ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ಬೌಲಿಂಗ್ ಪ್ರದರ್ಶನದ ಬಗ್ಗೆ ತುಟಿ ಬಿಚ್ಚಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್, ಬುಮ್ರಾ ಏಕದಿನ ಮತ್ತು ಟಿ20 ಕ್ರಿಕೆಟ್ನಲ್ಲಿ ನಂಬರ್ 1 ಬೌಲರ್ ಎಂಬುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳುತ್ತಲೇ, ತಮ್ಮ ಟೀಕಾ ಪ್ರಹಾರವನ್ನೂ ಮಾಡಿದ್ದಾರೆ.
ಟಿ20 ಮತ್ತು ಏಕದಿನ ಕ್ರಿಕೆಟ್ನಲ್ಲಿ ಬುಮ್ರಾ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ವೈಟ್-ಬಾಲ್ ಕ್ರಿಕೆಟ್ನಲ್ಲಿ ಬುಮ್ರಾ ಒಬ್ಬ ಗುಣಮಟ್ಟದ ಬೌಲರ್ ಮತ್ತು ನಿರ್ಣಾಯಕ ಸಮಯದಲ್ಲಿ ತಂಡಕ್ಕೆ ಅತ್ಯುತ್ತಮ ಕೊಡುಗೆ ನೀಡುತ್ತಾರೆ. ಆದರೆ, ಅದೇ ಟೆಸ್ಟ್ ಕ್ರಿಕೆಟ್ನಲ್ಲಿ ಅವರಿಂದ ಅಂತಹ ಪ್ರದರ್ಶನವೇ ಇಲ್ಲ. ಟಿ20 ಮತ್ತು ಏಕದಿನ ಕ್ರಿಕೆಟ್ಗೆ ಹೋಲಿಸಿದರೆ, ಆತ ಇನ್ನೂ ಹೆಚ್ಚಿನದನ್ನು ಕೊಟ್ಟು ಸಾಬೀತುಪಡಿಸಬೇಕಾಗಿದೆ ಎಂದರು.
ಶುಭಂಕರ್ ಮಿಶ್ರಾ ಅವರ ಪಾಡ್ಕಾಸ್ಟ್ನಲ್ಲಿ ಓಪನ್ ಆಗಿ ಮಾತನಾಡಿದ ಯೂನಿಸ್, ಇಲ್ಲಿ ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹೇಜಲ್ವುಡ್ ಅವರಂತಹ ಬೌಲರ್ಗಳು ಮತ್ತು ಇಂಗ್ಲಿಷ್ ವೇಗಿಗಳನ್ನು ಕಡೆಗಣಿಸುವಂತಿಲ್ಲ. ಒತ್ತಡದಲ್ಲಿ ಟಿ20 ಮತ್ತು ಏಕದಿನ ಪಂದ್ಯಗಳಲ್ಲಿ ಬುಮ್ರಾ ಪ್ರದರ್ಶನ ಎಲ್ಲರಿಗಿಂತ ವಿಭಿನ್ನವಾಗಿದೆ. ಆದರೆ, ಇಂಜುರಿ ಮತ್ತು ವಿಶ್ರಾಂತಿಯ ಹೆಸರಿನಲ್ಲಿ ತೆಗೆದುಕೊಳ್ಳುವ ಸಮಯ ಬುಮ್ರಾ ಅವರ ಟೆಸ್ಟ್ ಪಂದ್ಯಗಳ ಸಂಖ್ಯೆಯನ್ನು ಇಳಿಸುತ್ತಿದೆ ಎಂದಿದ್ದಾರೆ.
ಬೆನ್ನುನೋವು ಸೇರಿದಂತೆ ಇತರೆ ಸಮಸ್ಯೆಗಳಿಂದಾಗಿ ನಿರ್ಣಾಯಕ ಸರಣಿಯ ಸಮಯಗಳಲ್ಲೂ ವಿಶ್ರಾಂತಿ ಪಡೆದಿದ್ದಾರೆ. 2024ರ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಮೊಹಮ್ಮದ್ ರಿಜ್ವಾನ್ ವಿಕೆಟ್ ಪಡೆಯುವ ಮೂಲಕ ಪಂದ್ಯದ ದಿಕ್ಕನ್ನು ಬದಲಿಸಿದ್ದು ಇದೇ ಬುಮ್ರಾ. ಉತ್ತಮ ರನ್ರೇಟ್ ಕಂಟ್ರೋಲ್ ಮಾಡಿಕೊಂಡಿದ್ದ ಸಮಯದಲ್ಲೇ ಜಸ್ಪ್ರಿತ್ ಅವರ ಓವರ್ ನಿರ್ಣಾಯಕವಾಯಿತು. ಅಲ್ಲೇ ನಾವು ವಿಕೆಟ್ ಕಳೆದುಕೊಂಡೆವು ಎಂದು ಹೇಳಿದ್ದಾರೆ. ಅತ್ತ ತೊಟ್ಟಿಲು ತೂಗಿದಂತೆಯೂ ಆಯಿತು, ಇತ್ತ ಚಿವುಟಿದಂತೆಯೂ ಆಯಿತು ಎಂಬಂತೆ ಯೂನಿಸ್ ನೀಡಿರುವ ಹೇಳಿಕೆಗಳು ಮತ್ತೊಮ್ಮೆ ಪಾಕಿಸ್ತಾನ ಮಂದಿಯ ನರಿಬುದ್ಧಿಗೆ ಸಾಕ್ಷಿ ಎಂಬುದನ್ನು ಸಾಬೀತುಪಡಿಸಿದೆ,(ಏಜೆನ್ಸೀಸ್).