ಕೊಹ್ಲಿ ವಕ್ತಾರರಿಗೆ ಸವಾಲು ಹಾಕಿದ ಧರ್ಮಗುರು ಫಲಹಾರಿ ಮಹಾರಾಜ್ 
ಕ್ರಿಕೆಟ್

"ಅಕೌಂಟ್​ ಚೆಕ್​ ಮಾಡಿ ಎಲ್ಲಾ ಬಯಲಾಗುತ್ತೆ"..ವಿರಾಟ್​-ಪ್ರೇಮಾನಂದ 5 ಕೋಟಿ ಡೀಲ್​ ಆರೋಪ; ಕೊಹ್ಲಿ ವಕ್ತಾರನಿಗೆ ಫಲಹಾರಿ ಮಹಾರಾಜ್ ಕೌಂಟರ್​! Dinesh Falahari Maharaj

ವಿರಾಟ್ ಕೊಹ್ಲಿ-ಪ್ರೇಮಾನಂದ ಜೀ ನಡುವೆ ₹5 ಕೋಟಿ ಡೀಲ್? ಕೊಹ್ಲಿ ವಕ್ತಾರರ ಹೇಳಿಕೆಗೆ 'ಬ್ಯಾಂಕ್ ಅಕೌಂಟ್ ಚೆಕ್ ಮಾಡಿ' ಎಂದು ಫಲಹಾರಿ ಮಹಾರಾಜ್ ತಿರುಗೇಟು ನೀಡಿದ ವಿವರ ಇಲ್ಲಿದೆ.

ವೃಂದಾವನ್​: ಪ್ರೀತಿ, ಕರುಣೆ, ಮಮಕಾರ ಮೊದಲಾದ ಮಾನವ ಸಂಬಂಧಿ ಸಂಗತಿಗಳ ಬಗ್ಗೆ ಪ್ರವಚನ ನೀಡುತ್ತಾ, ಎರಡು ಕಿಡ್ನಿಗಳನ್ನು ಕಳೆದುಕೊಂಡಿದ್ದರೂ, ಪವಾಡ ಸದೃಶ್ಯವಾಗಿ ಬದುಕಿರುವ ವೃಂದಾವನದ ಪ್ರೇಮಾನಂದ ಮಹಾರಾಜರ ಮೇಲೆ ಗಂಭೀರ ಆರೋಪವೊಂದು ಕೇಳಿಬಂದಿದೆ.

ಪ್ರೇಮಾನಂದ ಮಹಾರಾಜರ ಖ್ಯಾತಿಯನ್ನು ಹೆಚ್ಚಿಸುವ ಉದ್ದೇಶದಿಂದ ಪ್ರಸಿದ್ಧ ಕ್ರಿಕೆಟ್​ ಆಟಗಾರ, ವಿರಾಟ್​ ಕೊಹ್ಲಿಗೆ 5 ಕೋಟಿ ರೂಪಾಯಿ ಹಣವನ್ನು ನೀಡಲಾಗಿದೆ ಎಂದು ದಿನೇಶ್ ಫಲಹಾರಿ ಮಹಾರಾಜ್ ಎನ್ನುವವರು ಗಂಭೀರ ಸ್ವರೂಪದ ಆರೋಪವನ್ನು ಮಾಡಿದ್ದಾರೆ.

ಇದೊಂದು ಆಧಾರರಹಿತ ಆರೋಪ!

ಆದರೆ, ಈ ಆರೋಪಕ್ಕೆ, ವಿರಾಟ್​ ಕೊಹ್ಲಿ ಅವರ ವಕ್ತಾರ, ಇದೊಂದು ಆಧಾರಹಿತ ಆರೋಪವಾಗಿದೆ. ವಿರಾಟ್​ ಕೊಹ್ಲಿ ಹಾಗೂ ಅವರ ಪತ್ನಿ ಅನುಷ್ಕಾ ಶರ್ಮಾ ಪ್ರೇಮಾನಂದ ಮಹಾರಾಜರ ಮೇಲೆ ಹೊಂದಿರುವ ಗೌರವ, ಭಕ್ತಿ ಹಾಗೂ ನಂಬಿಕೆಯ ಆಧಾರದಲ್ಲಿ ಬೇಟಿ ನೀಡಿದ್ದಾರೆ. ಇದರ ಹಿಂದೆ ಯಾವುದೇ ವ್ಯವಹಾರವಿಲ್ಲ. ಯಾರೂ ಈ ರೀತಿಯ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ನೀಡಿದ್ದರು.

