ಆರ್​ಸಿಬಿ  
ಕ್ರಿಕೆಟ್

ಕುಂಬ್ಳೆ, ಸ್ಟಾರ್ಕ್​... ಇವರೇ ನನ್ನ ನೆಚ್ಚಿನ ಟಾಪ್​ 5 ಆರ್​ಸಿಬಿ ಬೌಲರ್​ಗಳು! ಡೇಲ್​ ಸ್ಟೇನ್ ಹೆಸರಿಸಿದ ಪಟ್ಟಿಯಲ್ಲಿ ಯಾರಿಗೆಲ್ಲ ಸ್ಥಾನ? ​

ಪ್ರಮುಖ ಮುಖ್ಯಾಂಶಗಳು

  • ಪ್ರಸ್ತುತ ಐಪಿಎಲ್​ 19ನೇ ಆವೃತ್ತಿಯಲ್ಲಿ ಆರ್​ಸಿಬಿ ಉತ್ತಮ ಪ್ರದರ್ಶನ
  • ಆರ್​ಸಿಬಿ ತಂಡದ ಐದು ಉತ್ತಮ ಬೌಲರ್​ಗಳನ್ನು ಹೆಸರಿಸಿದ ಮಾಜಿ ಆಟಗಾರ
  • ಡೇಲ್​ ಸ್ಟೇನ್​ ಹೆಸರಿಸಿದ ಐವರು ಬೌಲರ್​ಗಳು ಇವರೇ ನೋಡಿ
RCB: ಐಪಿಎಲ್​ ಇತಿಹಾಸದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಏಕೈಕ ಫ್ರಾಂಚೈಸಿ ಎಂದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು. ಕಳೆದ 18 ವರ್ಷಗಳಲ್ಲಿ ಒಂದು ಬಾರಿಯೂ ಕಪ್​ ಗೆಲ್ಲದ ತಂಡ 18ನೇ ಆವೃತ್ತಿಯಲ್ಲಿ ಟ್ರೋಫಿ ಎತ್ತಿಹಿಡಿದಿದ್ದು ಇದೀಗ ಇತಿಹಾಸ. ಪ್ರಸ್ತುತ, 19ನೇ ಆವೃತ್ತಿಯಲ್ಲಿ ಭರ್ಜರಿ ಆಲ್​ರೌಂಡ್​ ಪ್ರದರ್ಶನ ನೀಡುತ್ತಿರುವ ರಜತ್​ ಪಾಟಿದಾರ್​ ಪಡೆ, ಆಡಿರುವ ಎರಡು ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿದೆ. 
ವಿರಾಟ್​ ಕೊಹ್ಲಿ, ರಜತ್​ ಪಾಟಿದಾರ್​, ದೇವದತ್ತ ಪಡಿಕ್ಕಲ್​, ಫಿಲ್​ ಸಾಲ್ಟ್​, ಟಿಮ್​ ಡೇವಿಡ್​, ಕ್ರುನಾಲ್​ ಪಾಂಡ್ಯ, ಜಿತೇಶ್​ ಶರ್ಮ, ಜೋಶ್​ ಹೇಜಲ್​ವುಡ್​ನಂತಹ ಸ್ಟಾರ್​ ಹಾಗೂ ಅನುಭವಿ ಆಟಗಾರರು ಆರ್​ಸಿಬಿ ತಂಡದ ಮೂಲ ಶಕ್ತಿ ಎಂದರೆ ಖಂಡಿತ ತಪ್ಪಾಗಲಾರದು. ಕಳೆದ ವರ್ಷಕ್ಕೆ ಹೋಲಿಸಿದರೆ, ಬೆಂಗಳೂರು ತಂಡ ಇನ್ನಷ್ಟು ಬಲವಾಗಿದೆ. ಉತ್ತಮ ಬ್ಯಾಟರ್​​, ಬೌಲರ್ಸ್​​ ಮತ್ತು ಆಲ್​ರೌಂಡ್​ ಪ್ರದರ್ಶನ ನೀಡುವ ಆಟಗಾರರೇ ತಂಡದಲ್ಲಿರುವುದು ಸದ್ಯ ಮ್ಯಾನೇಜ್​ಮೆಂಟ್​ ಗೊಂದಲಕ್ಕೀಡು ಮಾಡಿದೆ. ಕಾರಣ, ಯಾರನ್ನೂ ಆಡಿಸಬೇಕು? ಯಾರಿಗೆಲ್ಲ ಅವಕಾಶ ಕೊಡಬೇಕು ಎಂದು.  ​ 
ಈ ವರ್ಷವು ಆರ್​ಸಿಬಿ ಟ್ರೋಫಿ ಎತ್ತಿಹಿಡಿಯಲಿ ಎಂದು ಬೇಡಿಕೊಳ್ಳುತ್ತಿರುವ ಲಾಯಲ್​ ಫ್ಯಾನ್ಸ್​ಗೆ ಈಗಾಗಲೇ ಗೆಲುವಿನ ಭರವಸೆ ಸಿಕ್ಕಿದೆ. ಸದ್ಯ ತಂಡದ ಬಗ್ಗೆ ಮಾತನಾಡುತ್ತಿದ್ದ ಮಾಜಿ ಆರ್​ಸಿಬಿ ವೇಗಿ, ದಕ್ಷಿಣ ಆಫ್ರಿಕಾದ ಸ್ಟಾರ್​ ಕ್ರಿಕೆಟಿಗ ಡೇಲ್​ ಸ್ಟೇನ್​, 2008ರಿಂದ ಇಲ್ಲಿಯವರೆಗೆ ತಮ್ಮ ನೆಚ್ಚಿನ ಐದು ಬೆಂಗಳೂರು ಫ್ರಾಂಚೈಸಿಯ ಬೌಲರ್​ಗಳನ್ನು ಹೆಸರಿಸಿದ್ದಾರೆ. ಅಷ್ಟಕ್ಕೂ, ಯಾರೆಲ್ಲ ಈ ಪಟ್ಟಿಯಲ್ಲಿದ್ದಾರೆ ಎಂಬುದರ ವಿವರ ಹೀಗಿದೆ ನೋಡಿ. 
