- ಟೆಸ್ಟ್ ಪಂದ್ಯದಿಂದ ದಿಢೀರ್ ಹೊರನಡೆದ ಕ್ಯಾಪ್ಟನ್ ಗಿಲ್
- ವಿಪರೀತ ಕುತ್ತಿಗೆ ಸೆಳೆತ ಕಾಣಿಸಿಕೊಂಡ ಬೆನ್ನಲ್ಲೇ ಆಸ್ಪತ್ರೆಗೆ ದಾಖಲು
ಪಶ್ಚಿಮ ಬಂಗಾಳ: ಕುತ್ತಿಗೆ ನೋವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಿಂದ ದಿಢೀರ್ ಹೊರನಡೆದ ಕ್ಯಾಪ್ಟನ್ ಶುಭಮನ್ ಗಿಲ್, ವಿಪರೀತ ನೋವಿನಿಂದ ಕೋಲ್ಕತದ ಆಸ್ಪತ್ರೆಗೆ ದಾಖಲಾದರು. ಪಂದ್ಯದ ನಡುವೆಯೇ ಅವರು ಹೊರ ಹೋಗಿದ್ದು, ಸದ್ಯ ಕ್ರಿಕೆಟ್ ಪ್ರಿಯರಲ್ಲಿ ತೀವ್ರ ಆತಂಕ ಮೂಡಿಸಿದೆ.
ಈಡನ್ ಗಾರ್ಡನ್ಸ್‌ನಿಂದ ಭಾರತೀಯ ಕ್ರಿಕೆಟ್ ತಂಡದ ವೈದ್ಯರೊಂದಿಗೆ ಗಿಲ್ ಹೊರಡುವಾಗ ಅವರ ಕುತ್ತಿಗೆಗೆ ಬ್ರೇಸ್ ಹಾಕಲಾಗಿತ್ತು. ವಿಪರೀತ ಕುತ್ತಿಗೆ ಸೆಳೆತ ಕಾಣಿಸಿಕೊಂಡ ಬೆನ್ನಲ್ಲೇ ಅವರನ್ನು ಚಿಕಿತ್ಸೆಗೆ ಒಳಪಡಿಸಲಾಯಿತು. ಪ್ರಸ್ತುತ, ವೈದ್ಯಕೀಯ ಸ್ಕ್ಯಾನ್‌ಗಳು ಮತ್ತು ಪರೀಕ್ಷೆಗಳನ್ನು ನಡೆಸಲಾಗಿದ್ದು. ಬಿಸಿಸಿಐ ವೈದ್ಯಕೀಯ ತಂಡವು, ಗಿಲ್ ಆರೋಗ್ಯದ ಬಗ್ಗೆ ಕ್ಷಣ ಕ್ಷಣದ ಮಾಹಿತಿಯನ್ನು ಪಡೆಯುತ್ತಿದೆ.
ಗಿಲ್ ಬಗ್ಗೆ ಮಾತನಾಡಿದ ಭಾರತದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್, "ಗಿಲ್ ತುಂಬಾ ಫಿಟ್ ಆಗಿರುವ ವ್ಯಕ್ತಿ. ಇಂದು ಬೆಳಗ್ಗೆ ಅವರಿಗೆ ಕಾಣಿಸಿಕೊಂಡ ಕುತ್ತಿಗೆ ನೋವು ದುರದೃಷ್ಟಕರ. ಅವರಿಂದ ಮತ್ತೊಂದು ಉತ್ತಮ ಬ್ಯಾಟಿಂಗ್ ಪಾರ್ಟ್ನರ್ಶಿಪ್ ಅಗತ್ಯವಿತ್ತು. ಆದರೆ, ಕೆಟ್ಟ ಸಮಯ ಹೀಗಾಯಿತು" ಎಂದು ಹೇಳಿದರು,(ಏಜೆನ್ಸೀಸ್).