬ್ ಬ್ಯಾಟರ್ಗಳು ಸುಲಭವಾಗಿ ಚೇಸ್ ಮಾಡಲಿದ್ದಾರಾ ಅಥವಾ ವಿಕೆಟ್ ಕಳೆದುಕೊಂಡು ಪಂದ್ಯ ಬಿಟ್ಟುಕೊಡಲಿದ್ದಾರಾ? ಎಂಬುದನ್ನು ದ್ವಿತೀಯ ಇನ್ನಿಂಗ್ಸ್ನಲ್ಲಿ ಕಾದು ನೋಡಬೇಕಿದೆ.