- 2020ರಲ್ಲಿ ಆರ್‌ಸಿಬಿ ಮೂಲಕ ಐಪಿಎಲ್‌ಗೆ ಪಾದಾರ್ಪಣೆ
- ಕೆಲವು ವರ್ಷಗಳ ಕಾಲ ಎಲ್‌ಎಸ್‌ಜಿ, ಆರ್‌ಆರ್ ಪರ ಆಡಿದ ಯುವ ಪ್ರತಿಭೆ
- 2024ರ ಹರಾಜಿನಲ್ಲಿ ಆರ್‌ಸಿಬಿಗೆ ಮರಳಿದ ದೇವದತ್ತ
- ಆರ್‌ಸಿಬಿಗೆ ಕಮ್ಬ್ಯಾಕ್ ನನ್ನ ವೃತ್ತಿಜೀವನದ ಮಹತ್ವದ ತಿರುವು ಎಂದ ಪಡಿಕಲ್
RCB: ಐಪಿಎಲ್ 19ನೇ ಆವೃತ್ತಿ ಶುರುವಾಗಿದ್ದು, ಮೊದಲೆರೆಡು ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಭರ್ಜರಿ ಜಯ ಗಳಿಸಿ, ತನ್ನ ಅಭಿಮಾನಿಗಳನ್ನು ತೃಪ್ತಿ ಪಡಿಸಿದೆ. ತನ್ನ ನೆಚ್ಚಿನ ತಂಡಕ್ಕೆ ವಾಪಾಸ್ ಆಗಿರುವ ಯುವ ಆಟಗಾರ ದೇವದತ್ತ ಪಡಿಕಲ್, ಆರ್ಸಿಬಿಯಿಂದ ಕರಿಯರ್ ಆರಂಭಿಸಿ ಈಗ ಮತ್ತದೇ ತಂಡದಲ್ಲಿ ಮಿಂಚುತ್ತಿರುವುದು ಫ್ರಾಂಚೈಸಿಯ ಫ್ಯಾನ್ಸ್ಗಳಿಗೆ ಖುಷಿ ತಂದಿದೆ.
2025ರಲ್ಲಿ ಆರ್‌ಸಿಬಿ ಪರ 50.61 ಸ್ಟ್ರೈಕ್ ರೇಟ್‌ನಲ್ಲಿ 10 ಪಂದ್ಯಗಳಲ್ಲಿ 247 ರನ್ ಗಳಿಸಿದ ದೇವದತ್ತ, 2026ರಲ್ಲಿ, ಇಲ್ಲಿಯವರೆಗೆ ಎರಡು ಪಂದ್ಯಗಳನ್ನು ಆಡಿದ್ದಾರೆ. 201.82 ಸ್ಟ್ರೈಕ್ ರೇಟ್‌ನಲ್ಲಿ 111 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ, ಆರ್ಸಿಬಿಯೊಂದಿಗೆ ತಮ್ಮ ಅವಿನಾಭಾವ ಸಂಬಂಧದ ಬಗ್ಗೆ ಮನಬಿಚ್ಚಿ ಮಾತನಾಡಿರುವ ಅವರು, ತಂಡಕ್ಕೆ ವಾಪಾಸ್ ಆಗಿದ್ದು ನನ್ನ ವೃತ್ತಿಜೀವನದ ಮಹತ್ವದ ತಿರುವು ಎಂದು ಹೇಳಿದ್ದಾರೆ.
"ನಾನು ಎಲ್‌ಎಸ್‌ಜಿ ಪರ ಒಂದು ವರ್ಷ ಆಡಿದೆ. ಆದರೆ, ಆ ಸೀಸನ್ ಅಷ್ಟೊಂದು ಚೆನ್ನಾಗಿರಲಿಲ್ಲ. ಅದು ತುಂಬಾ ಕಷ್ಟಕರವಾಗಿತ್ತು. ಇದೆಲ್ಲವೂ ಹಣದ ಬಗ್ಗೆ ಎಂದು ನನಗನಿಸಿತು. ಒಂದು ಫ್ರಾಂಚೈಸಿ ನಿಮಗೆ ನಿರೀಕ್ಷೆಗಿಂತ ಹೆಚ್ಚಿನ ಹಣವನ್ನು ಪಾವತಿಸಿದಾಗ ಮತ್ತು ನಂಬಿದಾಗ, ನೀವು ಉತ್ತಮವಾಗಿ ಪ್ರದರ್ಶನ ನೀಡದಿದ್ದರೆ ಅವರನ್ನು ನಿರಾಸೆಗೊಳಿಸುತ್ತಿದ್ದೀರಿ ಎಂದರ್ಥ. ನಿಜ ಹೇಳಬೇಕೆಂದರೆ, ಆ ಸಂದರ್ಭದಲ್ಲಿ ನನ್ನ ಬಳಿಯೂ ಯಾವುದೇ ಉತ್ತರವಿರಲಿಲ್ಲ.
ಆರ್‌ಸಿಬಿ ನನ್ನನ್ನು ಮತ್ತೊಮ್ಮೆ ತಂಡಕ್ಕೆ ಸೇರಿಸಿಕೊಂಡ ಹರಾಜು ಮಾತ್ರ ನನಗೆ ವಿಶೇಷವೇ. ಅಲ್ಲಿಯೇ, ನನ್ನ ಕರಿಯರ್ನ ಟರ್ನಿಂಗ್ ಪಾಯಿಂಟ್ ಸಿಕ್ಕಿದ್ದು. ತಂಡಕ್ಕೆ ಏನು ಕೊಡಬೇಕೋ, ಆ ಕೆಲಸಗಳಿಗೆ ಹೆಚ್ಚು ಬದ್ಧನಾಗಿರಬೇಕು ಎಂದು ನಿರ್ಧರಿಸಿದೆ. ನಾನು ಯಾವ ರೀತಿಯ ಕ್ರಿಕೆಟರ್ ಆಗಬೇಕು ಎಂದು ಅಂದುಕೊಂಡಿದ್ದೆ, ಅದಕ್ಕೆ ದಾರಿ ಮಾಡಿಕೊಟ್ಟಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಹೇಳಿಕೊಂಡಿದ್ದಾರೆ,(ಏಜೆನ್ಸೀಸ್).