ಇಂಗ್ಲೆಂಡ್​ ಟೆಸ್ಟ್​ ತಂಡದ ಹೊಸ ಮುಖ್ಯ ಕೋಚ್​ ರೇಸ್​ನಲ್ಲಿ ಐಪಿಎಲ್​ ಗುರುಗಳು! 
ಕ್ರಿಕೆಟ್

ಇಂಗ್ಲೆಂಡ್​ ಟೆಸ್ಟ್​ ತಂಡದ ಹೊಸ ಮುಖ್ಯ ಕೋಚ್​ ರೇಸ್​ನಲ್ಲಿ ಐಪಿಎಲ್​ ಗುರುಗಳು!

ಲಂಡನ್​: ಬ್ರೆಂಡನ್​ ಮೆಕ್ಕಲಂರಿಂದ ತೆರವಾಗಿರುವ ಟೆಸ್ಟ್​ ತಂಡದ ಮುಖ್ಯ ಕೋಚ್​ ಹುದ್ದೆಗೆ ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿ (ಇಸಿಬಿ) ಕೆಲ ಅಭ್ಯರ್ಥಿಗಳನ್ನು ಪಟ್ಟಿ ಮಾಡಿದ್ದು, ಅದರಲ್ಲಿ ಐಪಿಎಲ್​ನ (IPL) ಹಾಲಿ-ಮಾಜಿ ಕೋಚ್​ಗಳೇ ಹೆಚ್ಚಿದ್ದಾರೆ.

ಆರ್​ಸಿಬಿ ಕೋಚ್​ ಆಂಡಿ ಫ್ಲವರ್​, ಲಖನೌ ಕೋಚ್​ ಜಸ್ಟಿನ್​ ಲ್ಯಾಂಗರ್​, ರಾಜಸ್ಥಾನ ಕೋಚ್​ ಕುಮಾರ ಸಂಗಕ್ಕರ, ಸನ್​ರೈಸರ್ಸ್​ ಮಾಜಿ ಕೋಚ್​ ಟಾಮ್​ ಮೂಡಿ, ಸಿಎಸ್​ಕೆ ಮಾಜಿ ಕೋಚ್​ ಸ್ಟೀಫನ್​ ಫ್ಲೆಮಿಂಗ್​, ಆರ್​ಸಿಬಿ ಮಾಜಿ ಕೋಚ್​ ಮೈಕ್​ ಹೆಸ್ಸನ್​ ಈ ಪಟ್ಟಿಯಲ್ಲಿರುವ ಪ್ರಮುಖರು. ಜತೆಗೆ ಅಫ್ಘಾನಿಸ್ತಾನದ ಮಾಜಿ ಕೋಚ್​ ಜೊನಾಥನ್​ ಟ್ರಾಟ್​, ರಿಚರ್ಡ್​ ಡಾಸನ್​, ಆದಿ ಬಿರೆಲ್​ ಈ ಪಟ್ಟಿಯಲ್ಲಿದ್ದಾರೆ.

ಹೊಸ ಒಪ್ಪಂದದಲ್ಲಿ ಇಸಿಬಿ, ಟೆಸ್ಟ್​ ತಂಡದ ಕೋಚಿಂಗ್​ ಜತೆಜತೆಯಲ್ಲೇ ಐಪಿಎಲ್​ ತಂಡಗಳ ತರಬೇತುದಾರರಾಗಿ ಕಾರ್ಯನಿರ್ವಹಿಸಲು ಕೂಡ ಅವಕಾಶ ಕಲ್ಪಿಸುವ ನಿರೀಕ್ಷೆ ಇದೆ. ಟೀಮ್​ ಇಂಡಿಯಾ ಮಾಜಿ ನಾಯಕ&ಕೋಚ್​ ರಾಹುಲ್​ ದ್ರಾವಿಡ್​ ಕೂಡ ಇಂಗ್ಲೆಂಡ್​ ಟೆಸ್ಟ್​ ತಂಡದ ಕೋಚ್​ ರೇಸ್​ನಲ್ಲಿದ್ದಾರೆ ಎಂದು ವರದಿಯಾಗಿದ್ದರೂ, ಇಸಿಬಿ ಪಟ್ಟಿಯಲ್ಲಿ ಅವರ ಹೆಸರಿಲ್ಲ.