- ಸಿಎಸ್‌ಕೆ ವಿರುದ್ಧ 43 ರನ್‌ಗಳ ಅಮೋಘ ಜಯ ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು
- ವಿರಾಟ್ ಕೊಹ್ಲಿಯ ನೋ ಲುಕ್ ಸಿಕ್ಸ್ ಭಂಗಿಗೆ ಅಭಿಮಾನಿಗಳು. ಅನುಷ್ಕಾ ಫಿದಾ
- ಮ್ಯಾನ್ ಆಫ್ ದಿ ಮ್ಯಾಚ್ ಗಿಟ್ಟಿಸಿಕೊಂಡ ಟಿಮ್ ಡೇವಿಡ್ ಡೇವಿಲ್
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ (ಏಪ್ರಿಲ್5 )ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ Royal Challengers Bengaluru ತಂಡವು Chennai Super Kingsಗೆ ಮಣ್ಣು ಮುಕ್ಕಿಸಿತ್ತು. 43 ರನ್‌ಗಳ ಅಮೋಘ ಜಯ ದಾಖಲಿಸಿತು. ಇದರ ಮಧ್ಯೆ ಅಭಿಮಾನಿಗಳು ಮತ್ತು ಅನುಷ್ಕಾ ಶರ್ಮಾ ಮನಸೋತು ಹುಚ್ಚೆದ್ದು ಕುಣಿದಿದ್ದು ಮಾತ್ರ ವಿರಾಟ್ ಕೊಹ್ಲಿ ಬಾರಿಸಿದ ಅದ್ಭುತ 'ನೋ-ಲುಕ್' ಸಿಕ್ಸರ್‌ಗೆ.
'ನೋ-ಲುಕ್' ಸಿಕ್ಸ್ ಹೊಡೆದ ಕೊಹ್ಲಿ, ಅನುಷ್ಕಾ ಸಂಭ್ರಮ
ಪಂದ್ಯದ ಆರಂಭದಲ್ಲಿ ವಿರಾಟ್ ಕೊಹ್ಲಿ ಕೇವಲ 18 ಎಸೆತಗಳಲ್ಲಿ 28 ರನ್ ಗಳಿಸಿ ತಂಡಕ್ಕೆ ಉತ್ತಮ ಅಡಿಪಾಯವನ್ನೇ ಹಾಕಿಕೊಟ್ಟರು. ನಾಲ್ಕನೇ ಓವರ್‌ನಲ್ಲಿ ಸಿಎಸ್‌ಕೆ ವೇಗಿ ಮ್ಯಾಟ್ ಹೆನ್ರಿಎಸೆತಕ್ಕೆ ಕೊಹ್ಲಿ ಹೊಡೆದ 'ನೋ-ಲುಕ್' ಸಿಕ್ಸರ್ ನೇರವಾಗಿ ಸ್ಟ್ಯಾಂಡ್ಸ್ ಸೇರಿತು.
'ನೋ-ಲುಕ್' ಭಂಗಿ ಮೈದಾನದಲ್ಲಿದ್ದ ಪ್ರೇಕ್ಷಕರನ್ನು ಬೆರಗುಗೊಳಿಸಿತು. ಗ್ಯಾಲರಿಯಲ್ಲಿದ್ದ ಅವರ ಪತ್ನಿ ಅನುಷ್ಕಾ ಶರ್ಮಾ ಕೂಡ ಈ ಅದ್ಭುತ ಹೊಡೆತಕ್ಕೆ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಅವರ ಈ ಪ್ರತಿಕ್ರಿಯೆಯ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಏನಿದು ನೋ ಲುಕ್ ಸಿಕ್ಸ್ ಎಂದರೆ?
ಬ್ಯಾಟರ್ ಚೆಂಡನ್ನು ಸಿಕ್ಸರ್‌ಗೆ ಬಾರಿಸಿದ ನಂತರ, ಆ ಚೆಂಡು ಎಲ್ಲಿಗೆ ಹೋಗುತ್ತಿದೆ ಎಂದು ತಿರುಗಿಯೂ ನೋಡದೆ ಕ್ರಿಸ್‌ನಲ್ಲಿ ಹಾಗೆಯೇ ನಿಂತಿರುತ್ತಾರೆ. ಸಾಮಾನ್ಯವಾಗಿ ಬ್ಯಾಟರ್‌ಗಳು ತಾವು ಹೊಡೆದ ಚೆಂಡು ಬೌಂಡರಿ ದಾಟುತ್ತದೆಯೇ ಎಂದು ನೋಡುತ್ತಾರೆ, ಆದರೆ ಇಲ್ಲಿ ಬ್ಯಾಟರ್‌ಗೆ ತಾನು ಹೊಡೆದ ಹೊಡೆತ ಸಿಕ್ಸರ್ ಆಗಿಯೇ ಆಗುತ್ತದೆ ಎನ್ನುವ ಅತಿಯಾದ ಆತ್ಮವಿಶ್ವಾಸ ಇರುತ್ತದೆ ಇದನ್ನು ನೋ ಲುಕ್ ಸಿಕ್ಸರ್ ಎನ್ನುತ್ತಾರೆ.
ಯಾರ್ಯಾರು ಎಷ್ಟೆಷ್ಟು ಗಳಿಸಿದರು?
ದೇವದತ್ ಪಡಿಕ್ಕಲ್, ಟಿಮ್ ಡೇವಿಡ್, ರಜತ್ ಪಾಟಿದಾರ್ ನೇತೃತ್ವವು ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿತು. ಭುವನೇಶ್ವರ್ ಕುಮಾರ್ ಅವರ 3-41 ಅಂತರದ ಅದ್ಭುತ ಪ್ರದರ್ಶನದೊಂದಿಗೆ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು 2026 ರ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಭರ್ಜರಿ ಜಯ ಸಾಧಿಸಿತು.
ಭುವನೇಶ್ವರ್ ಕುಮಾರ್ ಐತಿಹಾಸಿಕ ಸಾಧನೆ
ಚೆನ್ನೈ ಸೂಪರ್ ಕಿಂಗ್ ತಂಡವು ಆರ್‌ಸಿಬಿಯ ಫೀಲ್ಡಿಂಗ್ಗೆ ತತ್ತರಿಸಿ ಹೋಯಿತು. ಅನುಭವಿ ವೇಗಿ ಭುವನೇಶ್ವರ್ ಕುಮಾರ್ 41 ರನ್ ನೀಡಿ 3 ವಿಕೆಟ್ ಪಡೆಯುವ ಮೂಲಕ ಐಪಿಎಲ್‌ನಲ್ಲಿ 200 ವಿಕೆಟ್ಗಳ ಮೈಲಿಗಲ್ಲು ಸಾಧಿಸಿದರು, (ಏಜೆನ್ಸೀಸ್)