RCB vs MI ಪಂದ್ಯದಲ್ಲಿ ಅಭಿಮಾನಿಯೊಬ್ಬನ ದೃಶ್ಯ ಸೆರೆ
- ಆರ್‌ಸಿಬಿ ವಿರುದ್ಧ ಪಂದ್ಯ ಸೋತ ಮುಂಬೈ ಇಂಡಿಯನ್ಸ್
- ತಮ್ಮ ತಂಡ ಸೋಲುತ್ತಿದ್ದರೂ ಬೇಸರವಿಲ್ಲದೆ ಕುಳಿತ ಅಭಿಮಾನಿ
- ಮುಖದ ಬಗ್ಗೆ ಆತನ ಕೇರಿಂಗ್ ನೋಡಿ ನೆಟ್ಟಿಗರು ಶಾಕ್
RCB vs MI: ನಿನ್ನೆ (ಏ.12) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಮುಂಬೈ ಇಂಡಿಯನ್ಸ್ (ಎಂಐ) ನಡುವಿನ ಐಪಿಎಲ್ 19ನೇ ಆವೃತ್ತಿಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 18 ರನ್‌ಗಳಿಂದ ಸೋಲುಂಡಿತು. ತವರಿನಲ್ಲೇ ಕಳಪೆ ಪ್ರದರ್ಶನದಿಂದ ಎಂಐ ತಂಡ ಭಾರೀ ಮುಖಭಂಗ ಅನುಭವಿಸಿತು. ತಮ್ಮ ನೆಚ್ಚಿನ ತಂಡವನ್ನು ಹುರಿದುಂಬಿಸಲು ಸ್ಟೇಡಿಯಂನಲ್ಲಿ ಕುಳಿತಿದ್ದ ಫ್ಯಾನ್ಸ್, ಅಯ್ಯೋ ಗೆಲುವು ನಮ್ಮಿಂದ ಕೈತಪ್ಪಿತೇ ಎಂದು ಬೇಸರದಲ್ಲಿದ್ದರೆ, ಅಲ್ಲೊಬ್ಬ ಅಪ್ಪಟ ಮುಂಬೈ ಇಂಡಿಯನ್ಸ್ ಅಭಿಮಾನಿಯೊಬ್ಬ ಮಾಡುತ್ತಿದ್ದ ಕೆಲಸ ಕಂಡು ಹಲವರು ಹುಬ್ಬೇರಿಸಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ನಿಗದಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳ ನಷ್ಟಕ್ಕೆ 240 ರನ್ ಗಳಿಸಿತು. ಈ ಬೃಹತ್ ರನ್ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡದ ಆರಂಭಿಕ ಬ್ಯಾಟರ್ಗಳಾದ ರೋಹಿತ್ ಶರ್ಮ ಮತ್ತು ರಿಕಲ್ಟನ್ ಜೋಡಿ, ಪವರ್ಪ್ಲೇಯ ಮೊದಲ ಮೂವರು ಓವರ್ನಲ್ಲಿ ಭರ್ಜರಿ ಓಪನಿಂಗ್ ನೀಡಿದ್ದೇ ಆದರೂ, ಅದನ್ನು ಮುಂದುವರಿಸಿಕೊಂಡು ಹೋಗುವಲ್ಲಿ ವಿಫಲವಾಯಿತು. 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 222 ರನ್‌ಗಳನ್ನು ಗಳಿಸಲಷ್ಟೇ ಸಾಧ್ಯವಾಯಿತು. ಈ ಮೂಲಕ ಆರ್‌ಸಿಬಿ 18 ರನ್‌ಗಳಿಂದ ಗೆಲುವು ದಾಖಲಿಸಿತು.
ಈ ಪಂದ್ಯವನ್ನು ಬಹಳ ಗಂಭೀರವಾಗಿ ನೋಡುತ್ತಿದ್ದ ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ಅಭಿಮಾನಿಗಳು, ಎಂದಿನಂತೆ ತಮ್ಮ ನೆಚ್ಚಿನ ತಂಡಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ದ್ವಿತೀಯ ಇನ್ನಿಂಗ್ಸ್ನ 15ನೇ ಓವರ್ನಲ್ಲಿ ಮುಂಬೈ ಇಂಡಿಯನ್ಸ್ ಫ್ಯಾನ್ಸ್ಗೆ ಗೆಲುವಿನ ಭರವಸೆ ಹೋಯಿತು. ಹೀಗಾಗಿ, ಬಹಳ ಬೇಸರದಿಂದ ಕುಳಿತಿದ್ದರು. ಆದರೆ, ಇಲ್ಲೊಬ್ಬ ಅಪ್ಪಟ ಮುಂಬೈ ಅಭಿಮಾನಿ, ತನ್ನ ಆರ್‌ಸಿಬಿ ಜೆರ್ಸಿ ಧರಿಸಿದ್ದ ಸ್ನೇಹಿತನೊಂದಿಗೆ ಕುಳಿತು, ಮುಖಕ್ಕೆ ಗ್ಲೋಯಿಂಗ್ ಮಾಸ್ಕ್ ಹಚ್ಚಿಕೊಳ್ಳುತ್ತಿರುವುದು ಮತ್ತೊಬ್ಬರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮುಖದ ತ್ವಚೆ ಬಿಸಿಲಿನಿಂದ ಹಾಳಾಗಬಹುದು ಎಂಬ ಮುನ್ನೆಚ್ಚರಿಕೆಯಿಂದ ಸ್ಕಿನ್ ಕೇರ್ಗೆ ಹೆಚ್ಚು ಒತ್ತು ಕೊಟ್ಟಿರುವ ಈತ, ಯಾರಾದರೂ ಸೋಲಲಿ, ಗೆಲ್ಲಲಿ ನನಗೇನು? ನನ್ನ ಮುಖ ಚೆನ್ನಾಗಿ ಕಂಡರೆ ಸಾಕು ಎನ್ನುವ ರೀತಿ, ಜೆಲ್ ಹಚ್ಚಿಕೊಳ್ಳುತ್ತಿರುವುದು ಕಂಡುಬಂದಿದೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಅಸಲಿಗೆ, ಕ್ಯಾಮರಾಮ್ಯಾನ್ಗಳು ಸೂಕ್ಷ್ಮವಾಗಿ ಸ್ಟೇಡಿಯಂನಲ್ಲಿರುವ ಅಭಿಮಾನಿಗಳನ್ನು ಸೆರೆಹಿಡಿಯಲು ಮುಂದಾದರೆ, ಇಂತಹ ಹಲವು ದೃಶ್ಯಗಳು ಕಾಣಸಿಗುತ್ತವೆ ಎಂಬುದರಲ್ಲಿ ಸಂದೇಹವಿಲ್ಲ.