ಚೊಚ್ಚಲ ರಣಜಿ ಟ್ರೋಫಿ ಗೆದ್ದ ಜಮ್ಮು-ಕಾಶ್ಮೀರ ತಂಡಕ್ಕೆ ಸಿಕ್ಕ ಒಟ್ಟು ಬಹುಮಾನವೆಷ್ಟು ಗೊತ್ತೇ?
ಬೆಂಗಳೂರು: ಹುಬ್ಬಳ್ಳಿಯಲ್ಲಿ ಶನಿವಾರ ಮುಕ್ತಾಯಗೊಂಡ ಫೈನಲ್ನಲ್ಲಿ ಚೊಚ್ಚಲ ರಣಜಿ ಟ್ರೋಫಿ (Ranji Trophy) ಗೆದ್ದ ಜಮ್ಮು-ಕಾಶ್ಮೀರ (Jammu and Kashmir) ತಂಡ ಒಟ್ಟು 7 ಕೋಟಿ ರೂ. ಬಹುಮಾನ ಪಡೆದಿದೆ. ಬಿಸಿಸಿಐನಿಂದ 5 ಕೋಟಿ ರೂ. ಬಹುಮಾನ (reward) ಪಡೆದರೆ, ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಸರ್ಕಾರದಿಂದ 2 ಕೋಟಿ ರೂ. ಬಹುಮಾನ ಘೋಷಿಸಿದ್ದಾರೆ. ಜತೆಗೆ ಓಮರ್ ಅಬ್ದುಲ್ಲಾ ರಾಜ್ಯದ ಆಟಗಾರರಿಗೆ ಸರ್ಕಾರಿ ಉದ್ಯೋಗದ ಭರವಸೆಯನ್ನೂ ನೀಡಿದ್ದಾರೆ.
ರನ್ನರ್ಅಪ್ ಕರ್ನಾಟಕ ತಂಡ ಬಿಸಿಸಿಐನಿಂದ 3 ಕೋಟಿ ರೂ. ಬಹುಮಾನ ಪಡೆಯಿತು. ಸರಣಿಶ್ರೇಷ್ಠ ಅಕಿಬ್ ದಾರ್ 2.5 ಲಕ್ಷ ರೂ. ಪಡೆದರೆ, ಫೈನಲ್ ಪಂದ್ಯಶ್ರೇಷ್ಠ ಶುಭಂ ಪುಂದಿರ್ 50 ಸಾವಿರ ರೂ. ಪಡೆದರು.
ಚೊಚ್ಚಲ ರಣಜಿ ಗೆದ್ದ ಜಮ್ಮು-ಕಾಶ್ಮೀರ ತಂಡಕ್ಕೆ ಅಭಿನಂದನೆಗಳು. ಜಮ್ಮು-ಕಾಶ್ಮೀರದ ಜನತೆಗೆ ಹೆಮ್ಮೆಯ ಕ್ಷಣ. ಇದು ಇನ್ನಷ್ಟು ಯುವಜನರಿಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಸ್ಫೂರ್ತಿಯಾಗಲಿ.
ಚೊಚ್ಚಲ ರಣಜಿ ಗೆದ್ದ ಜಮ್ಮು-ಕಾಶ್ಮೀರದ ಐತಿಹಾಸಿಕ ಸಾಧನೆಯನ್ನು ಭಾರತೀಯ ಕ್ರಿಕೆಟ್ ವಲಯ ಮುಕ್ತ ಕಂಠದಿಂದ ಪ್ರಶಂಸಿಸಿದೆ. ಐಸಿಸಿ ಅಧ್ಯಕ್ಷ ಜಯ್ ಷಾ, ಮಾಜಿ ಸ್ಪಿನ್ನರ್ಗಳಾದ ಹರ್ಭಜನ್ ಸಿಂಗ್, ಆರ್. ಅಶ್ವಿನ್, ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಜಮ್ಮು-ಕಾಶ್ಮೀರ ತಂಡವನ್ನು ಕೊಂಡಾಡಿದ್ದಾರೆ.