ಬದಲಾಯ್ತು ಸಹೋದರರ ವರ್ತನೆ... ಕೃನಾಲ್-ಹಾರ್ದಿಕ್ ಸಂಬಂಧಕ್ಕೆ ಹುಳಿ ಹಿಂಡಿದ ಮಹಿಕಾ ಶರ್ಮಾ?! Hardik Pandya
- ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ನಡುವೆ ವೈಯಕ್ತಿಕ ಕಾರಣಗಳಿಂದಾಗಿ ಬಿರುಕು ಮೂಡಿದೆ ಎಂಬ ವದಂತಿ
- ಏಪ್ರಿಲ್ 12ರ ಮುಂಬೈ-ಆರ್ಸಿಬಿ ಪಂದ್ಯದಲ್ಲಿ ಇಬ್ಬರೂ ಪರಸ್ಪರ ಮಾತನಾಡದೆ ಅಂತರ ಕಾಯ್ದುಕೊಂಡಿದ್ದು ಅನುಮಾನ ಮೂಡಿಸಿದೆ
- ಹಾರ್ದಿಕ್ ಔಟಾದಾಗ ಕೃನಾಲ್ ಅತಿಯಾಗಿ ಸಂಭ್ರಮಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
- ಹಾರ್ದಿಕ್ ಅವರ ಹೊಸ ವೈಯಕ್ತಿಕ ಸಂಬಂಧ ಹಾಗೂ ಐಷಾರಾಮಿ ಖರ್ಚುಗಳ ಬಗ್ಗೆ ಕೃನಾಲ್ಗೆ ಅಸಮಾಧಾನ ಎಂಬ ವದಂತಿ
Hardik Pandya : ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಅವರ ಸಹೋದರ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯ ನಡುವೆ ಬಿರುಕು ಮೂಡಿದೆ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರಲ್ಲೂ ಕಳೆದ ಭಾನುವಾರ (ಏಪ್ರಿಲ್ 12) ನಡೆದ ಮುಂಬೈ ಮತ್ತು ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಔಟಾದ ಬೆನ್ನಲ್ಲೇ ಕೃನಾಲ್ ಮಾಡಿದ ಸಂಭ್ರಮಾಚರಣೆಯ ಬಳಿಕ ಈ ವದಂತಿಗಳು ಜೋರಾಗಿವೆ.
ಸಾಮಾನ್ಯವಾಗಿ ಮೈದಾನದಲ್ಲಿ ಎದುರಾಳಿ ತಂಡಗಳ ಪರ ಆಡುವಾಗಲೂ ತುಂಬಾ ಸ್ನೇಹಪರ ಮತ್ತು ಪ್ರೀತಿಯಿಂದ ವರ್ತಿಸುವ ಈ ಇಬ್ಬರೂ ಸಹೋದರರು ಭಾನುವಾರದ ಪಂದ್ಯದ ಸಮಯದಲ್ಲಿ ಅಂತರ ಕಾಯ್ದುಕೊಂಡಿದ್ದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಒಬ್ಬರಿಗೊಬ್ಬರು ಮಾತನಾಡುತ್ತಿದ್ದರು. ಆದರೆ, ಆ ದೃಶ್ಯವೂ ಕೂಡ ಭಾನುವಾರ ಕಾಣಲಿಲ್ಲ. ಹೀಗಾಗಿ, ವದಂತಿಗಳು ತೀವ್ರ ಸ್ವರೂಪ ಪಡೆದುಕೊಂಡಿವೆ.
ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಕೇವಲ 22 ಎಸೆತಗಳಲ್ಲಿ 40 ರನ್ ಗಳಿಸಿ ನಿರ್ಣಾಯಕ ಹಂತದಲ್ಲಿ ಹಾರ್ದಿಕ್ ಪಾಂಡ್ಯ ಔಟಾದರು. ಇದರ ಪರಿಣಾಮ ಮುಂಬೈ ತಂಡವು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಹಾರ್ದಿಕ್ ಔಟಾದಾಗ ಅವರ ಸಹೋದರ ಕೃನಾಲ್ ಪಾಂಡ್ಯ ಅತಿಯಾಗಿ ಸಂಭ್ರಮಿಸಿದರು.
