ಕ್ರಿಕೆಟ್

ಕ್ರಿಕೆಟ್ ಲೋಕದ ಅತಿ ವೇಗದ ದ್ವಿಶತಕಗಳು

ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯಲ್ಲಿ ಯುಎಇ ವಿರುದ್ಧ ಕೇವಲ 53 ಎಸೆತಗಳಲ್ಲಿ 204 ರನ್ ಚಚ್ಚುವ ಮೂಲಕ ವೈಭವ್ ಸೂರ್ಯವಂಶಿ ವಿಶ್ವದಾಖಲೆ ಬರೆದಿದ್ದಾರೆ. ಲಿಸ್ಟ್-ಎ (List A) ಕ್ರಿಕೆಟ್ ಇತಿಹಾಸದಲ್ಲಿ ಅತಿ ವೇಗವಾಗಿ ದ್ವಿಶತಕ ಪೂರೈಸಿದ ಟಾಪ್ ಬ್ಯಾಟರ್‌ಗಳ ಪಟ್ಟಿ ಇಲ್ಲಿದೆ.

ವಿಜಯವಾಣಿ ಸುದ್ದಿ ಜಾಲ

ವೈಭವ್ ಸೂರ್ಯವಂಶಿ (53 ಎಸೆತಗಳು)

ನಿನ್ನೆ ದೋಹಾದಲ್ಲಿ ನಡೆದ ಪಂದ್ಯದಲ್ಲಿ ಭಾರತ 'ಎ' ಪರ ಆರಂಭಿಕನಾಗಿ ಕಣಕ್ಕಿಳಿದ ವೈಭವ್, ಯುಎಇ ವಿರುದ್ಧ ಕೇವಲ 53 ಎಸೆತಗಳಲ್ಲಿ 204 ರನ್ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದರು.

ಚಾಡ್ ಬೋವ್ಸ್ (103 ಎಸೆತಗಳು)

ನ್ಯೂಜಿಲೆಂಡ್ ಬ್ಯಾಟರ್ ಚಾಡ್ ಬೋವ್ಸ್, 2024ರ ಅಕ್ಟೋಬರ್ 23 ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ಒಟಾಗೊ ವಿರುದ್ಧ ಕ್ಯಾಂಟರ್ಬರಿ ಪರ 103 ಎಸೆತಗಳಲ್ಲಿ ದ್ವಿಶತಕ ಪೂರೈಸಿದ್ದರು.

ಟ್ರಾವಿಸ್ ಹೆಡ್ (114 ಎಸೆತಗಳು)

ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್, 2021ರ ಅಕ್ಟೋಬರ್ 13 ರಂದು ಅಡಿಲೇಡ್‌ನಲ್ಲಿ ಕ್ವೀನ್ಸ್‌ಲ್ಯಾಂಡ್ ವಿರುದ್ಧ ಸೌತ್ ಆಸ್ಟ್ರೇಲಿಯಾ ನಾಯಕನಾಗಿ ಕೇವಲ 114 ಎಸೆತಗಳಲ್ಲಿ ದ್ವಿಶತಕ ಬಾರಿಸಿದ್ದರು.

ನಾರಾಯಣ್ ಜಗದೀಸನ್ (114 ಎಸೆತಗಳು)

2022ರ ನವೆಂಬರ್ 21 ರಂದು ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಅರುಣಾಚಲ ಪ್ರದೇಶ ವಿರುದ್ಧ 277 ರನ್‌ಗಳ ವಿಶ್ವದಾಖಲೆಯ ಇನ್ನಿಂಗ್ಸ್ ಆಡಿದ್ದ ತಮಿಳುನಾಡು ತಂಡದ ಜಗದೀಶನ್, 114 ಎಸೆತಗಳಲ್ಲಿ 200 ರನ್ ಗಡಿ ದಾಟಿದ್ದರು.

ಹ್ಯಾರಿ ಬ್ರೂಕ್ (114 ಎಸೆತಗಳು)

ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಕಳೆದ ಅಕ್ಟೋಬರ್ 22ರಂದು ರಾವಲ್ಪಿಂಡಿಯಲ್ಲಿ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಕೇವಲ 114 ಎಸೆತಗಳಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದರು.

ಶುಭಮನ್ ಗಿಲ್ (117 ಎಸೆತಗಳು)

ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್, ಕಳೆದ ಸೆಪ್ಟೆಂಬರ್ 30 ರಂದು ಗುವಾಹಟಿಯಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 117 ಎಸೆತಗಳಲ್ಲಿ ದ್ವಿಶತಕ ಪೂರೈಸಿದ್ದರು