ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಸೂರ್ಯಕುಮಾರ್​ ಕುಟುಂಬ ಏಜೆನ್ಸಿ
ಕ್ರಿಕೆಟ್

ಮೋದಿ ಭೇಟಿಯಾದ ಸೂರ್ಯಕುಮಾರ್​ ಕುಟುಂಬ; ಮೋದಿ ಮನಗೆದ್ದ ಕನ್ನಡ ಭಜನೆ!

ಮೋದಿ ಚಪ್ಪಾಳೆ ತಟ್ಟಿ ಬಾಲಕಿಯ ಹಾಡು ಆನಂದಿಸಿ ಪ್ರೋತ್ಸಾಹಿಸಿದರು.

ನವದೆಹಲಿ: ಹಾಲಿ ವರ್ಷ ಟಿ20 ವಿಶ್ವಕಪ್​ ಜಯಿಸಿದ ಭಾರತ ತಂಡದ ನಾಯಕ ಸೂರ್ಯಕುಮಾರ್​ ಯಾದವ್​ ತನ್ನ ಕುಟುಂಬದ ಸದಸ್ಯರೊಂದಿಗೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು.

ಸೂರ್ಯಕುಮಾರ್​ ಪತ್ನಿ ದೇವಿಶಾ, 6 ತಿಂಗಳ ಪುತ್ರಿ, ಅತ್ತಿಗೆ ದೀಾ, ಭಾವ ಅಜಯ್​ ಶೆಟ್ಟಿ ಮತ್ತು ಅತ್ತಿಗೆ ಇಬ್ಬರು ಮಕ್ಕಳಾದ ರಾಮ್​ ಮತ್ತು ಸರಯೂ ಜತೆಗಿದ್ದರು. ಈ ವೇಳೆ ಸರಯೂ "ಮೊರದಗಲದ ಕಿವಿಯವನೆ' ಎಂಬ ಅಚ್ಚಗನ್ನಡದ ಗಣಪತಿ ಭಜನೆ ಹಾಡಿ ಮೋದಿ ಮನಗೆದ್ದಳು. ಮೋದಿ ಚಪ್ಪಾಳೆ ತಟ್ಟಿ ಬಾಲಕಿಯ ಹಾಡು ಆನಂದಿಸಿ ಪ್ರೋತ್ಸಾಹಿಸಿದರು.

"ರಾಮ್​ ಮತ್ತು ಸರಯೂ ಆಗಮನವು ದೀಪಾವಳಿಯ ವಾತಾವರಣದೊಂದಿಗೆ ಕೂಡಿಬಂದಿದ್ದು, ಈ ಹಬ್ಬದ ಸಂಭ್ರಮವನ್ನು ಇನ್ನಷ್ಟು ಪವಿತ್ರ ಮತ್ತು ದಿವ್ಯವಾಗಿಸಿದೆ' ಎಂದು ಮೋದಿ ಬಳಿಕ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.