ಎಣ್ಣೆ ಏಟಲ್ಲಿ ಬಾಯ್ಫ್ರೆಂಡ್ ಜೊತೆ ಜಗಳವಾಡಿಕೊಂಡೆ ಎಂದ ಶ್ರೇಷ್ಠಾ
- ಐಪಿಎಲ್ನಲ್ಲಿ ಶ್ರೇಯಸ್ ಅಯ್ಯರ್ ಮಿಂಚಿನ ಬ್ಯಾಟಿಂಗ್
- ಸೋಷಿಯಲ್ ಮೀಡಿಯಾನಲ್ಲಿ ಶ್ರೇಯಸ್ ಸಹೋದರಿ ಶ್ರೇಷ್ಠಾ ಅಯ್ಯರ್ ಬ್ರೇಕಪ್ ಸ್ಟೋರಿ ವೈರಲ್
- ಎಣ್ಣೆ ಏಟಲ್ಲಿ ಬಾಯ್ಫ್ರೆಂಡ್ ಜೊತೆ ಜಗಳವಾಡಿಕೊಂಡೆ ಎಂದ ಶ್ರೇಷ್ಠಾ
ವೈರಲ್: ಪ್ರಸ್ತುತ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿರುವ ಶ್ರೇಯಸ್ ಅಯ್ಯರ್ (Shreyas Iyer) ತಮ್ಮ ಬ್ಯಾಟಿಂಗ್ ಮೂಲಕ ಸದ್ದು ಮಾಡುತ್ತಿದ್ದರೆ, ಇವರ ತಂಗಿ ಶ್ರೇಷ್ಠಾ (Shrestha Iyer) ಅಯ್ಯರ್ ತಮ್ಮ ಬ್ರೇಕಪ್ ಸ್ಟೋರಿ ಮೂಲಕ ವೈರಲ್ ಆಗುತ್ತಿದ್ದಾರೆ.
ಎಣ್ಣೆ ಏಟಲ್ಲಿ ಬ್ರೇಕಪ್!
ಶ್ರೇಯಸ್ ಅಯ್ಯರ್ ತಂಗಿ ಶ್ರೇಷ್ಠಾ ಅಯ್ಯರ್ ಒಬ್ಬಳು ನಟಿ, ನೃತ್ಯಪಟು ಮತ್ತು ಮಾಡೆಲ್ ಆಗಿದ್ದಾರೆ. ಇವರು ಇತ್ತೀಚೆಗೆ ಸ್ಟ್ಯಾಂಡ್-ಅಪ್ ಕಮೆಡಿಯನ್ ಪ್ರಣಿತ್ ಮೊರೆ ಅವರ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಈ ಸಂದರ್ಭದಲ್ಲಿ ಪ್ರಣಿತ್ ಶ್ರೇಷ್ಠಳಿಗೆ ನೀವು ಮಧ್ಯಪಾನವನ್ನು ಮಾಡುತ್ತಿರಾ? ಎಂದು ಕೇಳಿದರು. ಆಗ ಶ್ರೇಷ್ಠಾ, ನಾನು ಮೊದಲು ಕುಡಿಯುತ್ತಿದೆ, ಅದರೆ ಈಗ ಅದನ್ನು ಬಿಟ್ಟು ಬಹಳ ಸಮಯವಾಗಿದೆ ಎಂದು ಹೇಳಿದ್ದಾರೆ.
ನಂತರ ಏಕೆ ನೀವು ಕುಡಿಯುವುದನ್ನು ಬಿಟ್ಟರಿ? ಏನಾದರೂ ಅಚಾತುರ್ಯವಾಗಿತ್ತೆ? ಎಂದು ಪ್ರಣಿತ್ ಮರುಪ್ರಶ್ನೆ ಕೇಳಿದಾಗ, ಶ್ರೇಷ್ಠಾ, ಹೌದು, ಒಂದು ದಿನ ನಾನು ನನ್ನ ಗೆಳತಿ ಇಬ್ಬರೂ ಫುಲ್ ಟೈಟ್ ಆಗಿ ಒಂದೇ ದಿನ ನಾವಿಬ್ಬರೂ ನಮ್ಮಿಬ್ಬರ ಬಾಯ್ಫ್ರೆಂಡ್ಗಳ ಜೊತೆ ಬ್ರೇಕಪ್ ಮಾಡಿಕೊಂಡಿದ್ದೆವು ಎಂದು ಹೇಳಿದ್ದಾರೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾನಲ್ಲಿ ಫುಲ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಕಮೆಂಟ್ಗಳ ನದಿಯನ್ನೇ ಹರಿಸಿದ್ದಾರೆ. ಅಣ್ಣ ಕ್ರಿಕೆಟ್ನಲ್ಲಿ ನಿರತನಾಗಿದ್ದರೆ, ತಂಗಿ ದೊಡ್ಡ ಕುಡುಕಿ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇದೇ ಕೆಲಸವನ್ನು ಗಂಡು ಮಕ್ಕಳು ಮಾಡಿದ್ದರೆ ಈ ಸಮಾಜ ಹೀಗೆ ನಗುತ್ತಿತ್ತೇ? ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ. ಅದಕ್ಕೆ ಹುಡುಗಿಯರು ಎಣ್ಣೆ ಕುಡಿಬಾರದು ಎಂದು ಹೇಳುವುದು ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ, (ಏಜನ್ಸೀಸ್).