ನಮಗೆ ಆರ್ಥಿಕ ಸಹಾಯದ ಅಗತ್ಯವಿದೆ! ಟೀಮ್ ಇಂಡಿಯಾ ಜತೆ ಟಿ20 ಸರಣಿ ಗೆದ್ದ ಬೆನ್ನಲ್ಲೇ ಡ್ಯಾರೆನ್​ ಸ್ಯಾಮಿ ಭಾವುಕ 
ಕ್ರಿಕೆಟ್

ವೆಸ್ಟ್ ಇಂಡೀಸ್​ ಕ್ರಿಕೆಟ್​ಗೆ ಆರ್ಥಿಕ ಸಹಾಯ ಬೇಕಿದೆ! ಟಿ20 ಸರಣಿ ಬೆನ್ನಲ್ಲೇ ಡ್ಯಾರೆನ್​ ಸ್ಯಾಮಿ ಭಾವುಕ | Darren Sammy

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐದನೇ ಟಿ20 ಪಂದ್ಯದಲ್ಲಿ ಗೆಲುವು ಯಾರ ಪಾಲಾಗಲಿದೆ ಎಂಬ ಕುತೂಹಲ ಕ್ರಿಕೆಟ್​ ಪ್ರೇಮಿಗಳಲ್ಲಿ ಮೂಡಿತ್ತು. ಆದರೆ, ವರುಣನ ಅಡ್ಡಿಯಿಂದ ಆರಂಭಗೊಂಡಿದ್ದ ಪಂದ್ಯದ ಮೊದಲ ಇನ್ನಿಂಗ್ಸ್ ಮುಕ್ತಾಯಕ್ಕೂ ಮುನ್ನವೇ ರದ್ದಾಯಿತು.

Darren Sammy: ನಿನ್ನೆಯಷ್ಟೇ (ಅ.17) ಬೆಂಗಳೂರಿನಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್​ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಕೊನೇ ಐವೋಲ್ಟೇಜ್​ ಪಂದ್ಯಕ್ಕೆ ಮಳೆ ಅಡ್ಡಿಯಾದ ಹಿನ್ನೆಲೆ ಮ್ಯಾಚ್​ ರದ್ದಾಯಿತು. 7 ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯವು ಮಳೆಯಿಂದ ತಡವಾಗಿ 9 ಗಂಟೆಗೆ ಶುರುವಾಗಿದ್ದೇ ಆದರೂ ಮೊದಲು ಬ್ಯಾಟಿಂಗ್​ಗಿಳಿದ​ ಟೀಮ್ ಇಂಡಿಯಾ ಇನ್ನಿಂಗ್ಸ್​ ಮುಕ್ತಾಯಕ್ಕೂ ಮುನ್ನವೇ ಪಂದ್ಯ ರದ್ದಾಗಿ, ಎರಡೂ ತಂಡಗಳು ಒಂದೊಂದು ಅಂಕಗಳನ್ನು ಪಡೆದು ಸರಣಿಯನ್ನು ಸಮಬಲಗೊಳಿಸಿತು. ಇದರ ಬೆನ್ನಲ್ಲೇ ವಿಂಡೀಸ್​ ಹೆಡ್​ ಕೋಚ್​ ಡ್ಯಾರೆನ್​ ಸ್ಯಾಮಿ ಭಾವುಕರಾಗಿ ಮಾತನಾಡಿದ್ದಾರೆ.​

