ಸಿಎಸ್ಕೆ ಆಟಗಾರ ಸಂಜು ಸ್ಯಾಮ್ಸನ್
- ಬ್ಯಾಕ್ ಟು ಬ್ಯಾಕ್ ಫ್ಲಾಪ್ ಆಗ್ತಿರುವ ಸಂಜು ಸ್ಯಾಮ್ಸನ್
- ಟಿ20 ವಿಶ್ವಕಪ್ ಟೂರ್ನಿಯಲ್ಲಿದ್ದ ಆಟ ಇಲ್ಯಾಕೆ ಇಲ್ಲ?
- ಸಂಜು ಸ್ಯಾಮ್ಸನ್ ಕಳಪೆ ಆಟಕ್ಕೆ ಸಿಎಸ್ಕೆ ಫ್ಯಾನ್ಸ್ ಆಕ್ರೋಶ
Sanju Samson: ಟಿ20 ವಿಶ್ವಕಪ್‌ನಲ್ಲಿ ಭಾರತದ ಗೆಲುವಿಗೆ ಪ್ರಮುಖ ಕಾರಣರಾದ ಸಂಜು ಸ್ಯಾಮ್ಸನ್ರನ್ನು ಕ್ರಿಕೆಟ್ ಪ್ರಿಯರು ಹೇಗೆ ಮರೆಯಲು ಸಾಧ್ಯ? ಟೂರ್ನಿಯ ಕೊನೆಯ ಮೂರು ಬಹುಮುಖ್ಯ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಟೀಮ್ ಇಂಡಿಯಾಗೆ ಟಿ20 ವಿಶ್ವಕಪ್ ಕಿರೀಟ ತಂದುಕೊಟ್ಟ ಕೀರ್ತಿ ಸಂಜುಗೆ ವಿಶೇಷವಾಗಿ ಸಲ್ಲುತ್ತದೆ. ಇದೇ ನಿರೀಕ್ಷೆಯಲ್ಲಿ ಅವರನ್ನು ಟ್ರೇಡ್ ಮೂಲಕ ತಮ್ಮ ತಂಡಕ್ಕೆ ಕರೆದುಕೊಂಡ ಚೆನ್ನೈ ಸೂಪರ್ ಕಿಂಗ್ಸ್ಗೆ ಸದ್ಯ ದೊಡ್ಡ ತಲೆನೋವು ಕಾಡಲಾರಂಭಿಸಿದೆ.
ರಾಜಸ್ಥಾನ ರಾಯಲ್ಸ್ಗೆ ರವೀಂದ್ರ ಜಡೇಜಾ ಹೋಗುತ್ತಿದಂತೆ ಸಿಎಸ್ಕೆ ಬಣ ಸೇರಿದ ಸಂಜು ಸ್ಯಾಮ್ಸನ್, ಐಪಿಎಲ್ 19ನೇ ಆವೃತ್ತಿಯ ಮೂರು ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ ಕಳಪೆ ಪ್ರದರ್ಶನ ಮುಂದುವರಿಸಿದ್ದಾರೆ. ಸತತ ಮೂರು ಇನ್ನಿಂಗ್ಸ್‌ಗಳಲ್ಲಿ 6, 7 ಮತ್ತು 9 ರನ್‌ಗಳೊಂದಿಗೆ ಫ್ರಾಂಚೈಸಿಯ ಅಭಿಮಾನಿಗಳನ್ನು ತೀವ್ರ ನಿರಾಶೆಗೊಳಿಸಿದ್ದಾರೆ. ಕೇವಲ ಒಂದಂಕಿಯ ರನ್ಗೆ ಔಟ್ ಆಗ್ತಿರುವ ಸ್ಯಾಮ್ಸನ್ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿವೆ. ಅದೇ ಸಮಯದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧವೂ ಭಾರೀ ಟೀಕೆಗಳು ಕೇಳಿಬರುತ್ತಿವೆ.
