ಅವರು ಮೆಟ್ಟಿದ ಧೂಳಿಗೂ ನನ್ನ ಮಗ ಸಮನಲ್ಲ: ಸಂಜೀವ್ ಸೂರ್ಯವಂಶಿ
- ಟೀಮ್ ಇಂಡಿಯಾಗೆ ಆಯ್ಕೆಯಾಗಿರುವ 15 ವರ್ಷದ ವೈಭವ್ ಸೂರ್ಯವಂಶಿ
- ನನ್ನ ಮಗನನ್ನು ಸಚಿನ್-ಬ್ರಾಡ್‌ಮನ್‌ಗೆ ಹೋಲಿಸಬೇಡಿ
- ಅವರು ಮೆಟ್ಟಿದ ಧೂಳಿಗೂ ನನ್ನ ಮಗ ಸಮನಲ್ಲ: ಸಂಜೀವ್ ಸೂರ್ಯವಂಶಿ
ಕ್ರಿಕೆಟ್: ಈ ಭಾರಿಯ ಐಪಿಎಲ್ನಲ್ಲಿ ತನ್ನ ಸ್ಪೋಟಕ, ಅಮೋಘ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಆರಾಧಕರ ಮನಗೆದ್ದ ಆಟಗಾರನೆಂದರೆ ಅದು ವೈಭವ್ ಸೂರ್ಯವಂಶಿ ಎನ್ನಬಹುದು. ರಾಜಸ್ಥಾನ್ ರಾಯಲ್ಸ್ ತಂಡದ ಪರವಾಣಿ ಓಪನಿಂಗ್ ಮಾಡಿದ ಈ 15 ರ ಪೋರ 776 ರನ್ ಗಳಿಸಿ ಆರೆಂಜ್ ಕ್ಯಾಪ್ನ್ನು ತನ್ನ ಮುಡಿಗೇರಿ ಕೊಂಡಿದ್ದಾನೆ.
ಐಪಿಎಲ್ನಲ್ಲಿ ತೋರಿದ ಪ್ರದರ್ಶನವನ್ನು ಗುರುತಿಸಿದ ಟೀಂ ಇಂಡಿಯಾ ಆಯ್ಕೆಗಾರರು, ವೈಭವ್ ಸೂರ್ಯವಂಶಿಯನ್ನು ಐರ್ಲೆಂಡ್, ಇಂಗ್ಲೆಂಡ್ ಹಾಗೂ ಏಷ್ಯನ್ ಗೇಮ್ಸ್ ಟಿ-20 ತಂಡಕ್ಕೆ ಸೇರಿಸಿಕೊಂಡಿದ್ದಾರೆ.ಈ ಮೂಲಕ ಕೇವಲ 15 ವರ್ಷಕ್ಕೆ ಟೀ ಇಂಡಿಯಾ ತಂಡ ಸೇರಿದ ವೈಭವ್ ಸೂರ್ಯವಂಶಿ ಅತಿ ಚಿಕ್ಕ ವಯಸ್ಸಿನಲ್ಲಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.
ಈ ಮೊದಲು ಈ ದಾಖಲೆ ಕ್ರಿಕೆಟ್ ದೇವರೆಂದೇ ಖ್ಯಾತರಾಗಿದ್ದ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿತ್ತು. ವೈಭವ್ನ ಆಟಗವನ್ನು ಮೆಚ್ಚಿಕೊಂಡಿರುವ ಅಭಿಮಾನಿಗಳು, ಇವನನ್ನು ಸಚಿನ್ ತೆಂಡೂಲ್ಕರ್, ಡಾನ್ ಬ್ರಾಡ್‌ಮನ್‌ಗೆ ಹೋಲಿಸುತ್ತಿದ್ದು, ಇದು ವೈಭವ್ ಸೂರ್ಯವಂಶಿ ತಂದೆ (Vaibhav Suryavanshi Father) ಗೆ ಬೇಸರವಾಗಿದೆಯಂತೆ.
ಅವರು ಮೆಟ್ಟಿದ ಧೂಳಿಗೂ ನನ್ನ ಮಗ ಸಮನಲ್ಲ!
ವೈಭವ್ ಸೂರ್ಯವಂಶಿಯನ್ನು ಕ್ರಿಕೆಟ್ ದೇವರೆಂದೇ ಜನಜನಿತರಾದ ಸಚಿನ್ ತೆಂಡೂಲ್ಕರ್ ಅವರಿಗೆ, ಕ್ರಿಕೆಟ್ನ ದಂತಕಥೆ ಎಂದೇ ಹೇಳಲಾಗುವ ಡಾನ್ ಬ್ರಾಡ್‌ಮನ್‌ಗೆ ಹೋಲಿಸಲಾಗುತ್ತಿದೆ.
ಈ ಬಗ್ಗೆ ಮಾತನಾಡಿರುವ ವೈಭವ್ ಸೂರ್ಯವಂಶಿ ತಂದೆ, ಸಂಜೀವ್ ಸೂರ್ಯವಂಶಿ, ನನ್ನ ಮಗ ಟೀ ಇಂಡಿಯಾ ಆಯ್ಕೆಯಾಗಿರುವುದು ಬಹಳ ಖುಷಿಯನ್ನು ತಂದಿದೆ. ಆದರೆ ಅವನನ್ನು ಸಚಿನ್ಗೆ, ಬ್ರಾಡ್‌ಮನ್‌ಗೆ ಹೋಲಿಸುವುದು ತಪ್ಪು. ಅವರೆಲ್ಲಾ ಬಹುದೀರ್ಘ ಕಾಲದವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ತಮ್ನನ್ನು ತೋಡಿಗಿಸಿಕೊಂಡವರು. ನನ್ನ ಮಗ ಈಗ ಪಾದಾರ್ಪಣೆ ಮಾಡುತ್ತಿದ್ದಾನೆ, ಅವರು ಮೆಟ್ಟಿರು ಧೂಳಿನ ಕಣಕ್ಕೂ ನನ್ನ ಮಗ ಸಮನಲ್ಲ ಎಂದು ಹೇಳಿದ್ದಾರೆ.
ದೇವರ ದಾಖಲೆ ಮುರಿದ ವೈಭವ್!
ನವೆಂಬರ್ 1989 ರಲ್ಲಿ ಪಾಕಿಸ್ತಾನದ ವಿರುದ್ಧದ ಟೂರ್ನಿಗೆ 16 ವರ್ಷದ ಸಚಿನ್ ತೆಂಡೂಲ್ಕರ್ ಟೀಂ ಇಂಡಿಯಾ ತಂಡಕ್ಕೆ ಆಯ್ಕೆಯಾಗುವ ಮೂಲಕ ರಾಷ್ಟ್ರೀಯ ತಂಡ ಸೇರಿದ ದೇಶದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದರು.
ಈ ದಾಖಲೆಯನ್ನು ಸಚಿನ್ ಕಳೆದ 37 ವರ್ಷಗಳಿಂದ ಉಳಿಸಿಕೊಂಡು ಬಂದಿದ್ದರು. ಆದರೆ ಈಗ 15 ವರ್ಷದ ವೈಭವ್ ಸೂರ್ಯವಂಶಿ ಭಾರತ ತಂಡಕ್ಕೆ ಆಯ್ಕೆಯಾಗುವ ಮೂಲಕ ಕ್ರಿಕೆಟ್ ದೇವರೆಂದೆ ಖ್ಯಾತರಾಗಿರುವ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದ್ದಿದ್ದಾನೆ, (ಏಜನ್ಸೀಸ್).