ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್
- ಇದೇ ಮಾ.28ರಿಂದ ಐಪಿಎಲ್ 19ನೇ ಆವೃತ್ತಿ ಆರಂಭ
- ಐಪಿಎಲ್ ಶುರುವಿನ ಹಿನ್ನೆಲೆ ಆರ್ಆರ್ ಬಗ್ಗೆ ಮಾಜಿ ಕ್ರಿಕೆಟಿಗ ಬಿಚ್ಚುನುಡಿ
- ರಾಜಸ್ಥಾನ ರಾಯಲ್ಸ್ ನಾಯಕ ರಿಯಾನ್ ಪರಾಗ್ ಕುರಿತು ಕ್ರಿಸ್ ಶ್ರೀಕಾಂತ್ ಓಪನ್ ಟಾಕ್
ನವದೆಹಲಿ: ಇದೇ ಮಾ.28ರಿಂದ ಐಪಿಎಲ್ 19ನೇ ಆವೃತ್ತಿ ಆರಂಭವಾಗಲಿದ್ದು, ಮೊದಲ ಪಂದ್ಯವೇ ಆರ್ಸಿಬಿ ಮತ್ತು ಎಸ್ಆರ್ಎಚ್ ನಡುವೆ ನಡೆಯಲಿದೆ. ಈ ಪಂದ್ಯವು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಯಾರಿಗೆ ಮೊದಲ ಗೆಲುವು ಒಲಿಯಲಿದೆ ಎಂಬುದನ್ನು ಕ್ರಿಕೆಟ್ ಪ್ರೇಮಿಗಳು ಬಹಳ ಕಾತರದಿಂದ ಎದುರುನೋಡುತ್ತಿದ್ದಾರೆ. ಈ ಮಧ್ಯೆ, ಟೀಮ್ ಇಂಡಿಯಾದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ಮಾತನಾಡಿ, ರಾಜಸ್ಥಾನ ರಾಯಲ್ಸ್ ತಂಡದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ಮಾತನಾಡಿರುವ ರಿಯಾನ್ ಪರಾಗ್, ಒಂದೊಳ್ಳೆ ಪ್ರದರ್ಶನವಿಲ್ಲ. ಸತತವಾಗಿ ತಂಡದಲ್ಲಿ ಇತರೆ ಆಟಗಾರರಿಗೆ ಉತ್ತಮ ಸಾಥ್ ನೀಡುತ್ತಿಲ್ಲ. ಆದರೂ ಸಹ ಫ್ರಾಂಚೈಸಿಯ ಕ್ಯಾಪ್ಟನ್ ಸ್ಥಾನ ರಿಯಾನ್ ಪರಾಗ್ಗೆ. ಅವರೆಲ್ಲ ಆತನನ್ನು ಕಿಂಗ್ ರೀತಿ ನೋಡಿಕೊಳ್ಳುತ್ತಿದ್ದಾರೆ. ತಂಡದಲ್ಲಿ ಅನುಭವಿ ಆಟಗಾರರ ನಡುವೆಯೂ ರಿಯಾನ್ಗೆ ಫ್ರಾಂಚೈಸಿಯಿಂದ ವಿಶೇಷ ಸಪೋರ್ಟ್ ಸಿಗುತ್ತಿದೆ ಎಂದಿದ್ದಾರೆ.
ಎಲ್ಲರಿಗೂ ಗೊತ್ತಿದೆ ಆತ ಹೇಗೆ ರಾಜಸ್ಥಾನ ರಾಯಲ್ಸ್ ತಂಡದ ಕ್ಯಾಪ್ಟನ್ ಆಗಿದ್ದಾನೆ ಅಂತ. ಇದು ಅಂತಿಮವಾಗಿ ಫ್ರಾಂಚೈಸಿಯ ನಿರ್ಧಾರ. ಕಳೆದ ಆವೃತ್ತಿಯಲ್ಲಿ ಅವರಿಗೆ ಒಳ್ಳೆಯ ಸೀಸನ್ ಆಗಿರಲಿಲ್ಲ. ಮುಖ್ಯವಾಗಿ, ನಾಯಕ ರಿಯಾನ್ಗೆ. 17ನೇ ಆವೃತ್ತಿಯಲ್ಲಿ ಆಡಿದ್ದು ಬಿಟ್ಟರೆ, ಇನ್ನೆಲ್ಲಿಯೂ ಆತನಿಂದ ಉತ್ತಮ ಇನ್ನಿಂಗ್ಸ್ ಅಥವಾ ಪ್ರದರ್ಶನ ಬರಲಿಲ್ಲ ಎಂದು ಹೇಳಿದರು.
"ಇದು ಯೋಗ್ಯ ತಂಡ. ಲೀಗ್ ಸ್ಪರ್ಧೆಯಲ್ಲಿ ಇತರೆ ತಂಡಗಳನ್ನು ಮಣಿಸುವ ಸಾಮರ್ಥ್ಯವನ್ನು ಹೊಂದಿದೆ. ಮತ್ತೊಂದೆಡೆ, ತಮ್ಮನ್ನೇ ನಾಶ ಮಾಡಿಕೊಳ್ಳುವ ತಂಡವು ಇವರದ್ದೇ. ಟಾಪ್ 5ರಲ್ಲಿ ಬಂದರೆ, ಎದುರಾಳಿಗೆ ಟಫ್ ಫೈಟ್ ಕೊಡುತ್ತಾರೆ. ತಂಡಕ್ಕೆ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಜೋಡಿ ದೊಡ್ಡ ಪ್ಲಸ್ ಆಗಿದೆ. ಇವರಿಬ್ಬರೇ ಪಂದ್ಯಗಳನ್ನು ಗೆಲ್ಲಿಸಿಕೊಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೂ ಇವರೇನು ಚಾಂಪಿಯನ್ ಪಟ್ಟ ಪಡೆಯುವ ತಂಡವಲ್ಲ. ಪ್ಲೇಆಫ್ ಅರ್ಹತೆ 50-50 ಅಷ್ಟೇ" ಎಂದು ಕುಟುಕಿ ಮಾತನಾಡಿದ್ದಾರೆ,(ಏಜೆನ್ಸೀಸ್).