ಅಕೌಂಟ್​ ಚೆಕ್​ ಮಾಡಿ, ಎಲ್ಲಾ ಗೊತ್ತಾಗುತ್ತೆ!

ವಿರಾಟ್​ ಕೊಹ್ಲಿ ಅವರ ವಕ್ತಾರ, ಇದೊಂದು ಆಧಾರರಹಿತ ಆರೋಪ, ಇದು ಕೇವಲ ಒಂದು ವದಂತಿ ಎಂದು ಹೇಳಿದ್ದಕ್ಕೆ, ದಿನೇಶ್ ಫಲಹಾರಿ ಮಹಾರಾಜ್ ಮತ್ತೊಮ್ಮೆ ಕೌಂಟರ್​ ಕೊಟ್ಟಿದ್ದು, ಹೋಗಿ ಬ್ಯಾಂಕ್​ ಅಕೌಂಟ್ ಚೆಕ್​ ಮಾಡಿ, ದುಡ್ಡಿ ಬಂದಿದಿಯೋ? ಇಲ್ಲವೋ? ಎನ್ನವುದು ಬಯಲಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.

ಮಾತನ್ನು ಮುಂದುವರಿಸಿದ ಫಲಹಾರಿ ಮಹಾರಾಜ್, ಇದೊಂದು ಪಿಆರ್​ ತಂತ್ರವಾಗಿದ್ದು, ಇದನ್ನು ಪ್ರೇಮಾನಂದ ಮಹಾರಾಜರ ಪಿಆರ್​ಗಳು, ವಿರಾಟ್ ಕೊಹ್ಲಿಯನ್ನು ಸಂಪರ್ಕಿಸಿ, ಬಾಬಾ ರ ದರ್ಶನಕ್ಕೆ ಬರುವಂತೆ ಕೇಳಿಕೊಂಡಿದ್ದಾರೆ. ಅಂತೆಯೇ 5 ಕೋಟಿ ಹಣವನ್ನು ನೀಡುವುದಾಗಿ ಹೇಳಿದ್ದು, ಅದರಂತೆ 2 ಕೋಟಿ ರೂಪಾಯಿ ಚೆಕ್​ ನೀಡಿದರೆ, 3 ಕೋಟಿಯನ್ನು ಕೊಹ್ಲಿ ಅವರ ದೆಹಲಿಯ ನಿವಾಸಕ್ಕೆ ಕ್ಯಾಶ್​ ಕಳುಹಿಸಿದ್ದಾರೆಂದು ಹೇಳಿದ್ದಾರೆ.

ಸರ್ಕಾರ ತನಿಖೆ ನಡೆಸಲಿ!

ಪ್ರೇಮಾನಂದ ಮಹರಾಜ್​​ರನ್ನು ಭೇಟಿ ಮಾಡಲು ವಿರಾಟ್​ ಕೊಹ್ಲಿ ಹಣ ಪಡೆದಿದ್ದಾರೆ ಎಂದು ದಿನೇಶ್ ಫಲಹಾರಿ ಮಹಾರಾಜ್ ಮಾಡಿರುವ ಆರೋಪ, ಪ್ರೇಮಾನಂದರ ಭಕ್ತವೃಂಧದ ಕೋಪಕ್ಕೆ ಕಾರಣವಾಗಿದೆ. ದಿನೇಶ್ ಫಲಹಾರಿ ಮಹಾರಾಜ್ ಅವರು ಹೀಗೆ ಸುಖಾಸುಮ್ಮನೆ ಆರೋಪ ಮಾಡಬಾರದು. ಇದರಿಂದ ಮಹಾರಾಜರ ಬಗ್ಗೆ ತಪ್ಪು ಅಭಿಪ್ರಾಯ ಮೂಡುತ್ತದೆ.

ಹೀಗಾಗಿ, ಈ ದಿನೇಶ್ ಫಲಹಾರಿ ಮಹಾರಾಜ್ ಅವರ ವಿರುದ್ಧ ಸರ್ಕಾರ ತನಿಖೆ ನಡೆಸಬೇಕು. ಅವರು ಮಾಡಿರುವ ಆರೋಪ ಸುಳ್ಳಾಗಿದ್ದರೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕಾಗಿ ಪ್ರೇಮಾನಂದ್​ ಮಹಾರಾಜರ ಭಕ್ತರು ಆಗ್ರಹಿಸಿದ್ದಾರೆ, (ಏಜೆನ್ಸೀಸ್).