ಯಾರೊಂದಿಗೆ ಸೋತರು ಪಾಕಿಸ್ತಾನದ ವಿರುದ್ಧ ಸೋಲುವಂತಿಲ್ಲ: ಜೆಮಿಮಾ  
ಕ್ರಿಕೆಟ್

ಪಾಕಿಸ್ತಾನದ ವಿರುದ್ಧ ಸೋಲುವಂತಿಲ್ಲ....ಟಿ-20 ವಿಶ್ವಕಪ್​ನಲ್ಲಿ ಇಂಡೋ-ಪಾಕ್ ವನಿತೆಯರ ಕಾಳಗ; ಪಂದ್ಯಕ್ಕೂ ಮುನ್ನ ಜೆಮಿಮಾ ರೋಡ್ರಿಗಸ್ ಹೇಳಿದ್ದೇನು? Jemimah Rodrigues

ಪ್ರಮುಖ ಮುಖ್ಯಾಂಶಗಳು

  • ಭಾನುವಾರ (ಜೂ.14) ಇಂಡಿಯಾ-ಪಾಕಿಸ್ತಾನ ವಿರುದ್ಧ ಹೈವೋಲ್ಟೆಜ್​ ಪಂದ್ಯ
  • ಪಂದ್ಯದ ಬಗ್ಗೆ ಜೆಮಿಮಾ ರೋಡ್ರಿಗಸ್ ಹೇಳಿದ್ದೇನು?
  • ಯಾರೊಂದಿಗೆ ಸೋತರು ಪಾಕಿಸ್ತಾನದ ವಿರುದ್ಧ ಸೋಲುವಂತಿಲ್ಲ: ಜೆಮಿಮಾ
ಕ್ರಿಕೆಟ್​: ಶುಕ್ರವಾರ (ಜೂ.12) ದಿಂದ ಇಂಗ್ಲೆಂಡ್​ ಮತ್ತು ವೇಲ್ಸ್​ನಲ್ಲಿ ಮಹಿಳಾ ಟಿ-20 ವಿಶ್ವಕಪ್​ ಟೂರ್ನಿ ಆರಂಭವಾಗಿದ್ದು, ಮೊದಲ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್​ನ ವನಿತೆಯರು ಶುಭಾರಂಭ ಮಾಡಿದ್ದಾರೆ.
ಆದರೆ ಕ್ರಿಕೆಟ್​ನಲ್ಲಿ ಜಿದ್ದಾಜಿದ್ದಿನ ಮ್ಯಾಚ್​ ಎಂದರೆ ಅದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವಾಗಿದೆ, ನಾಳೆ (ಭಾನುವಾರ, ಜೂ.14) ಬರ್ಮಿಂಗ್ಹ್ಯಾಮ್​ನ ಎಡ್ಜ್‌ಬಾಸ್ಟನ್ ನಲ್ಲಿ ಭಾರತದ ವನಿತೆಯರು ಪಾಕಿಸ್ತಾನದ ಮಹಿಳಾ ತಂಡವನ್ನು ಎದುರಿಸಲು ಸಿದ್ಧವಾಗಿದೆ.
ಇದೀಗ ಈ ಪಂದ್ಯಕ್ಕೂ ಮುನ್ನ ಭಾರತ ಮಹಿಳಾ ತಂಡದ ಸ್ಪೋಟಕ ಬ್ಯಾಟರ್​​ ಜೆಮಿಮಾ ರೋಡ್ರಿಗಸ್ (Jemimah Rodrigues) ನೀಡಿರುವ ಹೇಳಿಕೆಯೊಂದು ಈಗ ಸೋಷಿಯಲ್​ ಮೀಡಿಯಾನಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಪಾಕಿಸ್ತಾನದ ವಿರುದ್ಧ ಮಾತ್ರ ಸೋಲಬಾರದು!

