ಬಿಗ್ ಬ್ಯಾಷ್ ಲೀಗ್ ನಂತರ ಭಾರತದಲ್ಲಿ ಆಶಸ್ ಆಯೋಜನೆಗೆ ಚಿಂತನೆ!
ಮೆಲ್ಬೋರ್ನ್: ಡಿಸೆಂಬರ್‌ನಲ್ಲಿ ಬಿಗ್ ಬ್ಯಾಷ್ ಲೀಗ್ ಟಿ20 ಟೂರ್ನಿಯ ಉದ್ಘಾಟನಾ ಪಂದ್ಯವನ್ನು ಚೆನ್ನೈನಲ್ಲಿ ಆಯೋಜಿಸುವುದಾಗಿ ಘೋಷಿಸಿರುವ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ (ಸಿಎ), ಭವಿಷ್ಯದಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಪ್ರತಿಷ್ಠಿತ ಆಶಸ್ ಟೆಸ್ಟ್ ಸರಣಿಯ ಪಂದ್ಯವೊಂದನ್ನೂ ಭಾರತದಲ್ಲಿ ಆಯೋಜಿಸಲು ಚಿಂತನೆ ನಡೆಸಿದೆ.
ಫ್ರಾಂಚೈಸಿ ಟಿ20 ಟೂರ್ನಿಯ ಆರಂಭಿಕ ಪಂದ್ಯ ಆಯೋಜನೆಯ ಸಿದ್ಧತೆಯಲ್ಲಿರುವ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಟಾಡ್‌ಗ್ರೀನ್‌ಬರ್ಗ್ ಆಶಸ್ ಆಯೋಜಿಸುವ ವಿಷಯ ಪ್ರಸ್ತಾಪಿಸಿದ್ದು, ತಕ್ಷಣಕ್ಕೆ ಇಂಥ ಯೋಜನೆ ಕಾರ್ಯಗತಗೊಳಿಸುವ ಸಾಧ್ಯತೆಗಳಿಲ್ಲ ಎಂದು ಪಾಡ್‌ಕಾಸ್ಟ್‌ನಲ್ಲಿ ತಿಳಿಸಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿ, ಬಿಸಿಸಿಐ ಜತೆಗೆ ನಮ್ಮ ಬಾಂಧವ್ಯ ಉತ್ತಮವಾಗಿದ್ದು, ಭಾರತದಲ್ಲಿ ಕ್ರಿಕೆಟ್ ಪಂದ್ಯವನ್ನು ನಡೆಸಲು ಹೆಚ್ಚಿನ ಅವಕಾಶಗಳಿವೆ. ಆದರೆ, ಬಿಡುವಿಲ್ಲದ ವೇಳಾಪಟ್ಟಿಯ ಜತೆಗೆ ಲಾಜಿಸ್ಟಿಕ್ಸ್ ನಿರ್ವಹಣೆ ದೃಷ್ಟಿಯಿಂದ ಆಶಸ್ ಟೆಸ್ಟ್ ಆಯೋಜನೆಗೆ ಮೂರು ಕ್ರಿಕೆಟ್ ಮಂಡಳಿಗಳ ನಡುವಿನ ಸಮನ್ವಯತೆ ಮುಖ್ಯವಾಗಿರಲಿದೆ ಎಂದಿದ್ದಾರೆ.
2027 ಆಶಸ್ ಟೆಸ್ಟ್ ಸರಣಿಗೆ ಇಂಗ್ಲೆಂಡ್ ಆತಿಥ್ಯವಹಿಸಲಿದ್ದು, ಜೋ ರೂಟ್ ಟೆಸ್ಟ್ ತಂಡದ ನಾಯಕನಾಗಿ ಮರು ನೇಮಕವಾಗುವ ಸಾಧ್ಯತೆಗಳಿವೆ.