ಮಹಿಳಾ ಟಿ20 ಏಷ್ಯಾಕಪ್: ಭಾರತಕ್ಕೆ ಇಂದು ಥಾಯ್ಲೆಂಡ್ ಸವಾಲು
ದುಬೈ: ಏಕದಿನ ಕ್ರಿಕೆಟ್ನಲ್ಲಿ ವಿಶ್ವ ಚಾಂಪಿಯನ್ ಪಟ್ಟವೇರಿದ್ದರೂ, ಚುಟುಕು ಕ್ರಿಕೆಟ್ನಲ್ಲಿ ಸಾಧಾರಣ ನಿರ್ವಹಣೆ ತೋರಿಸುತ್ತಿರುವ ಹರ್ಮಾನ್ಪ್ರೀತ್ ಕೌರ್ ಪಡೆ, ಬಲಿಷ್ಠ ನಿರ್ವಹಣೆಯೊಂದಿಗೆ ಲಯ ಕಂಡುಕೊಳ್ಳಲು ಸಜ್ಜಾಗಿದೆ. ಮಹಿಳಾ ಟಿ20 ಏಷ್ಯಾಕಪ್ನಲ್ಲಿ (
) ಭಾರತ ತಂಡ ಭಾನುವಾರ ಎ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಥಾಯ್ಲೆಂಡ್ ತಂಡವನ್ನು ಎದುರಿಸಲಿದ್ದು, ಶುಭಾರಂಭ ಕಾಣುವ ಆತ್ಮವಿಶ್ವಾಸದಲ್ಲಿದೆ.
ಭಾರತದ ಮಹಿಳೆಯರು ಕಳೆದೊಂದು ದಶಕದಲ್ಲಿ ಏಷ್ಯಾಕಪ್ನಲ್ಲಿ ಪ್ರಾಬಲ್ಯ ಸಾಧಿಸಿದ್ದು, 2016&17ರಿಂದ ಟಿ20 ಪ್ರಕಾರದ 5 ಆವೃತ್ತಿಗಳಲ್ಲಿ 3ರಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಆದರೆ ಇತ್ತೀಚೆಗೆ ಟಿ20 ಕ್ರಿಕೆಟ್ ಪ್ರಕಾರದಲ್ಲಿ ಭಾರತೀಯರ ನಿರ್ವಹಣೆ ಅಸ್ಥಿರವಾಗಿದೆ. ಹಾಲಿ ವರ್ಷದ ಟಿ20 ವಿಶ್ವಕಪ್ನಲ್ಲಿ ಭಾರತದ ಮಹಿಳೆಯರು ಉಪಾಂತ್ಯಕ್ಕೇರಲು ವಿಲರಾಗಿದ್ದರು. ಹಾಲಿ ವರ್ಷ ಆಡಿರುವ 16 ಟಿ20 ಪಂಧ್ಯಗಳಲ್ಲಿ ಭಾರತ 9ರಲ್ಲಿ ಸೋತಿದೆ.
ಚುಟುಕು ಕ್ರಿಕೆಟ್ ಪ್ರಕಾರದಲ್ಲಿ ನಾಯಕಿ ಹರ್ಮಾನ್ಪ್ರೀತ್ ಕೌರ್ರ ಕಳಪೆ ಫಾರ್ಮ್ ಕೂಡ ಕಳವಳಕ್ಕೆ ಕಾರಣವಾಗಿದೆ. ಇದೀಗ ಭಾರತ ತಂಡ ಏಷ್ಯಾದ ಪ್ರಮುಖ 2 ಸ್ಪರ್ಧೆಗಳಲ್ಲಿ ತನ್ನ ಪ್ರಾಬಲ್ಯ ಉಳಿಸಿಕೊಳ್ಳುವ ಸವಾಲು ಹೊಂದಿದೆ. ಏಷ್ಯಾಕಪ್ ಬೆನ್ನಲ್ಲೇ ಏಷ್ಯನ್ ಗೇಮ್ಸ್ ಟಿ20 ಸ್ಪರ್ಧೆಯಲ್ಲೂ ಚಿನ್ನದ ಪದಕ ಉಳಿಸಿಕೊಳ್ಳುವತ್ತ ಭಾರತ ತಂಡ ಗಮನಹರಿಸಬೇಕಿದೆ.
