- ದ. ಆಫ್ರಿಕಾ ವಿರುದ್ಧದ ಸೂಪರ್-8 ಪಂದ್ಯದಲ್ಲಿ ಹೀನಾಯ ಸೋಲು
- ತಂಡದ ಉಪನಾಯಕ ಅಕ್ಷರ್ ಪಟೇಲ್ ಹೊರಗೆ
- ಗೌತಮ್ ಗಂಭೀರ್ ನಿರ್ಧಾರಗಳಿಂದ ಟೀಮ್ ಇಂಡಿಯಾಗೆ ದೊಡ್ಡ ಹೊಡೆತ
Gautam Gambhir: ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯ ದಕ್ಷಿಣ ಆಫ್ರಿಕಾ ವಿರುದ್ಧದ ಸೂಪರ್-8 ಪಂದ್ಯದಲ್ಲಿ ಹೀನಾಯ ಸೋಲುಂಡ ಟೀಮ್ ಇಂಡಿಯಾಗೆ ಸದ್ಯ ಕ್ರಿಕಟ್ ಪ್ರೇಮಿಗಳಿಂದ ಭಾರೀ ಟೀಕೆ, ವ್ಯಂಗ್ಯಗಳು ವ್ಯಕ್ತವಾಗುತ್ತಿವೆ. 74 ರನ್‌ಗಳ ಭಾರಿ ಅಂತರದಿಂದ ಸೋತ ಭಾರತ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮುಗ್ಗರಿಸಿದ್ದು ತೀರ ಬೇಸರದ ಸಂಗತಿ.
188 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಲ್ಲಿ ಟೀಮ್ ಇಂಡಿಯಾ ವಿಫಲವಾಯಿತು. ತಂಡದ ಆಡಳಿತ ಮಂಡಳಿ ಮಾಡಿದ ಕೆಲವು ತಪ್ಪುಗಳು ಮೆನ್ ಇನ್ ಬ್ಲೂ ತಂಡದ ಸೋಲಿಗೆ ಮುಖ್ಯ ಕಾರಣವಾಯಿತು. ನಿರ್ದಿಷ್ಟವಾಗಿ ಹೇಳುವುದಾದರೆ, ಸರಣಿ ಫ್ಲಾಪ್ ಶೋ ನೀಡಿದ ಅಭಿಷೇಕ್ ಶರ್ಮಗೆ ಸ್ಥಾನ ನೀಡಿದ್ದು ಮತ್ತು ಉಪನಾಯಕ ಅಕ್ಷರ್ ಪಟೇಲ್ ಬದಲಿಗೆ ವಾಷಿಂಗ್ಟನ್ ಸುಂದರ್ ಅವರನ್ನು ಆಡಿಸುವ ಮೂಲಕ ಭಾರತೀಯ ಆಡಳಿತ ಮಂಡಳಿಯು ದೊಡ್ಡ ತಪ್ಪು ಮಾಡಿತು. ಇದಕ್ಕೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಹೆಡ್ಕೋಚ್ ಗಂಭೀರ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದು ಇಷ್ಟಕ್ಕೆ ನಿಲ್ಲಲ್ಲ. ಟೀಮ್ ಇಂಡಿಯಾ ಹೆಡ್ಕೋಚ್ ಆಗಿ ಗೌತಮ್ ಗಂಭೀರ್ ಅಧಿಕಾರ ವಹಿಸಿಕೊಂಡ ದಿನದಿಂದಲೂ ಭಾರತ ತಂಡದಲ್ಲಿ ಏನಾದರೂ ಒಂದು ಸಮಸ್ಯೆಗಳು ಉಂಟಾಗುತ್ತಲೇ ಇವೆ. ಈ ಕುರಿತಂತೆ ಮಾಜಿ ಕ್ರಿಕೆಟಿಗರು ಹಾಗೂ ದಿಗ್ಗಜರು ಗಂಭೀರ್ ಲೋಪದೋಷಗಳನ್ನು ಆಗಾಗ್ಗೆ ಎತ್ತಿಹಿಡಿಯುತ್ತಿರುತ್ತಾರೆ. ಕೆಲವರು ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳಿದರೆ, ಇನ್ನೂ ಕೆಲವರು ಪರೋಕ್ಷವಾಗಿ ಕುಟುಕುತ್ತಾರೆ.