ಟಿ20 ವಿಶ್ವಕಪ್‌ನಲ್ಲಿ ಒತ್ತಡದಲ್ಲಿಯೂ ಬಹಳ ತಾಳ್ಮೆ ಹಾಗೂ ಜಾಣ್ಮೆಯಿಂದ ಆಡಿದ ಸ್ಯಾಮ್ಸನ್, ಅದೇ ಐಪಿಎಲ್‌ನಲ್ಲಿ, ಸಿಎಸ್ಕೆ ಪರ ಉತ್ತಮ ಇನ್ನಿಂಗ್ಸ್ ಆರಂಭಿಸುವಲ್ಲಿ ಎಡವುತ್ತಿದ್ದಾರೆ. ಅವರ ಬ್ಯಾಟಿಂಗ್‌ನಲ್ಲಿ ಲಯ, ಸಮಯ ಮತ್ತು ಆತ್ಮವಿಶ್ವಾಸದ ಕೊರತೆ ಎದ್ದು ಕಾಣುತ್ತಿದೆ. ಆರ್ಸಿಬಿ ವಿರುದ್ಧದ ಪಂದ್ಯದಲ್ಲಾದರೂ ಒಳ್ಳೆಯ ಓಪನಿಂಗ್ ನೀಡುತ್ತಾರೆ ಎಂದೇ ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಅಲ್ಲಿಯೂ ಬೇಸರ ಆಗಿದ್ದು ಸದ್ಯ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ನೀವು ಮಾನಸಿಕವಾಗಿ ಇಲ್ಲಿ ತೊಡಗಿಕೊಳ್ಳದಿದ್ದರೆ, ದಯವಿಟ್ಟು ಕೆಲವು ಪಂದ್ಯಗಳಿಂದ ದೂರವಿರಿ. ನೀವು ಆಡುತ್ತಿರುವ ಶೈಲಿಯೇ ನಿಮ್ಮ ನಿರಾಸಕ್ತಿಯನ್ನು ಎತ್ತಿ ತೋರಿಸುತ್ತಿದೆ. ಪ್ರತಿ ಬಾರಿ ಕ್ಯಾಮೆರಾ ನಿಮ್ಮನ್ನು ಫೋಕಸ್ ಮಾಡಿದಾಗ, ನೀವು ನಿರಾಶೆಗೊಂಡು, ಸಂಪರ್ಕವೇ ಇಲ್ಲದಂತೆ ಕಾಣುತ್ತೀರಿ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನೀವು ಒಮ್ಮೆಯೂ ನಗುತ್ತಿರುವುದನ್ನು ನಾನು ನೋಡಿಲ್ಲ ಎಂದು ಸಿಎಸ್ಕೆ ಅಭಿಮಾನಿಯೊಬ್ಬರು ಬೇಸರ ಹೊರಹಾಕಿದ್ದಾರೆ.
ಒಪ್ಪಿಕೊಳ್ಳಲು ಕಷ್ಟಕರವಾಗುತ್ತಿರುವುದು ಸಾಮರ್ಥ್ಯ, ಉದ್ದೇಶ ಮತ್ತು ಹೋರಾಟದಲ್ಲಿನ ಕೊರತೆ. ಎಲ್ಲಿ ಹೋಯಿತು ಉತ್ಸಾಹ? ಹಸಿವು ಎಲ್ಲಿದೆ? ಎಂದು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ನೇರವಾಗಿ ಹಂಚಿಕೊಂಡಿದ್ದಾರೆ. ಇನ್ನು ಹಲವರು ಫ್ರಾಂಚೈಸಿ ವಿರುದ್ಧ ಕಿಡಿಕಾರಿದ್ದು, ಹರಾಜಿನಲ್ಲಿ 36 ಕೋಟಿ ರೂ. ಯಾವ ಉಪಯೋಗಕ್ಕೆ ಹೂಡಿಕೆ ಮಾಡದ್ದೀರಿ? ಫಲಿತಾಂಶ ಎಲ್ಲಿದೆ ತೋರಿಸಿ? ಎಂದೆಲ್ಲ ಕಮೆಂಟ್ ಮಾಡುತ್ತಿದ್ದಾರೆ,(ಏಜೆನ್ಸೀಸ್).