ರೋಹಿತ್ ಶರ್ಮಾ ಕುರಿತು ಸೋಫಿಯಾ ಹಯಾತ್​ ಹೇಳಿಕೆ 
ಕ್ರಿಕೆಟ್

ರೋಹಿತ್​ ಶರ್ಮಾ ಜೊತೆ ಒಂದು ವರ್ಷ ಡೇಟಿಂಗ್​? ಬ್ರೇಕ್​​ಅಪ್​ಗೆ ಕಾರಣವೇನು? ನಟಿ ಸೋಫಿಯಾ ಹಯಾತ್​ ಸ್ಫೋಟಕ ಹೇಳಿಕೆ! Sofia Hayat on Rohit Sharma

ಮುಂಬೈ: ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಆದ ವಿಭಿನ್ನ ಶೈಲಿಯ ಬ್ಯಾಟಿಂಗ್​ ಹಾಗೂ ದಾಖಲೆಗಳ ಮೂಲಕ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರನಾಗಿ ಹೊರಹೊಮ್ಮಿರುವ ರೋಹಿತ್ ಶರ್ಮಾ ಮತ್ತೊಮ್ಮೆ ತಮ್ಮ ವೈಯಕ್ತಿಕ ವಿಚಾರವಾಗಿ ಚರ್ಚೆಗೆ ಗ್ರಾಸವಾಗಿದ್ದಾರೆ.
ಈ ಬಾರಿ ಇಂಗ್ಲಿಷ್ ನಟಿ ಹಾಗೂ ಗಾಯಕಿ ಸೋಫಿಯಾ ಹಯಾತ್ (Sofia Hayat on Rohit Sharma), ರೋಹಿತ್ ಶರ್ಮಾ ಜತೆಗಿನ ತಮ್ಮ ಹಿಂದಿನ ಸಂಬಂಧದ ಕುರಿತು ನೀಡಿರುವ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.
ಮೂಲತಃ ಟಿವಿ ಶೋ ಹಾಗೂ ಬಿಗ್ ಬಾಸ್ 7 ರಿಯಾಲಿಟಿ ಶೋ ಮೂಲಕ ಭಾರತೀಯ ವೀಕ್ಷಕರ ಗಮನ ಸೆಳೆದಿದ್ದ ಸೋಫಿಯಾ, ಹಿಂದೆ ತಾವೊಬ್ಬ ಐಪಿಎಲ್‌ನ "ಲಕ್ಕಿ ಮ್ಯಾಸ್ಕಾಟ್" ಎಂದು ಹೇಳಿಕೊಳ್ಳುವ ಮೂಲಕ ಭಾರಿ ಸುದ್ದಿಯಲ್ಲಿದ್ದರು. ಇದೀಗ ಪಾಡ್‌ಕ್ಯಾಸ್ಟ್ ಒಂದರಲ್ಲಿ ಕಾಣಿಸಿಕೊಂಡಿರುವ ಅವರು ರೋಹಿತ್ ಕುರಿತು ಹಲವು ಹಳೆಯ ನೆನಪುಗಳನ್ನು ಹೊರಹಾಕಿದ್ದಾರೆ.

2012ರ ಡೇಟಿಂಗ್ ದಿನಗಳು!

ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ಸೋಫಿಯಾ ಹಯಾತ್, ತಾವು, ರೋಹಿತ್ ಶರ್ಮಾ ಜೊತೆ 2012ರಲ್ಲಿ ಡೇಟಿಂಗ್ ಮಾಡುತ್ತಿದ್ದೆವು ಎಂದು ಹೇಳಿಕೆ ನೀಡಿದ್ದಾರೆ. ನಮ್ಮ ಈ ಸಂಬಂಧ ಸುಮಾರು ಒಂದು ವರ್ಷದವರೆಗೆ ಮುಂದುವರಿದಿತ್ತು ಎಂದು ಹೇಳಿದ್ದಾರೆ.
ಆ ಸಮಯದಲ್ಲಿ ತಮಗೆ ಕ್ರಿಕೆಟ್ ಬಗ್ಗೆ ಹೆಚ್ಚಿನ ಜ್ಞಾನವಿರಲಿಲ್ಲ ಎಂದಿರುವ ಸೋಫಿಯಾ, ತಮ್ಮ ಮ್ಯಾನೇಜರ್ ಮಾತಿಗೆ ಬೆಲೆ ಕೊಟ್ಟು ತಾನು ಕ್ರಿಕೆಟ್ ಲೋಕದೊಂದಿಗೆ ಗುರುತಿಸಿಕೊಂಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಭಾರತದಲ್ಲಿ ಯೂತ್ ಐಕಾನ್ ಎಂದು ಗುರುತಿಸಿಕೊಳ್ಳಲು ತಮ್ಮ ವಯಸ್ಸಿನ ಬಗ್ಗೆ ಸ್ವಲ್ಪ ಸುಳ್ಳು ಹೇಳಿದ್ದೆ ಎಂದು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಆದರೆ, ಸೋಫಿಯಾ ಅವರ ಈ ಡೇಟಿಂಗ್ ವಿಚಾರವನ್ನು ರೋಹಿತ್ ಶರ್ಮಾ ಇದುವರೆಗೆ ಎಲ್ಲೂ ಸಾರ್ವಜನಿಕವಾಗಿ ದೃಢಪಡಿಸಿಲ್ಲ ಅಥವಾ ಒಪ್ಪಿಕೊಂಡಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಬ್ರೇಕ್‌ಅಪ್‌ಗೆ ಅಸಲಿ ಕಾರಣವೇನು?

ಆದರೆ, ರೋಹಿತ್​ ಶರ್ಮಾ ಮಾಧ್ಯಮಗಳ ಮುಂದೆ ಸೋಫಿಯಾ ಹಯಾತ್ ಕೇವಲ ತಮ್ಮೊಬ್ಬ ಅಭಿಮಾನಿ ಎಂದು ಹೇಳಿರುವುದು ಬ್ರೇಕ್​ಅಪ್​ಗೆ ಕಾರಣ ಎಂದು ಹೇಳಿದ್ದಾರೆ. ರೋಹಿತ್ ಅವರ ಈ ಮಾತಿನಿಂದ ಸೋಫಿಯಾಗೆ ತೀವ್ರ ಬೇಸರ ಹಾಗೂ ನೋವುಂಟಾದ ಕಾರಣ ಸಂಬಂಧ ಮುರಿದು ಬಿದ್ದಿತು ಎಂದಿದ್ದಾರೆ.
ನನ್ನನ್ನು ಪ್ರೀತಿಸಿದ ವ್ಯಕ್ತಿಯೇ ಸಾರ್ವಜನಿಕವಾಗಿ ನನ್ನನ್ನು ಕೇವಲ ಒಬ್ಬ ಫ್ಯಾನ್ ಎಂದು ಕರೆದಿದ್ದು ನನಗೆ ತುಂಬ ನೋವು ತಂದಿತು ಎಂದಿರುವ ಅವರು, ಆ ಬಳಿಕ ಆಕ್ರೋಶಗೊಂಡು ರೋಹಿತ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಬ್ಲಾಕ್ ಮಾಡಿದ್ದಾಗಿ ತಿಳಿಸಿದ್ದಾರೆ.

ರೋಹಿತ್ ಶರ್ಮಾ ಕೌಟುಂಬಿಕ ಜೀವನ

ಹಳೆಯ ಇವೆಲ್ಲಾ ವಿವಾದಗಳು ಒಂದು ಕಡೆಯಾದರೆ, ರೋಹಿತ್ ಶರ್ಮಾ ಪ್ರಸ್ತುತ ತಮ್ಮ ವೈಯಕ್ತಿಕ ಹಾಗೂ ವೃತ್ತಿಜೀವನದಲ್ಲಿ ಅತ್ಯಂತ ಖುಷಿಯಾಗಿದ್ದಾರೆ. 2015ರಲ್ಲಿ ರಿತಿಕಾ ಸಜ್ದೇಹ್ ವಿವಾಹವಾದ ರೋಹಿತ್, 2018ರಲ್ಲಿ ಸಮೈರಾ ಎಂಬ ಮುದ್ದಾದ ಮಗಳು ಹಾಗೂ 2024 ರಲ್ಲಿ ಆಹಾನ್​ ಎಂಬ ಗಂಡು ಮಗುವನ್ನು ಈ ದಂಪತಿ ಪಡೆದಿದ್ದಾರೆ, (ಏಜೆನ್ಸೀಸ್).