143 ಫುಟ್‌ಬಾಲ್ ಸಂಸ್ಥೆಗಳ ತೀವ್ರ ವಿರೋಧಕ್ಕೆ ಮಣಿದ ಫಿಫಾ: ಷೇರು ಮಾರಾಟ ಯೋಜನೆ ಸ್ಥಗಿತ! 
ಕ್ರಿಕೆಟ್

143 ಫುಟ್‌ಬಾಲ್ ಸಂಸ್ಥೆಗಳ ವಿರೋಧಕ್ಕೆ ಮಣಿದ ಫಿಫಾ: ಷೇರು ಮಾರಾಟ ಯೋಜನೆ ಸ್ಥಗಿತ!

ಜಿನೀವಾ:

ಫಿಫಾ ವಿಶ್ವಕಪ್ ಸೇರಿ ಇತರ ಟೂರ್ನಿ ಆಯೋಜನೆಯ ಷೇರುಗಳಲ್ಲಿ ಶೇ.20 ಖಾಸಗಿಯವರಿಗೆ ಮಾರಾಟ ಮಾಡುವ ಪ್ರಸ್ತಾಪಕ್ಕೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆ ಫಿಫಾ ಅಧ್ಯಕ್ಷ ಗಿಯಾನಿ

ಇನ್‌ಫಾಂಟಿನೋ

ಈ ಯೋಜನೆಯನ್ನು ಕೈ ಬಿಟ್ಟಿದ್ದಾರೆ. ಇನ್‌ಫಾಂಟಿನೋ ಸಲಹೆಗಾರ ಸ್ಯಾಚ್ಸ್ ಬ್ಯಾಂಕರ್, ಫಿಫಾ ವಿಶ್ವಕಪ್ ಟೂರ್ನಿಯ ವೈಟ್ ಹೌಸ್ ಪ್ಯಾನೆಲ್‌ನ ಕಾರ್ಲೋಸ್ ಕೊರ್ಡೆರೊ ರಾಜೀನಾಮೆ ಹಾಗೂ ಏಷ್ಯಾ,ಯುರೋಪ್ ಮತ್ತು ಉತ್ತರ ಅಮೆರಿಕಾ ಸಹಿತ 143 ಫುಟ್‌ಬಾಲ್ ಸಂಸ್ಥೆಗಳ ತೀವ್ರ ವಿರೋಧ ನಂತರ ಈ ಯೋಜನೆಯಿಂದ ಹಿಂದೆಸರಿಯುವುದಾಗಿ ಫಿಫಾ ತಿಳಿಸಿದೆ.


‘ನಮ್ಮ ಉದ್ದೇಶ ಯಾವಾಗಲೂ ಒಗ್ಗೂಡಿಸುವುದು ಮತ್ತು ಸುಧಾರಿಸುವುದು. ಇದು ಯಾವಾಗಲೂ ಇರುತ್ತದೆ. ಆದ್ದರಿಂದ ಈ ಪ್ರಸ್ತಾಪಿತ ಯೋಜನೆಯನ್ನು ಮುಂದುವರಿಸುವುದಿಲ್ಲ’ಎಂದು ಫಿಫಾ ಅಧ್ಯಕ್ಷ ಇನ್‌ಫಾಂಟಿನೋ ತಿಳಿಸಿದ್ದಾರೆ. ಫಿಫಾ ವಿಶ್ವಕಪ್ ಫುಟ್‌ಬಾಲ್‌ಗೆ ಸೇರಿದ್ದು, ಯುರೋಪ್‌ಗೆ ಧ್ವನಿ ಇರುವವರೆಗೆ, ಅದು ಎಂದಿಗೂ ಮಾರಾಟಕ್ಕೆ ಒಪ್ಪುವುದಿಲ್ಲ ಎಂದು ಯೂರೋಪಿಯನ್ ರಾಷ್ಟ್ರಗಳ ಯುಇಎಫ್​ಎ ಒಕ್ಕೂಟ ಫಿಫಾ ನಿರ್ಧಾರವನ್ನು ಸ್ವಾಗತಿಸಿದೆ.
ಷೇರು ಮಾರಾಟಕ್ಕೆ ಆಕ್ರೋಶದ ಬೆನ್ನಲ್ಲೇ ಇನ್‌ಫಾಂಟಿನೋ ಅಧ್ಯಕ್ಷ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದು, 2019 ಮತ್ತು 2023ರಲ್ಲಿ ಅವಿರೋಧವಾಗಿ ಮರು ಆಯ್ಕೆಯಾಗಿದ್ದ ಅವರು, ಅವಧಿಯಲ್ಲಿ 4 ವರ್ಷ ಹುದ್ದೆಯಲ್ಲಿರಬಹುದಾಗಿದೆ. ಫಿಫಾದ ಮುಂದಿನ ಅಧ್ಯಕ್ಷರ ಆಯ್ಕೆ ಚುನಾವಣೆಯೂ 2027ರ ಮಾರ್ಚ್ 18ಕ್ಕೆ ನಿಗದಿಯಾಗಿದ್ದು, ಮುಂಬರುವ ನವೆಂಬರ್ 18ರೊಳಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಬೇಕಿದೆ.