ಮಹಿಳಾ ಟಿ20 ಏಷ್ಯಾಕಪ್: ಭಾರತ ಗೆಲುವಿನ ಆರಂಭ
ದುಬೈ: ಆರಂಭಿಕ ಬ್ಯಾಟರ್ ಶೆಫಾಲಿ ವರ್ಮ (64 ರನ್, 36 ಎಸೆತ, 8 ಬೌಂಡರಿ, 3 ಸಿಕ್ಸರ್) ಬಿರುಸಿನ ಅರ್ಧಶತಕ ಮತ್ತು ಬೌಲರ್ಗಳ ಬಿಗಿ ದಾಳಿಯ ನೆರವಿನಿಂದ ಭಾರತ ತಂಡ ಮಹಿಳಾ ಟಿ20 ಏಷ್ಯಾಕಪ್ ಟೂರ್ನಿಯ (
) ತನ್ನ ಮೊದಲ ಪಂದ್ಯದಲ್ಲಿ ಥಾಯ್ಲೆಂಡ್ ಎದುರು 94 ರನ್ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
ದುಬೈ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ, ಶೆಫಾಲಿ ಒದಗಿಸಿದ ಬಿರುಸಿನ ಆರಂಭದ ಬಳಿಕ ಮಧ್ಯಮ-ಕೆಳ ಕ್ರಮಾಂಕದ ದಿಢೀರ್ ಕುಸಿತದ ನಡುವೆಯೂ 9 ವಿಕೆಟ್ಗೆ 159 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಪ್ರತಿಯಾಗಿ ಥಾಯ್ಲೆಂಡ್ 16.1 ಓವರ್ಗಳಲ್ಲಿ 65 ರನ್ಗಳಿಗೆ ಆಲೌಟ್ ಆಯಿತು. ನಂದಿನಿ ಶರ್ಮ (18ಕ್ಕೆ 3), ದೀಪ್ತಿ ಶರ್ಮ (0ಗೆ 3) ಮತ್ತು ಶ್ರೀಚರಣಿ (10ಕ್ಕೆ 2) ಕಡಿವಾಣ ಹಾಕಿದರು.
ಲಿ ಆಸರೆ: ಬಿರುಸಿನ ಆಟವಾಡಿ 26 ಎಸೆತಗಳಲ್ಲೇ ಅರ್ಧಶತಕ ಪೂರೈಸಿದ ಶೆಫಾಲಿ, ಮೊದಲ ವಿಕೆಟ್ಗೆ ಸ್ಮೃತಿ ಜತೆಗೆ 18 ಎಸೆತಗಳಲ್ಲೇ 38 ರನ್ ಸೇರಿಸಿದರು. ಬಳಿಕ ಪದಾರ್ಪಣೆ ಪಂದ್ಯವಾಡಿದ ಪ್ರತಿಕಾ ರಾವಲ್ (22) ಜತೆ 2ನೇ ವಿಕೆಟ್ಗೆ 36 ಎಸೆತಗಳಲ್ಲಿ 53 ರನ್ ಕೂಡಿ ಹಾಕಿ ಬೃಹತ್ ಮೊತ್ತದ ನಿರೀಕ್ಷೆ ಮೂಡಿಸಿದರು. ಆದರೆ ಈ ಜತೆಯಾಟ ಬೇರ್ಪಟ್ಟ ಬಳಿಕ ಭಾರತ ದಿಢೀರ್ ಕುಸಿತ ಕಂಡು, 46 ರನ್ ಅಂತರದಲ್ಲಿ 8 ವಿಕೆಟ್ ಕಳೆದುಕೊಂಡಿತು. ಕೊನೆಯಲ್ಲಿ ಕ್ರಾಂತಿ ಗೌಡ್ (15*) ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
ಭಾರತ: 9 ವಿಕೆಟ್ಗೆ 159 (ಸ್ಮೃತಿ 19, ಶೆಫಾಲಿ 64, ಪ್ರತಿಕಾ 22, ಹರ್ಮಾನ್ಪ್ರೀತ್ 5, ಭಾರತಿ 13, ದೀಪ್ತಿ 5, ಕ್ರಾಂತಿ 15*, ಲವೊಮಿ 26ಕ್ಕೆ 3). ಥಾಯ್ಲೆಂಡ್: 16.1 ಓವರ್ಗಳಲ್ಲಿ 65 (ನನ್ನಪತ್ 41, ನಂದಿನಿ 18ಕ್ಕೆ 3, ದೀಪ್ತಿ 0ಗೆ 3, ಶ್ರೀಚರಣಿ 10ಕ್ಕೆ 2).
ಬ್ಯಾಟರ್ ಪ್ರತಿಕಾ ರಾವಲ್ ಥಾಯ್ಲೆಂಡ್ ವಿರುದ್ಧ ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಈಗಾಗಲೆ ಭಾರತ ಪರ ಏಕದಿನ ಮತ್ತು ಟೆಸ್ಟ್ ಪಂದ್ಯಗಳನ್ನು ಆಡಿದ್ದ 25 ವರ್ಷದ ಪ್ರತಿಕಾ, ನಾಯಕಿ ಹರ್ಮಾನ್ಪ್ರೀತ್ ಕೌರ್ರಿಂದ ಟಿ20 ತಂಡದ ಕ್ಯಾಪ್ ಸ್ವೀಕರಿಸಿದರು. ಅವರು ಭಾರತ ಪರ ಟಿ20 ಆಡಿದ 95ನೇ ಆಟಗಾರ್ತಿ ಎನಿಸಿದರು. ಗಾಯದಿಂದಾಗಿ ಹೊರಬಿದ್ದಿರುವ ಜೆಮೀಮಾ ರೋಡ್ರಿಗಸ್ ಬದಲಿಗೆ ಪ್ರತಿಕಾ ಭಾರತ ತಂಡಕ್ಕೆ ಸೇರ್ಪಡೆಯಾಗಿದ್ದರು.