ಧೋನಿ ಈ ಬಾರಿ ಐಪಿಎಲ್ನಲ್ಲಿ ಸಿಎಸ್ಕೆ ಪರ ಎಲ್ಲ ಪಂದ್ಯ ಆಡುವುದು ಡೌಟ್!
ಅಹಮದಾಬಾದ್: ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್-ಬ್ಯಾಟರ್ ಎಂಎಸ್ ಧೋನಿ (MS Dhoni) ಮುಂಬರುವ ಐಪಿಎಲ್ನಲ್ಲಿ (IPL) ಚೆನ್ನೈ ಸೂಪರ್ಕಿಂಗ್ಸ್ (Chennai Super Kings) ತಂಡದ ಪರ ಆಡಲು ಲಭ್ಯರಿದ್ದಾರೆ. ಆದರೆ ಅವರು ಟೂರ್ನಿಯ ಎಲ್ಲ ಪಂದ್ಯಗಳಲ್ಲಿ ಕಣಕ್ಕಿಳಿಯುವುದು ಅನುಮಾನವೆನಿಸಿದೆ ಎಂದು ವರದಿಯಾಗಿದೆ.
ಧೋನಿ ಮುಂದಿನ ಜುಲೈನಲ್ಲಿ 45ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಐಪಿಎಲ್ 19ನೇ ಆವೃತ್ತಿಗೆ ಲಭ್ಯವಿರುವುದನ್ನು ಧೋನಿ ಈಗಾಗಲೆ ಖಚಿತಪಡಿಸಿದ್ದಾರೆ. ಆದರೆ ಕೇರಳದ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ರಾಜಸ್ಥಾನ ರಾಯಲ್ಸ್ನಿಂದ ಸಿಎಸ್ಕೆಗೆ ವರ್ಗಾವಣೆಗೊಂಡಿರುವುದರಿಂದ ಧೋನಿ ಎಲ್ಲ 14 ಲೀಗ್ ಪಂದ್ಯಗಳಲ್ಲೂ ಆಡುವ ಸಾಧ್ಯತೆ ಇಲ್ಲ. ಧೋನಿ ಎಲ್ಲ ಪಂದ್ಯಗಳಲ್ಲಿ ಆಡುವ ಬಗ್ಗೆ ಈಗಲೇ ಖಾತ್ರಿ ನೀಡಲಾಗದು ಎಂದು ಸಿಎಸ್ಕೆ ಮೂಲಗಳು ತಿಳಿಸಿವೆ.
ಸಿಎಸ್ಕೆ ಸದ್ಯ ಮೂವರು ವಿಕೆಟ್ ಕೀಪರ್ಗಳನ್ನು ಹೊಂದಿದೆ. ಧೋನಿ, ಸ್ಯಾಮ್ಸನ್ ಜತೆಗೆ ಊರ್ವಿಲ್ ಪಟೇಲ್ ಕೂಡ ಕೀಪರ್ ಆಗಿದ್ದಾರೆ. ಧೋನಿ ಮೊಣಕಾಲು ಮತ್ತು ಬೆನ್ನುನೋವಿನ ಸಮಸ್ಯೆ ಹೊಂದಿದ್ದು, ಈಗಿನ ವಯಸ್ಸಿನಲ್ಲಿ ವಿಕೆಟ್ ಕೀಪಿಂಗ್ ನಿರ್ವಹಿಸುವುದು ಕಠಿಣ ಸವಾಲೆನಿಸಲಿದೆ. ಆದರೆ ಧೋನಿ ಚೆನ್ನೈನಲ್ಲಿ ಸಿಎಸ್ಕೆ ಪರ ಹೆಚ್ಚಿನ ಪಂದ್ಯಗಳಲ್ಲಿ ಆಡಬಹುದು ಎನ್ನಲಾಗಿದೆ.