KKR vs DC: ಇಂದು (ಮೇ.08) ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ 19ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಕೋಲ್ಕತ ನೈಟ್ ರೈಡರ್ಸ್ ಸುಲಭ ಗೆಲುವು ಸಾಧಿಸಿತು.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಕೆಕೆಆರ್, ಅಕ್ಷರ್ ಪಡೆಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. 20 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ ಡಿಸಿ ಕೇವಲ 142 ರನ್ ಕಲೆಹಾಕಿತು. ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಕೋಲ್ಕತ ಪಡೆಗೆ, ಕ್ಯಾಪ್ಟನ್ ಅಜಿಂಕ್ಯಾ ರಹಾನೆಯಿಂದ ಉತ್ತಮ ಇನ್ನಿಂಗ್ಸ್ ಬರದೆ ಹೋದರೂ ಫಿನ್ ಆ್ಯಲೆನ್ ಅವರ ಸ್ಫೋಟಕ ಶತಕದಾಟ ಗೆಲುವು ತಂದುಕೊಟ್ಟಿತು.
ಡೆಲ್ಲಿ ಪಡೆಯ ಬೌಲರ್ಗಳನ್ನು ಕಾಡಿದ ಆ್ಯಲೆನ್, ಕೇವಲ 47 ಎಸೆತಗಳಲ್ಲಿ 100 ರನ್ (5 ಬೌಂಡರಿ 10 ಸಿಕ್ಸರ್) ಬಾರಿಸಿದರು. ಈ ಮೂಲಕ ಶತಕ ಗಳಿಸಿ, ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದರು. ಇನ್ನು ಬೌಲಿಂಗ್ನಲ್ಲಿ ಅಕ್ಷರ್ ಪಟೇಲ್ ಒಂದು ವಿಕೆಟ್ ಪಡೆದಿದ್ದು ಬಿಟ್ಟರೆ, ಉಳಿದ ಬೌಲರ್ಗಳು ಅತ್ಯಂತ ಕಳಪೆ ಪ್ರದರ್ಶನ ತೋರಿದರು.