ಪಾಕ್ ಎದುರು ಭಾರತಕ್ಕೆ ಭರ್ಜರಿ ಜಯ: ಮಿಥಾಲಿ ದಾಖಲೆ ಮುರಿದ ಹರ್ಮಾನ್‌ಪ್ರೀತ್  
ಕ್ರಿಕೆಟ್

ಪಾಕ್ ಎದುರು ಭಾರತಕ್ಕೆ ಭರ್ಜರಿ ಜಯ: ಮಿಥಾಲಿ ದಾಖಲೆ ಮುರಿದ ಹರ್ಮಾನ್‌ಪ್ರೀತ್

ಬರ್ಮಿಂಗ್‌ಹ್ಯಾಮ್: ಉಪನಾಯಕಿ ಸ್ಮತಿ ಮಂದನಾ (68 ರನ್, 44 ಎಸೆತ, 9 ಬೌಂಡರಿ, 2 ಸಿಕ್ಸರ್) ಸಮಯೋಚಿತ ಆಟ ಹಾಗೂ ಆಲ್ರೌಂಡರ್ ದೀಪ್ತಿ ಶರ್ಮ (10ಕ್ಕೆ 5) ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ ಐಸಿಸಿ ಮಹಿಳೆಯರ ಟಿ20 ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು 64 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಇದರೊಂದಿಗೆ ಹರ್ಮಾನ್‌ಪ್ರೀತ್ ಕೌರ್ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ.
ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ನಡೆದ ಭಾರತ 16 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿತು. ಆಗ, ಸ್ಮತಿ ಮಂದನಾ ಹಾಗೂ ನಾಯಕಿ ಹರ್ಮಾನ್‌ಪ್ರೀತ್ ಕೌರ್ (36) ಜೋಡಿ ಚೇತರಿಕೆ ನೀಡಿತು. ಸ್ಲಾಗ್ ಓವರ್‌ಗಳಲ್ಲಿ ರಿಚಾ ಘೋಷ್ (34 ರನ್, 17 ಎಸೆತ, 5 ಬೌಂಡರಿ,1 ಸಿಕ್ಸರ್) ಬಿರುಸಿನಾಟದ ನೆರವಿನಿಂದ ಭಾರತ 6 ವಿಕೆಟ್‌ಗೆ 170 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಮೂರನೇ ಗರಿಷ್ಠ ಮೊತ್ತವೂ ಇದಾಗಿದೆ. ಪ್ರತಿಯಾಗಿ ಭಾರತೀಯರ ಸಂಘಟಿತ ದಾಳಿಗೆ ನಿರಂತರ ವಿಕೆಟ್ ಕಳೆದುಕೊಂಡ ಪಾಕಿಸ್ತಾನ 17 ಓವರ್‌ಗಳಲ್ಲಿ 106 ರನ್‌ಗಳಿಗೆ ಸರ್ವಪತನ ಕಂಡಿತು.
ನೋ ಹ್ಯಾಂಡ್ ಶೇಕ್!
ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಖಂಡಿಸಿ ಹಾಗೂ ಭಾರತೀಯ ಸೈನಿಕರಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಕ್ರಿಕೆಟಿಗರೊಂದಿಗಿನ ನೋ ಹ್ಯಾಂಡ್‌ಶೇಕ್ ಪಾಲಿಸಿಯನ್ನು ಹಾಲಿ ವಿಶ್ವಕಪ್‌ನಲ್ಲೂ ಬಿಸಿಸಿಐ ಮುಂದುವರಿಸಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದ ಟಾಸ್ ಪ್ರಕ್ರಿಯೆ ನಂತರ ಾತಿಮಾ ಸನಾ ಅವರೊಂದಿಗೆ ಹಸ್ತಲಾಘವ ಮಾಡದೆ ಹರ್ಮಾನ್‌ಪ್ರೀತ್ ತೆರಳಿದರು. ಪಂದ್ಯ ಮುಕ್ತಾಯದ ಬಳಿಕವೂ ಎರಡೂ ತಂಡದ ಆಟಗಾರ್ತಿಯರು ಹಸ್ತಲಾಘವ ಮಾಡಲಿಲ್ಲ.
170. ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಮೂರನೇ ಗರಿಷ್ಠ ಮೊತ್ತ ಇದಾಗಿದೆ. ನ್ಯೂಜಿಲೆಂಡ್ ಎದುರು 194, ಶ್ರೀಲಂಕಾ 172 ರನ್ ಕಲೆಹಾಕಿರುವುದು ಅಗ್ರ 2 ಗರಿಷ್ಠ ಮೊತ್ತವಾಗಿವೆ.
762. ಹರ್ಮಾನ್‌ಪ್ರೀತ್ ಕೌರ್ ಟಿ20 ವಿಶ್ವಕಪ್‌ನಲ್ಲಿ ಸರ್ವಾಧಿಕ ರನ್‌ಗಳಿಸಿದ ಭಾರತೀಯ ಬ್ಯಾಟರ್ ಎನಿಸಿದರು. ಮಿಥಾಲಿ ರಾಜ್ (726) ಹಿಂದಿನ ಗರಿಷ್ಠ ರನ್ ಸಾಧಕಿ.
5. ಸ್ಮತಿ ಮಂದನಾ ಟಿ20 ವಿಶ್ವಕಪ್‌ನ ಅತಿ ಹೆಚ್ಚು ಇನಿಂಗ್ಸ್‌ಗಳಲ್ಲಿ 50 ಪ್ಲಸ್ ರನ್‌ಗಳಿಸಿದ ಮಿಥಾಲಿ ರಾಜ್ ದಾಖಲೆ ಸರಿಗಟ್ಟಿದರು.
ಭಾರತ: 6 ವಿಕೆಟ್‌ಗೆ 170 (ಶೆಫಾಲಿ ವರ್ಮ 6, ಸ್ಮತಿ ಮಂದನಾ 68, ಜೆಮೀಮಾ ರೋಡ್ರಿಗಸ್ 1, ಹರ್ಮಾನ್‌ಪ್ರೀತ್ 36, ಭಾರತಿ 1, ರಿಚಾ ಷ್ 34, ದೀಪ್ತಿ 12*, ಶ್ರೇಯಾಂಕಾ ಪಾಟೀಲ್ 1*, ಾತಿಮಾ 33ಕ್ಕೆ 2, ಸಾದಿಯಾ 41ಕ್ಕೆ 2). ಪಾಕಿಸ್ತಾನ: 17 ಓವರ್‌ಗಳಲ್ಲಿ 106 (ಮುನೀಬಾ 41, ಗುಲ್ ಫಿರೋಜಾ 12, ಆಯೇಷಾ 12, ಸೈರಾ 2, ಪರ್ವೈಜಾ 7, ದೀಪ್ತಿ ಶರ್ಮ 10ಕ್ಕೆ 5, ಶ್ರೀಚರಣಿ 21ಕ್ಕೆ 3).