5ನೇ ಸ್ಥಾನದಲ್ಲಿ, ನನಗೆ ಅನಿಲ್ ಕುಂಬ್ಳೆ ಇದ್ದಾರೆ. ಸ್ಪಿನ್ನರ್ ಆಗಿ, ಚಿನ್ನಸ್ವಾಮಿ ವಿರುದ್ಧ ಅವರು ಹೆಚ್ಚು ಬೌಲಿಂಗ್ ಮಾಡಿದ್ದಾರೆ. 4ನೇ ಸ್ಥಾನದಲ್ಲಿ, ಹರ್ಷಲ್ ಪಟೇಲ್. ವಿಕೆಟ್ ಪಡೆಯುವ ಸಾಮರ್ಥ್ಯ ಮತ್ತು ಪಂದ್ಯಗಳಲ್ಲಿ ಅವರ ಪ್ರಭಾವಕ್ಕಾಗಿ ಅವರನ್ನು ಆಯ್ಕೆ ಮಾಡಿದ್ದೇನೆ. ಈತ ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ಪರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದು, ಕೇವಲ 80 ಪಂದ್ಯಗಳಿಂದ 99 ವಿಕೆಟ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಒಂದೇ ಪಂದ್ಯದಲ್ಲಿ ಐದು ವಿಕೆಟ್ ಮತ್ತು ಎರಡು ಬಾರಿ ನಾಲ್ಕು ವಿಕೆಟ್ ಕಬಳಿಸಿದ್ದು ಸೇರಿವೆ ಎಂದಿದ್ದಾರೆ. 
ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ 3ನೇ ಸ್ಥಾನ.  ಇವರ ಬೌಲಿಂಗ್ ಪ್ರಭಾವವನ್ನು ನಾನು ಮೆಚ್ಚುವೆ. ಎದುರಾಳಿಗಳ ವಿಕೆಟ್ ಪಡೆಯುವ ಸ್ಟಾರ್ಕ್​ರ ಸಾಮರ್ಥ್ಯಕ್ಕೆ ನನ್ನ ಶ್ಲಾಘನೆ. ಆರ್‌ಸಿಬಿ ಪರ ಕೇವಲ 27 ಪಂದ್ಯಗಳನ್ನು ಆಡಿರುವ ಅವರು, 34 ವಿಕೆಟ್‌ಗಳನ್ನು ಪಡೆದಿದ್ದಾರೆ. 2ನೇ ಸ್ಥಾನದಲ್ಲಿ, ವೇಗಿ ಜೋಶ್ ಹೇಜಲ್‌ವುಡ್. ಇವರ ಸ್ಟ್ರೈಕ್ ರೇಟ್ ಗಮನಾರ್ಹ. ಜೋಶ್​ ಆರ್​ಸಿಬಿಯ ಶಕ್ತಿ. ಅವರು ಫ್ರಾಂಚೈಸಿಗಾಗಿ 27 ಪಂದ್ಯಗಳಲ್ಲಿ ಆಡಿ, 45 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಸೀಸನ್​ನಲ್ಲಿಯೂ ತಂಡದಲ್ಲಿದ್ದಾರೆ ಎಂದರು. 
ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ಪರ ಅತಿ ಹೆಚ್ಚು ವಿಕೆಟ್ ಪಡೆದ ಸ್ಪಿನ್ನರ್​ ಯುಜುವೇಂದ್ರ ಚಾಹಲ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರ ಎಕಾನಮಿ ಸುಮಾರು 7.6 ಮತ್ತು ಅತ್ಯಧಿಕ ವಿಕೆಟ್‌ಗಳನ್ನು ಪಡೆದಿದ್ದಾರೆ. ನನ್ನ ನಂಬರ್ 1 ಅವರಿಗೆ ಎಂದು ಸ್ಟೇನ್ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).