CSK vs LSG: ಇಂದು (ಮೇ.10) ಚೆನ್ನೈ ಕ್ರೀಡಾಂಗಣದಲ್ಲಿ ನಡೆದ ಸಿಎಸ್ಕೆ ಮತ್ತು ಎಲ್ಎಸ್ಜಿ ನಡುವಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ರೋಚಕ ಜಯ ಸಾಧಿಸಿತು.
ಟಾಸ್ ಗೆದ್ದು ಮೊದಲು ಬೌಲ್ ಮಾಡಿದ ಸಿಎಸ್ಕೆ, ಪಂತ್ ಪಡೆಗೆ ಬ್ಯಾಟ್ ಮಾಡುವಂತೆ ಹೇಳಿದರು. 20 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ ಎಲ್ಎಸ್ಜಿ 203 ರನ್ ಕಲೆಹಾಕಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಚೆನ್ನೈ ಪಡೆಗೆ ಆರಂಭಿಕ ಹಂತದಲ್ಲೇ ಸಂಜು ಸ್ಯಾಮ್ಸನ್ ವಿಕೆಟ್ ದೊಡ್ಡ ಸಂಕಷ್ಟಕ್ಕೆ ಸಿಲುಕಿಸಿತು.
ಸಂಜು ನಂತರದಲ್ಲಿ ಕಣಕ್ಕಿಳಿದ ಯುವ ಬ್ಯಾಟರ್ ಉರ್ವಿಲ್ ಪಟೇಲ್ (65 ರನ್) ಅತಿ ವೇಗದ ಅರ್ಧಶತಕ ಸಿಡಿಸುವ ಮೂಲಕ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ಯುವಲ್ಲಿ ಸಹಾಯ ಮಾಡಿದರು. ಉರ್ವಿಲ್ ಮತ್ತು ಪ್ರಶಾಂತ್ ತಂಡದ ಪರ ಬ್ಯಾಕ್ ಟು ಬ್ಯಾಕ್ ಸಿಕ್ಸರ್ಗಳ ಸುರಿಮಳೆಗೈದರು. ಇದರ ಸಹಾಯದಿಂದ ಸಿಎಸ್ಕೆ, ಕೊನೆಯವರೆಗೂ ತಲುಪಿದ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿತು.
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟರ್ಗಳನ್ನು ಕಟ್ಟಿಹಾಕುವಲ್ಲಿ ಎಡವಿದ ಪಂತ್ ಪಡೆಯ ಬೌಲರ್ಗಳು ವಿಕೆಟ್ ತೆಗೆಯುವುದು ಇರಲಿ, ಕೈಗೆ ಸಿಕ್ಕ ಹಲವು ಕ್ಯಾಚ್ಗಳನ್ನು ಬಿಡುವ ಮೂಲಕ ತಂಡದ ಸೋಲಿಗೆ ಪ್ರಮುಖ ಕಾರಣರಾದರು. ಸ್ಪಿನ್ನರ್ ದಿಗ್ವಿಶ್ ರಾಠಿ ಒಂದಲ್ಲ, ಎರಡಲ್ಲ ಒಟ್ಟು ಮೂರು ಕ್ಯಾಚ್ಗಳನ್ನು ಕೈಚೆಲ್ಲಿದ್ದು ಕ್ಯಾಪ್ಟನ್ ಪಂತ್ರನ್ನು ತೀವ್ರ ಸಿಟ್ಟಾಗಿಸಿತು. ಈ ಪಂದ್ಯವನ್ನು ಗೆದ್ದ ರುತುರಾಜ್ ಪಡೆ ಈಗ ಅಂಕಪಟ್ಟಿಯಲ್ಲಿ 12 ಪಾಯಿಂಟ್ಗಳಿಂದ 5ನೇ ಸ್ಥಾನಕ್ಕೆ ಜಿಗಿದಿದೆ.