ಭಾನುವಾರ ಪಾಕಿಸ್ತಾನ ವಿರುದ್ಧ ನಡೆಯಲಿರುವ ಪಂದ್ಯದ ಹಿನ್ನಲೆ ತಯಾರಿ ಬಗ್ಗೆ ಮಾತನಾಡಿದ ಜೆಮಿಮಾ, ನಾನು ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯವನ್ನು ಆಡುವಾಗ ತಂಡದ ನಾಯಕಿ ಹರ್ಮನ್​ಪ್ರಿತ್​ ಇದು ಇಂಡಿಯಾ ಪಾಕಿಸ್ತಾನ ಪಂದ್ಯ. ಪ್ರೇಕ್ಷಕರು ನಮ್ಮ ಮೇಲೆ ಬಹಳ ನಂಬಿಕೆ ಇಟ್ಟಿರುತ್ತಾರೆ, ಹೀಗಾಗಿ ಒತ್ತಡ ಕೂಡ ಅಧಿಕವಾಗಿರುತ್ತದೆ ಎಂದು ಹೇಳಿದ್ದರು.
ಅಷ್ಟೇ ಅಲ್ಲ, ನನ್ನ ಬಿಲ್ಡಿಂಗ್​ ವ್ಯಾಚ್​ಮ್ಯಾನ್​ ಜೆಮಿಮಾ, ನೀವು ಯಾರ ಜೊತೆ ಬೇಕಾದರೂ ಸೋಲಿ ಆದರೆ, ಪಾಕಿಸ್ತಾನದ ವಿರುದ್ಧ ಮಾತ್ರ ಸೋಲಬಾರದು ಎಂದು ಹೇಳಿದ್ದರು. ಅಂದರೆ ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ಜನ ಎಷ್ಟು ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಾರೆ ಹಾಗೆಯೇ ನಮ್ಮ ಮೇಲೆ ಎಷ್ಟು ಒತ್ತಡ ಇರುತ್ತದೆ ಎಂದು ನೀವು ಊಹಿಸಿ ಎಂದು ರೋಡ್ರಿಗಸ್ ಹೇಳಿದ್ದಾರೆ.

ವಿಶ್ವಕಪ್​ ಎತ್ತುವುದೇ ನಮ್ಮ ಗುರಿ!

2025 ರಲ್ಲಿ ನಾವು ಐಸಿಸಿ ಮಹಿಳಾ ವಿಶ್ವಕಪ್​ನ್ನು ಗೆದ್ದಿದ್ದೆವೆ. ಈಗ ಅದೇ ಉತ್ಸಾಹದಲ್ಲಿ ಇಂಗ್ಲೆಂಡ್​ ತಲುಪಿದ್ದು, ಈ ಭಾರಿ ಚೊಚ್ಚಲ ಮಹಿಳಾ ಟಿ-20 ವಿಶ್ವಕಪ್​ನ್ನು ಗೆಲ್ಲುವುದೇ ನಮ್ಮ ಗುರಿಯಾಗಿದೆ ಎಂದು ಜೆಮಿಮಾ ರೋಡ್ರಿಗಸ್ ಹೇಳಿದ್ದಾರೆ.
ಇಂದು ಬೆಳಿಗ್ಗೆ ನಾವು ಫೈನಲ್​ನಲ್ಲಿ ಟ್ರೋಫಿ ಕೈಯಲ್ಲಿ ಹಿಡಿದಿರುವುದನ್ನು ನೆನೆಸಿಕೊಂಡಿದ್ದೆವೆ, ಪ್ರತಿ ಪಂದ್ಯಕ್ಕೆ ತಯಾರುವ ಮುನ್ನ ಇದನ್ನೊಮ್ಮೆ ಮಾಡುತ್ತೆವೆ. ಇದು ಟೂರ್ನಿಯಲ್ಲಿ ನಮ್ಮ ಗಮನ ಕೇವಲ ಟ್ರೋಫಿ ಕಡೆಗೆ ಕೇಂದ್ರಕೃತವಾಗುವಲ್ಲಿ ಸಹಾಯಕವಾಗುತ್ತದೆ ಎಂದು ಅವರು ಹೇಳಿದ್ದಾರೆ, (ಏಜನ್ಸೀಸ್​).