ದುಲೀಪ್​ ಟ್ರೋಫಿ ಫೈನಲ್ ಪಂದ್ಯ ಬೆಂಗಳೂರಿನಿಂದ​ ಚೆನ್ನೈಗೆ ಸ್ಥಳಾಂತರ 
ಕ್ರಿಕೆಟ್

ದುಲೀಪ್​ ಟ್ರೋಫಿ ಫೈನಲ್ ಪಂದ್ಯ ಬೆಂಗಳೂರಿನಿಂದ​ ಚೆನ್ನೈಗೆ ಸ್ಥಳಾಂತರ; ಹೀಗಿದೆ ಕಾರಣ...

ಬೆಂಗಳೂರು: ಮುಂಬರುವ ದೇಶೀಯ ಕ್ರಿಕೆಟ್​ ಋತುವಿನ ಮೊದಲ ಟೂರ್ನಿಯಾಗಿರುವ ದುಲೀಪ್​ ಟ್ರೋಫಿಯ (

Duleep Trophy

) ಫೈನಲ್​ ಪಂದ್ಯವನ್ನು ಬೆಂಗಳೂರಿನಿಂದ ಚೆನ್ನೈ ಎಂ.ಎ. ಚಿದಂಬರಂ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ. ವಲಯವಾರು ತಂಡಗಳ ಪ್ರಥಮ ದರ್ಜೆ ಕ್ರಿಕೆಟ್​ ಟೂರ್ನಿಯ ಆರಂಭಿಕ ಪಂದ್ಯಗಳು ಆಗಸ್ಟ್​ 23ರಿಂದ ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ನಡೆಯಲಿವೆ.


ಬಳಿಕ ಸೆಪ್ಟೆಂಬರ್​ 6ರಿಂದ 10ರವರೆಗೆ ಫೈನಲ್​ ಚೆನ್ನೈನಲ್ಲಿ ನಡೆಯಲಿದ್ದು, ಪಂದ್ಯ ವೀಕ್ಷಿಸಲು ಪ್ರೇಕ್ಷಕರಿಗೂ ಅವಕಾಶ ಕಲ್ಪಿಸಲಾಗುತ್ತದೆ. ಟೂರ್ನಿಯ ಎಲ್ಲ ಪಂದ್ಯಗಳು ನೇರಪ್ರಸಾರ ಕಾಣಲಿವೆ ಎಂದು ಬಿಸಿಸಿಐ ತಿಳಿಸಿದೆ.

ಭೂಮಿ ಮಂಜೂರು ಮಾಡುವಾಗ ಕರ್ನಾಟಕ ಸರ್ಕಾರ ಹೇರಿರುವ ರ್ನಿಬಂಧದಿಂದಾಗಿ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ನಡೆಯುವ ಪಂದ್ಯಗಳಿಗೆ ಪ್ರೇಕ್ಷಕರಿಗೆ ಪ್ರವೇಶವಿರುವುದಿಲ್ಲ. 2 ಕ್ವಾರ್ಟರ್​ಫೈನಲ್​ ಪಂದ್ಯದೊಂದಿಗೆ ಟೂರ್ನಿ ಆರಂಭವಾಗಲಿದ್ದು, ಆ.30ರಿಂದ ಸೆ.2ರವರೆಗೆ 2 ಸೆಮಿಫೈನಲ್​ ಪಂದ್ಯಗಳು ನಡೆಯಲಿವೆ.