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐದನೇ ಟಿ20 ಪಂದ್ಯದಲ್ಲಿ ಗೆಲುವು ಯಾರ ಪಾಲಾಗಲಿದೆ ಎಂಬ ಕುತೂಹಲ ಕ್ರಿಕೆಟ್​ ಪ್ರೇಮಿಗಳಲ್ಲಿ ಮೂಡಿತ್ತು. ಆದರೆ, ವರುಣನ ಅಡ್ಡಿಯಿಂದ ಆರಂಭಗೊಂಡಿದ್ದ ಪಂದ್ಯದ ಮೊದಲ ಇನ್ನಿಂಗ್ಸ್ ಸಂಪೂರ್ಣವಾಗಿ ರದ್ದಾಯಿತು.​ ಇದರಿಂದ ಎರಡೂ ತಂಡಗಳಿಗೂ ತಲಾ ಒಂದೊಂದು ಅಂಕ ಕೊಟ್ಟ ಕಾರಣ, ಟಿ20 ಸರಣಿ ಸಮಬಲಗೊಂಡಿತು. ಹೀಗಾಗಿ, ಟ್ರೋಫಿಯನ್ನು ಭಾರತ ಮತ್ತು ವೆಸ್ಟ್ ಇಂಡೀಸ್​ ತಂಡಗಳಿಗೆ ಹಂಚಿಕೆ ಮಾಡಲಾಯಿತು. ಪಂದ್ಯ ಮುಗಿದ ಬಳಿಕ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡ ವಿಂಡೀಸ್​ ಹೆಡ್​ ಕೋಚ್​, ತಮ್ಮ ತಂಡದ ಪರಿಸ್ಥಿತಿ ನೆನೆದು ಭಾವುಕರಾದರು.

ವೆಸ್ಟ್ ಇಂಡೀಸ್ ಕ್ರಿಕೆಟ್ ಪ್ರಸ್ತುತ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ. ಪ್ರಾಯೋಜಕರು ಮತ್ತು ಹೂಡಿಕೆದಾರರು ತಂಡದ ಪ್ರದರ್ಶನಗಳನ್ನು ಗಮನದಲ್ಲಿಟ್ಟುಕೊಂಡು ಪ್ರೋತ್ಸಾಹಿಸಿದರೆ ನಮಗೆ ನೆರವು ಸಿಗಲಿದೆ. ಜೀವನದಲ್ಲಿ ನಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಜವಾಬ್ದಾರಿ ಇರಬೇಕು ಎಂದು ನನ್ನ ತಾಯಿ ಆಗಾಗ್ಗೆ ಹೇಳುತ್ತಿದ್ದರು. ಟೀಮ್ ಇಂಡಿಯಾ ವಿರುದ್ಧದ ನಮ್ಮ ಟೀಮ್​ನ ಪ್ರದರ್ಶನ ಈಗ ಸಾಕಷ್ಟು ಹೂಡಿಕೆಗಳಿಗೆ ಕಾರಣವಾಗಲಿದೆ. ತಂಡದ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ. ಹಣಕಾಸಿನ ಸಮಸ್ಯೆಯ ನಡುವೆಯೂ ಆಟಗಾರರಲ್ಲಿ ಆತ್ಮವಿಶ್ವಾಸ, ಆಕ್ರಮಣಕಾರಿ ಆಲ್​ರೌಂಡ್​ ಪ್ರದರ್ಶನ ಮರಳಿ ಬಂದಿದ್ದು ತುಂಬಾ ಖುಷಿಯಾಗಿದೆ ಎಂದರು.

ಸರಣಿಯಲ್ಲಿ ಸ್ಪಿನ್ನರ್‌ಗಳಾದ ರೋಸ್ಟನ್ ಚೇಸ್ ಮತ್ತು ಗುಡಾಕೇಶ್ ಮೋತಿ ಅತ್ಯುತ್ತಮ ಪ್ರದರ್ಶನ ನೀಡಿದರು. ಇವರಿಬ್ಬರು, ಭಾರತದ ಹೆಚ್ಚುವರಿ ಸ್ಕೋರಿಂಗ್ ಅವಕಾಶಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ವಿಶೇಷವಾಗಿ ರೋಸ್ಟನ್ ಚೇಸ್ ಅವರ ಬೌಲಿಂಗ್ ನನ್ನ ಗಮನ ಸೆಳೆಯಿತು. ಅಂತಿಮ ಟಿ20 ಪಂದ್ಯ ಮಳೆಯಿಂದಾಗಿ ರದ್ದಾದದ್ದು ನಿರಾಶಾದಾಯಕ. ಭಾರತದ ನೆಲದಲ್ಲಿ ಸರಣಿ ಗೆಲ್ಲುವ ಸುವರ್ಣಾವಕಾಶವನ್ನು ನಾವು ಕೊನೆಗೂ ಕಳೆದುಕೊಂಡಿದ್ದೇವೆ ಎಂದು ಹೇಳಿದರು,(ಏಜೆನ್ಸೀಸ್).