ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಸೂಪರ್ 8 ಪಂದ್ಯ
- ಇಂದಿನಿಂದ ಟಿ20 ವಿಶ್ವಕಪ್ ಸೂಪರ್ 8 ಹಂತದ ಪಂದ್ಯಗಳು
- ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿ
- ಕಡೆಗೂ ಪಂದ್ಯ ರದ್ದು! ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕ
PAK vs NZ: ಇಂದು (ಫೆ.21) ಕೊಲೊಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಸೂಪರ್ 8 ಹಂತದ ಪಂದ್ಯಕ್ಕೆ ಇದೀಗ ವರುಣನ ಅಡಚಣೆಯಿಂದ ಕಡೆಗೂ ರದ್ದಾಗಿದೆ.
ಸೂಪರ್ 8 ಹಂತದ ಮೊದಲ ಪಂದ್ಯದಲ್ಲಿ ಮುಖಾಮುಖಿಯಾದ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಟಾಸ್ ಆಗಿದ್ದು, ಪಾಕ್ ಕ್ಯಾಪ್ಟನ್ ಸಲ್ಮಾನ್ ಅಲಿ ಅಘಾ ಬ್ಯಾಟಿಂಗ್ ಆಯ್ದುಕೊಂಡರು. ಆದರೆ, ಮೊದಲ ಓವರ್ಗೂ ಮುನ್ನವೇ ಮಳೆ ಶುರುವಾಗಿ, ಪಂದ್ಯ ಆರಂಭಕ್ಕೆ ಅಡಚಣೆ ಉಂಟುಮಾಡಿತು. ಇನ್ನೂ ಮಳೆರಾಯನ ಆರ್ಭಟ ನಿಲ್ಲದ ಕಾರಣಕ್ಕೆ ಪಂದ್ಯವನ್ನು ರದ್ದು ಮಾಡಲಾಯಿತು. ಇದರಿಂದ ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕ ನೀಡಲಾಯಿತು.
ಮಳೆಯಿಂದ ಪಾಕ್ ಲಕ್ಕಿ
ನಿರಂತರವಾಗಿ ಸುರಿದ ಮಳೆಯಿಂದ ಪಂದ್ಯವನ್ನು ರದ್ದುಗೊಳಿಸುವುದು ಅನಿವಾರ್ಯ ಹಾಗೂ ಐಸಿಸಿ ನಿಯಮ ಕೂಡ ಅದೇ ಆಗಿತ್ತು. ಮಳೆ ಬರುವುದನ್ನೇ ಕಾಯುತ್ತಿದ್ದ ಪಾಕಿಸ್ತಾನ ಅಭಿಮಾನಿಗಳು, ಕಡೆಗೂ ಒಂದು ಅಂಕ ಸಿಕ್ಕಿತು ಎಂದು ನಿಟ್ಟುಸಿರು ಬಿಟ್ಟಿರುತ್ತಾರೆ ಎಂಬುದರಲ್ಲಿ ಅನುಮಾನವೇ ಇಲ್ಲ. ಅತ್ತ ಡ್ರೆಸ್ಸಿಂಗ್ ರೂಮ್ನಲ್ಲಿ ಮೋಡವನ್ನೇ ನೋಡುತ್ತ ಕುಳಿತಿದ್ದ ಪಾಕ್ ಆಟಗಾರರು, ವರುಣನಿಗೆ ಥ್ಯಾಂಕ್ಯೂ ಎಂದು ಹೇಳಿದ್ದರೆ ಖಂಡತ ಆಶ್ಚರ್ಯವಿಲ್ಲ.