ಇನ್ನಿಂಗ್ಸ್‌ನ 15ನೇ ಓವರ್‌ನಲ್ಲಿ ಜಾಕೋಬ್ ಡಫಿ ಬೌಲಿಂಗ್‌ನಲ್ಲಿ ಹಾರ್ದಿಕ್ ಶಾಟ್ ಆಡಿದರು. ಈ ವೇಳೆ ಚೆಂಡು ಗಾಳಿಯಲ್ಲಿ ಹಾರಿ ರೊಮಾರಿಯೊ ಶೆಫರ್ಡ್ ಕೈಸೇರಿತು. ನಿರ್ಣಾಯಕ ಹಂತದಲ್ಲಿ ಹಾರ್ದಿಕ್ ವಿಕೆಟ್ ಬೀಳುತ್ತಿದ್ದಂತೆ ಕೃನಾಲ್ ಪಾಂಡ್ಯ ಅವರು ಶೆಫರ್ಡ್ ಕಡೆಗೆ ಓಡಿ ಬಂದು ಸಂತೋಷದಿಂದ ಜಿಗಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಾಸ್ತವವಾಗಿ ಹಾರ್ದಿಕ್ ವಿಕೆಟ್ ಬಿದ್ದಾಗ ಕೃನಾಲ್ ಸಂಭ್ರಮಿಸುವುದಿಲ್ಲ. ಬದಲಾಗಿ, ಹಾರ್ದಿಕ್ ಔಟ್ ಆದಾಗ ಅವರ ಬಳಿಗೆ ಓಡಿ ಬಂದು ಸಾಂತ್ವನ ಹೇಳುವಂತಹ ಅನೇಕ ಘಟನೆಗಳು ಈ ಹಿಂದೆ ನಡೆದಿವೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಇಬ್ಬರ ನಡುವಿನ ಸಂಬಂಧ ಅಷ್ಟೊಂದು ಚೆನ್ನಾಗಿಲ್ಲ ಎಂದು ವರದಿಗಳು ಸೂಚಿಸುತ್ತವೆ. ತಮ್ಮ ಪತ್ನಿ ನತಾಶಾ ಸ್ಟಾಂಕೋವಿಕ್ ಅವರಿಂದ ಬೇರ್ಪಟ್ಟ ನಂತರ, ಹಾರ್ದಿಕ್ ಮಹಿಕಾ ಶರ್ಮಾ ಜೊತೆ ಸಂಬಂಧ ಬೆಳೆಸಿದ್ದಾರೆ. ಈ ಸಂಬಂಧದ ಬಗ್ಗೆ ಕೃನಾಲ್ಗೆ ಅಸಮಾಧಾನ ಇದೆ ಎನ್ನಲಾಗಿದೆ. ಹೀಗಾಗಿ ಇಬ್ಬರೂ ಬೇರ್ಪಟ್ಟಿದ್ದಾರೆ ಎಂಬ ವದಂತಿಗಳಿವೆ.
ಅಂದಹಾಗೆ, ಹಾರ್ದಿಕ್ ಪಾಂಡ್ಯ ಮಹಿಕಾಗೆ ಕೋಟಿಗಟ್ಟಲೆ ಖರ್ಚು ಮಾಡುತ್ತಿದ್ದಾರೆ. ಅಲ್ಲದೆ, ತನ್ನ ಗೆಳತಿಗೆ ಐಷಾರಾಮಿ ಉಡುಗೊರೆಗಳನ್ನು ನೀಡುವುದು ಹಾರ್ದಿಕ್ಗೆ ಅಭ್ಯಾಸವಾಗಿದೆ. ಸಹೋದರನ ಈ ನಡೆಯಿಂದ ಕೃನಾಲ್ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಸಾಕಷ್ಟು ವದಂತಿಗಳು ಹರಿದಾಡುತ್ತಿದ್ದರೂ ಪಾಂಡ್ಯ ಸಹೋದರರು ಮಾತ್ರ ಈ ವಿಷಯದ ಬಗ್ಗೆ ಈವರೆಗೂ ಪ್ರತಿಕ್ರಿಯಿಸಿಲ್ಲ, (ಏಜೆನ್ಸೀಸ್).