ವೈಭವ್ ಸೂರ್ಯವಂಶಿ 
ಕ್ರಿಕೆಟ್

2,50,00,000... ಬಿಹಾರದಲ್ಲಿ ಮನೆ, ಲಕ್ಸುರಿ ಕಾರುಗಳು, 15 ವರ್ಷಕ್ಕೆ ವೈಭವ್ ಸಂಪಾದಿಸಿದ ಆಸ್ತಿ ಮೊತ್ತ ಕೇಳಿದ್ರೆ ದಂಗಾಗ್ತೀರಾ!

ಪ್ರಮುಖ ಮುಖ್ಯಾಂಶಗಳು

  • ಪ್ರಸ್ತುತ, ಐಪಿಎಲ್​ 19ನೇ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ
  • ವೈಭವ್ ಸೂರ್ಯವಂಶಿ ಬ್ಯಾಟಿಂಗ್​ ಅಬ್ಬರಕ್ಕೆ ಕ್ರಿಕೆಟ್​ ಲೋಕವೇ ಮೆಚ್ಚುಗೆ
  • ಕೇವಲ 15 ವರ್ಷಕ್ಕೆ ವೈಭವ್ ಸಂಪಾದಿಸಿರುವ ಆಸ್ತಿ ಮೌಲ್ಯ ಕೇಳಿದ್ರೆ ಹುಬ್ಬೇರುತ್ತೆ
Vaibhav Sooryavanshi: ಐಪಿಎಲ್​ 19ನೇ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಸ್ಫೋಟಕ ಓಪನಿಂಗ್ ಬ್ಯಾಟರ್​ ಆಗಿ ಕಣಕ್ಕಿಳಿಯುತ್ತಿರುವ ಟೀಮ್ ಇಂಡಿಯಾದ ಭವಿಷ್ಯದ ಯುವ ಆಟಗಾರ ವೈಭವ್​ ಸೂರ್ಯವಂಶಿ, ಕೇವಲ 15ನೇ ವಯಸ್ಸಿಗೆ ತಮ್ಮ ಅಬ್ಬರದ ಬ್ಯಾಟಿಂಗ್ ಶೈಲಿಯಿಂದ ಇಡೀ ಕ್ರಿಕೆಟ್​ ಲೋಕವೇ ತನ್ನತ್ತ ತಿರುಗಿ ನೋಡುವಂತೆ ಮಾಡಿರುವುದು ಶ್ಲಾಘನೀಯ ಹಾಗೂ ಪ್ರಶಂಸನೀಯ. ಕೇವಲ ಐಪಿಎಲ್​ ಮಾತ್ರವಲ್ಲ, ಅಂಡರ್​​-19 ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಈತನ ಮಿಂಚಿನ ಆಟ ಕ್ರಿಕೆಟ್​ ಪ್ರೇಮಿಗಳನ್ನು ಮತ್ತು ಮಾಜಿ ಹಿರಿಯ ಕ್ರಿಕೆಟಿಗರನ್ನು ಸೆಳೆದಿರುವುದು ಗಮನಾರ್ಹ.
ಪ್ರಸ್ತುತ, 19ನೇ ಐಪಿಎಲ್​ ಆವೃತ್ತಿಯಲ್ಲಿ ಆರ್​​ಆರ್​ ತಂಡಕ್ಕೆ ಅತ್ಯುತ್ತಮ ಓಪನಿಂಗ್ ಬ್ಯಾಟರ್​ ಆಗಿರುವ ವೈಭವ್ ಸೂರ್ಯವಂಶಿ, ಅಂತಾರಾಷ್ಟ್ರೀಯ ಹಾಗೂ ಅನುಭವಿ ಬೌಲರ್​ಗಳಿಗೆ ಮೈದಾನದಲ್ಲಿ ಬೆಂಡುತ್ತುತ್ತಿರುವ ದೃಶ್ಯಗಳನ್ನು ಕಂಡು ಅನೇಕರ ಬೆರಗಾಗಿದ್ದಾರೆ. ಕೇವಲ 15ನೇ ವಯಸ್ಸಿಗೆ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿರುವ ಸೂರ್ಯವಂಶಿ, ಈಗಾಗಲೇ ಹಲವಾರು ಜಾಹೀರಾತುಗಳಿಗೆ ಸಹಿ ಮಾಡಿದ್ದಾರೆ. ಇದರಿಂದ ಅವರ ಒಟ್ಟು ಆಸ್ತಿ ಮೌಲ್ಯ ದುಪ್ಪಟ್ಟಾಗಿದೆ.     
ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಯುಗದ ಭರವಸೆಯನ್ನು ಹುಟ್ಟುಹಾಕಿರುವ ಬೇಬಿ ಬಾಸ್​, ಕಿರಿಯ ವಯಸ್ಸಿನಲ್ಲಿ ಜಾಗತಿಕವಾಗಿ ಹೆಸರು ಮಾಡಿರುವ ಭಾರತೀಯ ಪ್ರತಿಭೆ. ಈಗ ತಾನೇ ಬೆಳೆಯುತ್ತಿರುವ ವೈಭವ್​, ಅದಾಗಲೇ ಬಹುಕೋಟಿ ಸಂಪತ್ತನ್ನು ಹೊಂದಿರುವುದು ಸದ್ಯ ಹಲವರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ. ವರದಿಗಳ ಪ್ರಕಾರ, ಸೂರ್ಯವಂಶಿ ಬಳಿ 2.5 ಕೋಟಿ ರೂ. ನಿವ್ವಳ ಮೌಲ್ಯ ಆಸ್ತಿಯಿದೆ.
ರಾಜಸ್ಥಾನ್ ರಾಯಲ್ಸ್‌ನಿಂದ ಬರುವ ಐಪಿಎಲ್ ಸಂಬಳ, ಅಂಡರ್​-19 ತಂಡದಲ್ಲಿ ಆಡಿದ್ದಕ್ಕೆ ಮತ್ತು ಹಲವು ಜಾಹೀರಾತುಗಳಿಂದ ಬಂದ ಸಂಪಾದನೆಯಿಂದ ಭವಿಷ್ಯಕ್ಕೆ ಬೇಕಾಗುವ ಹಣವನ್ನು ಈಗಿನಿಂದಲೇ ಕೂಡಿಡುವ ಕೆಲಸದಲ್ಲಿ ವೈಭವ್ ಸಖತ್ ಬಿಜಿಯಾಗಿದ್ದಾರೆ. ಬೇಬಿ ಬಾಸ್​ ಬಳಿ ಟಾಟಾ ಕರ್ವ್ ಇವಿ ಮತ್ತು ಮರ್ಸಿಡಿಸ್ ಬೆನ್ಜ್‌ನಂತಹ ಐಷಾರಾಮಿ ಕಾರುಗಳಿವೆ. ಮತ್ತು ಸಂಭಾವ್ಯ ಮುಂಬೈ ರಿಯಲ್ ಎಸ್ಟೇಟ್ ಹೂಡಿಕೆಗಳೊಂದಿಗೆ, ಅವರ ಆರ್ಥಿಕತೆ ಇನ್ನಷ್ಟು ಗಟ್ಟಿಯಾಗಿದೆ. ಇದರೊಟ್ಟಿಗೆ ಅವರ ಬಳಿ ಹಲವಾರು ದುಬಾರಿ ಉಡುಗೊರೆಗಳು ಕೂಡ ಇವೆ ಎಂದು ವರದಿಯಾಗಿದೆ.