ಕಲ್ಕತ್ತಾದ ಈಡನ್ ಗಾಡರ್ನ್ನಲ್ಲಿ ಸೆರೆಯಾದ ವಿಡಿಯೋ
- ಐಪಿಎಲ್ ಪಂದ್ಯದ ನಡುವೆ ಕಪಲ್ಸ್ ಫೈಟ್!
- ಕಲ್ಕತ್ತಾದ ಈಡನ್ ಗಾಡರ್ನ್ನಲ್ಲಿ ಸೆರೆಯಾದ ವಿಡಿಯೋ
- ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಐಪಿಎಲ್: ಭಾರತದಲ್ಲಿ ಐಪಿಎಲ್ ಎಂದರೆ ಅದು ಕೇವಲ ಕ್ರಿಕೆಟ್ ಮಾತ್ರವಲ್ಲ ಮನೆರಂಜನೆಯ ಮಹಾಪೂರವೆಂದರೆ ತಪ್ಪಾಗದು. ಈ ಟೂರ್ನಿ ಇಷ್ಟೊಂದು ಖ್ಯಾತಿ ಗಳಿಸಲು ಬ್ಯಾಟರ್, ಬೌಲರ್, ಫೀಲ್ಡರ್ಗಳ ಜೊತೆಗೆ ಕ್ಯಾಮರಾಮನ್ಗಳ ಪಾತ್ರ ಸಹ ಬಹಳ ಪ್ರಮುಖವಾಗಿದೆ.
ಪಂದ್ಯಾವಳಿಯನ್ನು ವೀಕ್ಷಿಸಲು ಬರುವ ಯುವಕ ಯುವತಿಯರ ರಂಗಬಿರಂಗಿ ಭಂಗಿಯಲ್ಲಿ ಅವರ ಚಲನ-ವಲನವನ್ನು ಸೆರೆಹಿಡಿಯುವುದು ಕ್ಯಾಮರಾಮನ್ಗಲ ಖಯಾಲಿ ಎಂದರೆ ಸುಳ್ಳಲ್ಲ. ಇದೇ ಕ್ಯಾಮರಾಮ್ಯಾನ್ಗಳು ಸೆರೆಹಿಡಿದ ರಂಗಭಿರಂಗಿ ವಿಡಿಯೋವೊಂದು ಸೋಶಿಯಲ್ ಮೀಡಿಯಾನಲ್ಲಿ ಸಖತ್ ವೈರಲ್ (Viral Video) ಆಗುತ್ತಿದೆ.
ಪೆವಿಲಿಯನ್‌ನಲ್ಲಿ ಕಪಲ್ಸ್ ಫೈಟ್!
ವೈರಲ್ ಆಗುತ್ತಿರುವ ವಿಡಿಯೋನಲ್ಲಿ ಏಪ್ರಿಲ್ 9 ರಂದು ಕಲ್ಕತ್ತಾದ ಇಡನ್ ಗಾಡರ್ನನಲ್ಲಿ ನಡೆದ ಕಲ್ಕತ್ತಾ ನೈಟ್ ರೈಡರ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ಸೆರೆಯಾದ ವಿಡಿಯೋ ಎಂದು ಹೇಳಲಾಗುತ್ತಿದೆ.
ಈ ವಿಡಿಯೋನಲ್ಲಿ, ಯುವಕ ಮತ್ತು ಯುವತಿ (ಬಹುಶಃ ಗಂಡ ಹೆಂಡತಿ ಅಥವಾ ಪ್ರೇಯಸಿ- ಪ್ರಿಯಕರ) ಪೆವಿನಿಯನ್ ನಲ್ಲಿ ಯಾವುದೋ ವಿಷಯಕ್ಕೆ ಮನಸ್ಥಾಪ ಮಾಡಿಕೊಂಡು ಪರಸ್ಪರ ಬೈದುಕೊಳ್ಳುವುದನ್ನು ನಾವು ನೋಡ ಬಹುದಾಗಿದೆ. ಯುವಕ, ಆ ಯುವತಿಗೆ ತಲೆಗೆ ಹೊಡೆದರೆ ಯುವತಿ ಆ ಯುವಕನ ಕೈ ಬೆರಳನ್ನು ಮುರಿಯಲು ಪ್ರಯತ್ನಿಸುವುದನ್ನು ಕಾಣಬಹುದಾಗಿದೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಈ ವಿಡಿಯೋ ಕೆಲವೇ ಗಂಟೆಗಳಲ್ಲಿ ಭಾರಿ ವೈರಲ್ ಅಗಿದ್ದು, ಇಲ್ಲಿವರೆಗೆ ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ. ಅಂತಯೇ ಈ ವಿಡಿಯೋಗೆ ನೆಟ್ಟಿಗರು ತರಾವರಿ ಕಮೆಂಟ್ಗಳು ಹರಿದು ಬಂದಿದೆ.
ಇವರಿಗೆ ಜಗಳವಾಡಲು ಬೇರೆ ಯಾವುದೇ ಸ್ಥಳ ಸಿಗದೆ ಇಲ್ಲಿದೆ ಬಂದಿದ್ದಾರಾ? ಎಂದು ಒಬ್ಬರು ಪ್ರಶ್ನೆ ಮಾಡಿದರೆ, ಇದೇ ಕಾರಣಕ್ಕೆ ನಾನು ನನ್ನ ಹುಡುಗಿಯನ್ನು ಮ್ಯಾಚ್ ನೋಡಲು ಕರೆದೊಯ್ಯಲ್ಲ ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ.
ಕ್ರಿಕೆಟ್ ಜೊತೆಗೆ ಕಿತ್ತಾಟವನ್ನು ವೀಕ್ಷಕರು ನೋಡುವಂತಾಯಿತು, ಪೈಸಾ ವಸೂಲ್! ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ. ಒಟ್ಟಾರೆ ಈ ಯುವಕ-ಯುವತಿಯ ಜಗಳದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದು, ನೆಟ್ಟಿಗರು ಸಖತ್ ಎಂಜಾಯ್ ಮಾಡುತ್ತಿದ್ದಾರೆ ಎಂದರೆ ಸುಳ್ಳಲ್ಲ, (ಏಜನ್ಸೀಸ್).