CSK vs RCB 
ಕ್ರಿಕೆಟ್

70, 48, 50... ಮತ್ತದೇ ತಪ್ಪು ಮಾಡಿದ ಚೆನ್ನೈ ಪಡೆ​! ಆರ್​ಸಿಬಿ ಎದುರಿಗೂ ತಮ್ಮ ಸಾಮರ್ಥ್ಯ ಇಷ್ಟೇ ಎಂದ ಸಿಎಸ್​ಕೆ | CSK vs RCB

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್​ 19ನೇ ಆವೃತ್ತಿಯ 11ನೇ ಪಂದ್ಯ
  • ಆರ್​ಸಿಬಿ ಮತ್ತು ಸಿಎಸ್​ಕೆ ಪಂದ್ಯದ ಮೊದಲ ಇನ್ನಿಂಗ್ಸ್ ಮುಕ್ತಾಯ
  • ಚೆನ್ನೈ ಸೂಪರ್​ ಕಿಂಗ್ಸ್​ಗೆ 251 ರನ್​ಗಳ ಬೃಹತ್ ಗುರಿ
CSK vs RCB: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಐಪಿಎಲ್​ 19ನೇ ಆವೃತ್ತಿಯ 11ನೇ ಪಂದ್ಯದ ಮೊದಲ ಇನ್ನಿಂಗ್ಸ್​ ಮುಕ್ತಾಯಗೊಂಡಿದೆ.
ಟಾಸ್​ ಗೆದ್ದ ಸಿಎಸ್​ಕೆ ನಾಯಕ ರುತುರಾಜ್ ಗಾಯಕ್ವಾಡ್​, ಆರ್​ಸಿಬಿಗೆ ಮೊದಲು ಬ್ಯಾಟ್ ಮಾಡಲು ಆಹ್ವಾನಿಸಿದರು. ಅಂತೆಯೇ, ಕಣಕ್ಕಿಳಿದ ಚಾಲೆಂಜರ್ಸ್​ ಪಡೆಯ ಆರಂಭಿಕರಾದ ವಿರಾಟ್​ ಕೊಹ್ಲಿ ಮತ್ತು ಫಿಲ್​ ಸಾಲ್ಟ್​, ಪವರ್​ಪ್ಲೇಯಲ್ಲಿ ಉತ್ತಮ ಓಪನಿಂಗ್ ನೀಡುವಲ್ಲಿ ವಿಫಲರಾದರು. ಕೇವಲ 28 ರನ್​ಗೆ ಕೊಹ್ಲಿ ಔಟಾದರೆ, ಸಾಲ್ಟ್​ 46 ರನ್​ಗಳನ್ನು ಸಿಡಿಸಿ ಪೆವಿಲಿಯನ್​ಗೆ ಹಿಂತಿರುಗಿದರು.

ಪಡಿಕಲ್​, ರಜತ್​, ಡೇವಿಡ್ ಅಬ್ಬರ

10 ಓವರ್​ವರೆಗೆ 90 ರನ್​ಗಳನ್ನು ಹೊಂದಿದ್ದ ಆರ್​ಸಿಬಿಗೆ ಬಲ ತುಂಬಿದ್ದೇ ದೇವದತ್ತ ಪಡಿಕಲ್​ ಅವರ ಆಕರ್ಷಕ ಅರ್ಧಶತಕ. ಪಡಿಕಲ್​ಗೆ ಸಾಥ್​ ನೀಡಿದ ಕ್ಯಾಪ್ಟನ್​ ರಜತ್ ಪಾಟೀದಾರ್​ ಕೂಡ ಕಡಿಮೆ ಎಸೆತಗಳಲ್ಲಿ ಸ್ಫೋಟಕ ಸಿಕ್ಸರ್​, ಬೌಂಡರಿಗಳನ್ನು ಬಾರಿಸಿದರು. ಇವರಿಬ್ಬರ ಹಾದಿಯನ್ನೇ ಹಿಡಿದ ದೈತ್ಯ ಟಿಮ್ ಡೇವಿಡ್​ ಬ್ಯಾಕ್​ ಟು ಬ್ಯಾಕ್ ಸಿಕ್ಸರ್​ಗಳನ್ನು ಸಿಡಿಸಿದರು. ಇದು ಮತ್ತೊಮ್ಮೆ ಚೆನ್ನೈ ಪಡೆಯ ಬೌಲರ್​ಗಳ ಸಾಮರ್ಥ್ಯವನ್ನು ಪ್ರಶ್ನಿಸುವಂತೆ ಮಾಡಿತು.

ಮತ್ತದೇ ತಪ್ಪು

ಮೊದಲೆರೆಡು ಪಂದ್ಯಗಳಲ್ಲಿಯೂ ಪವರ್​ಪ್ಲೇಯಲ್ಲಿ ವಿಕೆಟ್​ ಪಡೆಯಲು ಪರದಾಡಿದ ಸಿಎಸ್​ಕೆ ಬೌಲರ್​ಗಳು, ರಜತ್ ಪಡೆಯ ವಿರುದ್ಧವೂ ವಿಕೆಟ್​ ಕೀಳಲು ತೀರ ಹೆಣಗಾಡಿದರು. ಚೆನ್ನೈ ಬೌಲರ್​ಗಳಿಗೆ ನೀರು ಕುಡಿಸಿದ ಆರ್​ಸಿಬಿ, 20 ಓವರ್​ನಲ್ಲಿ 3 ವಿಕೆಟ್​ ನಷ್ಟಕ್ಕೆ 250 ರನ್ ಕಲೆಹಾಕಿತು. ಈ ಬೃಹತ್​ ಗುರಿಯನ್ನು ತಲುಪಿ, ತನ್ನ ಮೊದಲ ಗೆಲುವಿನ ಖಾತೆಯನ್ನು ತೆರೆಯಲಿದೆಯಾ ಚೆನ್ನೈ ಸೂಪರ್ ಕಿಂಗ್ಸ್​ ಎಂಬುದನ್ನು ದ್ವಿತೀಯ ಇನ್ನಿಂಗ್ಸ್​ನಲ್ಲಿ ಕಾದು ನೋಡಬೇಕಿದೆ.

ಆರ್​ಸಿಬಿ ಬ್ಯಾಟಿಂಗ್ ವಿವರ

ವಿರಾಟ್​ ಕೊಹ್ಲಿ - 28 ರನ್​, 18 ಎಸೆತ
ಫಿಲ್​ ಸಾಲ್ಟ್​ - 46 ರನ್​, 30 ಎಸೆತ
ದೇವದತ್ತ ಪಡಿಕಲ್​ - 50 ರನ್​, 29 ಎಸೆತ
ರಜತ್ ಪಾಟೀದಾರ್​ - 48* ರನ್​, 19 ಎಸೆತ
ಟಿಮ್ ಡೇವಿಡ್​ - 70* ರನ್​, 25 ಎಸೆತ