ಎ ಗುಂಪಿನಲ್ಲಿ ಭಾರತ, ಥಾಯ್ಲೆಂಡ್ ಜತೆಗೆ ಹಾಂಕಾಂಗ್, ಪಾಕಿಸ್ತಾನ ತಂಡಗಳೂ ಇವೆ. ಜೆಮೀಮಾ ರೋಡ್ರಿಗಸ್ ಗಾಯದಿಂದಾಗಿ ಗೈರಾಗಿರುವುದು ಭಾರತಕ್ಕೆ ಹಿನ್ನಡೆ ಎನಿಸಿದೆ. ಜೆಮೀಮಾ ಬದಲಿಗೆ ಪ್ರತಿಕಾ ರಾವಲ್ ಸ್ಥಾನ ಪಡೆದಿದ್ದರೂ, ಇದು ಮಧ್ಯಮ ಕ್ರಮಾಂಕದ ಕಳವಳವನ್ನು ಕಡಿಮೆ ಮಾಡಿಲ್ಲ. ಟಿ20ಯಲ್ಲಿ ಸ್ಮ$ತಿ ಮಂದನಾ ಮತ್ತು ಶೆಾಲಿ ವರ್ಮ ಮೇಲೆ ಭಾರತ ಹೆಚ್ಚು ಅವಲಂಬಿತವಾಗಿದೆ. ಜತೆಗೆ ಕಳಪೆ ಫೀಲ್ಡಿಂಗ್ ನಿರ್ವಹಣೆಯೂ ಭಾರತಕ್ಕೆ ದೊಡ್ಡ ಹಿನ್ನಡೆ ತಂದಿದೆ. ಕಳೆದ ಟಿ20 ವಿಶ್ವಕಪ್ನಲ್ಲೂ ಇದೇ ಭಾರತಕ್ಕೆ ಹೊಡೆತ ನೀಡಿತ್ತು.
ಸ್ಪಿನ್ ವಿಭಾಗದಲ್ಲಿ ದೀಪ್ತಿ ಶರ್ಮ ಭಾರತದ ಪ್ರಮುಖ ಅಸ್ತ್ರವಾಗಿದ್ದು, ಅವರಿಗೆ ಶ್ರೀಚರಣಿ, ರಾಧಾ ಯಾದವ್ ಮತ್ತು ಪ್ರೇಮಾ ರಾವತ್ ಸಾಥ್ ನೀಡಲಿದ್ದಾರೆ. ವೇಗದ ಬೌಲಿಂಗ್ನಲ್ಲಿ ಅನುಭವಿ ರೇಣುಕಾ ಸಿಂಗ್ಗೆ ಕ್ರಾಂತಿ ಗೌಡ್, ಅರುಂಧತಿ ರೆಡ್ಡಿ, ನಂದಿನಿ ಶರ್ಮ ಬೆಂಬಲ ಒದಗಿಸಬೇಕಿದೆ.
ಥಾಯ್ಲೆಂಡ್ ತಂಡ ಟೂರ್ನಿಯ ಮೊದಲ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ ಗೆದ್ದ ವಿಶ್ವಾಸ ಹೊಂದಿದೆ. 120 ರನ್ ಗಳಿಸಿದರೂ, ಹಾಂಕಾಂಗ್ ತಂಡವನ್ನು 114 ರನ್ಗಳಿಗೆ ನಿಯಂತ್ರಿಸಿದ ಥಾಯ್ಲೆಂಡ್ ಬೌಲಿಂಗ್ ನಿರ್ವಹಣೆ ಗಮನಸೆಳೆದಿದೆ.
*ನೇರಪ್ರಸಾರ: ಸೋನಿ ಸ್ಪೋರ್ಟ್ಸ್, ಸೋನಿ ಲಿವ್.