ರಾಜತಾಂತ್ರಿಕ ಸಂಬಂಧಗಳ 75ನೇ ವರ್ಷಾಚರಣೆ: ಭಾರತ-ಜಪಾನ್ ತಂಡಗಳ ನಡುವೆ ಸುಜುಕಿ ಕಪ್ ಟಿ20 ಪಂದ್ಯ 
ಕ್ರಿಕೆಟ್

ರಾಜತಾಂತ್ರಿಕ ಸಂಬಂಧಗಳ 75ನೇ ವರ್ಷಾಚರಣೆ: ಭಾರತ-ಜಪಾನ್ ತಂಡಗಳ ನಡುವೆ ಸುಜುಕಿ ಕಪ್ ಟಿ20 ಪಂದ್ಯ

ನವದೆಹಲಿ: ಹಾಲಿ ಟಿ20 ವಿಶ್ವ ಚಾಂಪಿಯನ್ ಭಾರತ ತಂಡ ಮೊದಲ ಬಾರಿಗೆ ಜಪಾನ್ ವಿರುದ್ಧ ಅಂತಾರಾಷ್ಟ್ರೀಯ ಚುಟುಕು ಪಂದ್ಯವನ್ನಾಡಲಿದೆ. ಭಾರತ ಹಾಗೂ ಜಪಾನ್ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ 75ನೇ ವರ್ಷಾಚರಣೆಯ ಪ್ರಯುಕ್ತ ಈ ಪಂದ್ಯ ಆಯೋಜಿಸಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ.
ಸೆಪ್ಟೆಂಬರ್ 23ರಂದು ಜಪಾನ್‌ನ ತೋಚಿಗಿ ಸಾನೋ ಇಂಟರ್‌ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಇದಕ್ಕೆ ‘ಸುಜುಕಿ ಕಪ್’ ಎಂದು ಹೆಸೆರಿಡಲಾಗಿದೆ. ಶೃಂಗ ಸಭೆಯಲ್ಲಿ ಭಾರತದ ಪ್ರಧಾನಿ ಮೋದಿ ಹಾಗೂ ಜಪಾನ್‌ನ ಪ್ರಧಾನಿ ಸನೇ ತಕೈಚಿ ನಡುವಿನ ಒಪ್ಪಂದದ ಜತೆಗೆ ಕ್ರೀಡಾಕ್ಷೇತ್ರದಲ್ಲಿ ಸಹಕಾರ ನೀಡುವ ಸ್ಪೋರ್ಟ್ಸ್ 75 ಉಪಕ್ರಮದ ಮೊದಲ ಕಾರ್ಯಕ್ರಮ ಇದಾಗಿರಲಿದೆ.
ಐಚಿ ನಗೋಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ಅಂತಿಮ ಹಂತದ ಸಿದ್ಧತೆಯೂ ಇದಾಗಿರಲಿದೆ. ಸೆ.19 ರಿಂದ ಅಕ್ಟೋಬರ್ 4ರವರೆಗೆ ಏಷ್ಯಾಡ್ ನಡೆಯಲಿದ್ದು, ಭಾರತ ಪುರುಷರ ತಂಡ ಸೆ.28ರಂದು ಕ್ವಾರ್ಟರ್‌ೈನಲ್‌ನಲ್ಲಿ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.