ವೈರಲ್ ಆದ ಹಾರ್ದಿಕ್-ಮಹಿಕಾ ಫೋಟೋ
- ಹಾರ್ದಿಕ್ ಪಾಂಡ್ಯ ಮತ್ತು ಪ್ರೇಯಸಿ ಮಹಿಕಾ ಶರ್ಮಾ ಗುಟ್ಟಾಗಿ ಮದುವೆ?
- ವೈರಲ್ ಫೋಟೋದಲ್ಲಿ ಮದುವೆಯಾದಂತೆ ಕಾಣಿಸಿದ ಸ್ಟಾರ್ ಜೋಡಿ
Hardik Pandya: ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಯ ತಂಡಗಳಲ್ಲಿ ಅವಕಾಶ ಪಡೆಯದ ಹಾರ್ದಿಕ್ ಪಾಂಡ್ಯ, ಕಳೆದ ಐಪಿಎಲ್ನಿಂದ ಅದ್ಯಾಕೋ ವಿಪರೀತ ಬ್ಯಾಡ್ ಲಕ್ಗಳನ್ನು ಎದುರಿಸುತ್ತಿದ್ದಾರೆ. ಯಾರ ಕಣ್ಣಿಗೂ ಬೀಳದಂತೆ ಸುಮ್ಮನಿದ್ದ ಹಾರ್ದಿಕ್, ಇದೀಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪ್ರೇಯಸಿ ಮಹಿಕಾ ಶರ್ಮ ಜೊತೆಗಿನ ಫೋಟೋದಿಂದ ಮುನ್ನೆಲೆಗೆ ಬಂದಿದ್ದಾರೆ.
ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೋವನ್ನು ಗಮನಿಸಿದರೆ, ಅದರಲ್ಲಿ ಹಾರ್ದಿಕ್ ಮತ್ತು ಮಹಿಕಾ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದರಲ್ಲಿ, ಕುತೂಹಲ ಕೆರಳಿಸುತ್ತಿರುವುದು ಮಹಿಕಾ ಹಣೆಯ ಮೇಲಿರುವ ಸಿಂಧೂರ. ಈ ಫೋಟೋ ಹೊರಬೀಳುತ್ತಿದ್ದಂತೆ ನೆಟ್ಟಿಗರು ಇಬ್ಬರಿಗೂ ಮದುವೆಯಾಗಿದೆ. ಹೀಗಾಗಿ, ಗುರು ಹಿರಿಯರ ಆರ್ಶಿವಾದ ಪಡೆದಿದ್ದಾರೆ. ಮತ್ತು ಮಹಿಕಾರನ್ನು ನೋಡಿದ್ರೆ, ಇಬ್ಬರಿಗೂ ವಿವಾಹವಾದಂತೆ ಕಾಣಿಸುತ್ತಿದೆ ಎಂದು ಊಹಿಸಿದ್ದಾರೆ.
ನಿಜಕ್ಕೂ ಗುಟ್ಟಾಗಿ ಮದುವೆಯಾದ್ರಾ?
ಅಸಲಿಗೆ, ಹಾರ್ದಿಕ್ ಪಾಂಡ್ಯ ಅಥವಾ ಮಹಿಕಾ ಆಗಲಿ, ಎಲ್ಲಿಯೂ ಅಧಿಕೃತವಾಗಿ ಈ ಫೋಟೋವನ್ನು ಹಂಚಿಕೊಂಡಿಲ್ಲ. ಇದು ಕೇವಲ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್ ಆಗಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದೊಂದು ಎಐ ಟೆಕ್ನಾಲಜಿ ಸಹಾಯದಿಂದ ಸೃಷ್ಟಿಸಿರುವ ಫೋಟೋವೋ ಇರಬಹುದು.
ಪಾಂಡ್ಯ-ಮಹಿಕಾ ಲವ್ ಸ್ಟೋರಿ
ಹಾರ್ದಿಕ್ ಪಾಂಡ್ಯ ಮತ್ತು ಮಾಹಿಕಾ ಶರ್ಮಾ ಮೊದಲ ಬಾರಿಗೆ ಅಕ್ಟೋಬರ್ 2025ರಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡ ಮರುದಿನವೇ ಇವರ ಡೇಟಿಂಗ್ ವದಂತಿಗಳು ಕಾಡ್ಗಿಚ್ಚಿನಂತೆ ಜಾಲತಾಣಗಳಲ್ಲಿ ಹಬ್ಬಿತು. ಹಾರ್ದಿಕ್ ತನ್ನ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದ ಬೆನ್ನಲ್ಲೇ ಇವರಿಬ್ಬರ ನಡುವಿನ ಲವ್ವಿ-ಡವ್ವಿ ಬೆಳಕಿಗೆ ಬಂದಿತು,(ಏಜೆನ್ಸೀಸ್).