2026ರ ಐಪಿಎಲ್ನಿಂದ ಹೊರಗುಳಿದ ಫಾಫ್ ಡು ಪ್ಲೆಸಿಸ್
ಜೊಹಾನ್ಸ್ರ್ಬಗ್: ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ (Faf du Plessis) ಮುಂದಿನ ವರ್ಷದ ಐಪಿಎಲ್ 19ನೇ ಆವೃತ್ತಿಯಿಂದ (IPL) ಹೊರಗುಳಿಯಲು ಮತ್ತು ಅದೇ ಸಮಯದಲ್ಲಿ ನಡೆಯಲಿರುವ ಪಾಕಿಸ್ತಾನ ಸೂಪರ್ ಲೀಗ್ನಲ್ಲಿ (PSL) ಆಡಲು ನಿರ್ಧರಿಸಿದ್ದಾರೆ.
2012ರಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿದ್ದ ಪ್ಲೆಸಿಸ್ ಕಳೆದ 14 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಟೂರ್ನಿ ತಪ್ಪಿಸಿಕೊಳ್ಳಲಿದ್ದಾರೆ. ಮುಂಬರುವ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಗೆ ಹೆಸರು ನೋಂದಾಯಿಸಿಕೊಳ್ಳದಿರಲು 41 ವರ್ಷದ ಪ್ಲೆಸಿಸ್ ನಿರ್ಧರಿಸಿದ್ದಾರೆ. ಆದರೆ ಐಪಿಎಲ್ ಟೂರ್ನಿ ತನ್ನ ವೃತ್ತೀಜಿವನದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದೆ ಎಂದಿದ್ದಾರೆ.
ಅಲ್ಲದೆ ಭವಿಷ್ಯದಲ್ಲಿ ಮತ್ತೆ ಐಪಿಎಲ್ನಲ್ಲಿ ಆಡುವ ಹಂಬಲವನ್ನೂ ವ್ಯಕ್ತಪಡಿಸಿದ್ದಾರೆ. ಐಪಿಎಲ್ನಲ್ಲಿ ಸಿಎಸ್ಕೆ, ಪುಣೆ, ಆರ್ಸಿಬಿ ಪರ ಆಡಿರುವ ಪ್ಲೆಸಿಸ್, ಕಳೆದ ಆವೃತ್ತಿಯಲ್ಲಿ ಡೆಲ್ಲಿ ತಂಡದಲ್ಲಿದ್ದರು.