ಗೌತಿ ಈಗೋ, ವೈಯಕ್ತಿಕ ಟಾರ್ಗೆಟ್
ಸ್ಟಾರ್ ಆಟಗಾರರ ವಿಷಯದಲ್ಲಿ ಗೌತಿ ತೆಗೆದುಕೊಳ್ಳುವ ನಿರ್ಧಾರಗಳು ಇಂತಹ ಟೀಕೆ, ಆರೋಪಗಳಿಗೆ ಕಾರಣವಾಗಿದೆ. ತಮ್ಮ ವೈಯಕ್ತಿಕ ಹಾಗೂ ಅಹಂನಿಂದ ಟೀಮ್ ಇಂಡಿಯಾವನ್ನು ಭಾರೀ ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ ಎಂಬ ಆರೋಪಗಳು ನೆಟ್ಟಿಗರಿಂದ ವ್ಯಕ್ತವಾಗುತ್ತಿವೆ. ಅಷ್ಟಕ್ಕೂ, ಇಲ್ಲಿಯವರೆಗೆ ಹೆಡ್ಕೋಚ್ ಆಗಿ ಗಂಭೀರ್ ಮಾಡಿದ ಮಿಸ್ಟೇಕ್ಗಳು ಯಾವುವು? ಕ್ರಿಕೆಟ್ ಪ್ರಿಯರ ಕೆಂಗಣ್ಣಿಗೆ ಗುರಿಯಾದ ನಿರ್ಧಾರಗಳು ಯಾವುದೆಲ್ಲ? ಎಂಬ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.
ಯಾವುದು ಆ 9 ಬಿಗ್ ಮಿಸ್ಟೇಕ್ಸ್?
- ಟಿ20 ವಿಶ್ವಕಪ್ನಲ್ಲಿ ಉಪನಾಯಕ ಅಕ್ಷರ್ ಪಟೇಲ್ ಡ್ರಾಪ್
- ಟಿ20 ಕ್ರಿಕೆಟ್ನಲ್ಲಿ ಉತ್ತುಂಗದಲ್ಲಿದ್ದ ಯಶಸ್ವಿ ಜೈಸ್ವಾಲ್ ಡ್ರಾಪ್
- ವೈಯಕ್ತಿಕ ಕಾರಣಗಳಿಂದ ಶ್ರೇಯಸ್ ಅಯ್ಯರ್ ಡ್ರಾಪ್
- ರಣಜಿ ಸೇರಿ ಇತರೆ ದೇಶಿಯ ಪಂದ್ಯಗಳಲ್ಲಿ ಉತ್ತಮ ಬೌಲಿಂಗ್ ಮಾಡಿದರೂ ಮೊಹಮ್ಮದ್ ಶಮಿಗಿಲ್ಲ ಅವಕಾಶ
- ಏಕದಿನ ತಂಡದ ಕ್ಯಾಪ್ಟನ್ ಸ್ಥಾನದಿಂದ ರೋಹಿತ್ ಶರ್ಮ ಔಟ್
- ಸೀನಿಯರ್ ಪ್ಲೇಯರ್ಗಳಾದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ಆರ್.ಅಶ್ವಿನ್ಗೆ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವಂತೆ ಒತ್ತಾಯ
- ಟೆಸ್ಟ್ನಿಂದ ದೇಶಿಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಸರ್ಫರಾಜ್ ಖಾನ್ ಡ್ರಾಪ್
- ಉತ್ತಮ ಇನ್ನಿಂಗ್ಸ್ ನೀಡಿದರೂ ರುತುರಾಜ್ ಗಾಯಕ್ವಾಡ್ಗೆ ಗುಡ್ಬೈ