- ಏಪ್ರಿಲ್ 14ರ ಕೆಕೆಆರ್ ವಿರುದ್ಧದ ಪಂದ್ಯದ ಮೂಲಕ ಧೋನಿ ಕಣಕ್ಕೆ
- ಕಾಲಿನ ಸ್ನಾಯು ಸೆಳೆತದ ಗಾಯದಿಂದ ಚೇತರಿಕೆ ಕಂಡುಕೊಂಡ ಎಂಎಸ್ ಧೋನಿ
- ದೆಹಲಿ ವಿರುದ್ಧದ ಪಂದ್ಯಕ್ಕೆ ಡೆವಾಲ್ಡ್ ಬ್ರೆವಿಸ್ ಮರಳುತ್ತಿರುವುದು ಸಿಎಸ್ಕೆಗೆ ಮತ್ತೊಂದು ಬೂಸ್ಟ್
MS Dhoni Return Date: ಐಪಿಎಲ್ 2026ರಲ್ಲಿ ಸತತ ಸೋಲುಂಡು ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ಪಾಳಯದಲ್ಲಿ ಸದ್ಯ ಜಯದ ಕಳೆಗಟ್ಟಿದೆ. ಹೌದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ chennai super kings ಪಾಳಯಕ್ಕೆ ಈಗ ಇಬ್ಬರು ಸ್ಟಾರ್ ಆಟಗಾರರ ಎಂಟ್ರಿಯಿಂದ ಆನೆಬಲ ಬಂದಂತಾಗಿದೆ. ಟೂರ್ನಿಯಿಂದ ದೂರ ಉಳಿದಿದ್ದ 'ಕ್ಯಾಪ್ಟನ್ ಕೂಲ್' ಎಂಎಸ್ ಧೋನಿ ಮತ್ತೆ ಮೈದಾನದಲ್ಲಿ ಘರ್ಜಿಸಲು ಸಜ್ಜಾಗಿದ್ದಾರೆ. ಸೈಡ್ ಸ್ಟ್ರೈನ್‌ನಿಂದಾಗಿ ಹೊರಗುಳಿದಿದ್ದ ದಕ್ಷಿಣ ಆಫ್ರಿಕಾದ ಯುವ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ಸಹ ಕಣಕ್ಕಿಳಿಯಲಿದ್ದಾರೆ.
chennai super kings ತಂಡದ ಹಿರಿಯ ಆಟಗಾರ ಎಂಎಸ್ ಧೋನಿ ಕಾಲಿನ ಸ್ನಾಯು ಸೆಳೆತದಿಂದ ಬಳಲುತ್ತಿದ್ದರು. ಹೀಗಾಗಿ ಇಲ್ಲಿಯವರೆಗೂ ನಡೆದ ಟೂರ್ನಿಗಳಲ್ಲಿ ಅವರು ಕಾಣಿಸಿಕೊಂಡಿರಲಿಲ್ಲ. ಸದ್ಯ ಅವರು ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡಿರುವ ಕಾರಣ ಮತ್ತೆ ಮೈದಾನಕ್ಕೆ ಮರಳುವ ಚಾನ್ಸಸ್ ಇದೆ ಎಂದು ಹೇಳಲಾಗುತ್ತಿದೆ.
ಫೀಲ್ಡಿಗಿಳಿಯೋದು ಯಾವ ದಿನ?
ರೆವ್‌ಸ್ಪೋರ್ಟ್ಸ್ ವರದಿಯ ಪ್ರಕಾರ, IPL 2026ರ ಟೂರ್ನಿಯಲ್ಲಿ ಇದುವರೆಗೆ ಒಂದೂ ಪಂದ್ಯ ಆಡದ ಧೋನಿ,
ಏಪ್ರಿಲ್ 14ರಂದು ಮಂಗಳವಾರ ಚೆನ್ನೈನ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಅವರು ಫಿಟ್ನೆಸ್ ಪರೀಕ್ಷೆಗೆ ಒಳಗಾಗಿದ್ದು, ಮುಂದಿನ ಎರಡು ದಿನಗಳಲ್ಲಿ ಅಂತಿಮ ಹಂತದ ಫಿಟ್ನೆಸ್ ಟೆಸ್ಟ್ ನಡೆಯಲಿದೆ.
ಪ್ರಸ್ತುತ ಪಾಯಿಂಟ್ಸ್ ಟೇಬಲ್‌ನಲ್ಲಿ ತಳಮಟ್ಟದಲ್ಲಿರುವ ಸಿಎಸ್‌ಕೆ ತಂಡಕ್ಕೆ ಧೋನಿ ಅವರ ಆಗಮನ ಆನೆಬಲ ನೀಡಿದಂತಾಗಿದೆ. ಜೊತೆಗೆ ಮತ್ತೊಬ್ಬ ದಕ್ಷಿಣ ಆಫ್ರೀಕಾದ ಸ್ಪೋಟಕ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ಕೂಡ ತಂಡಕ್ಕೆ ಮರಳುತ್ತಿದ್ದು, ಏಪ್ರಿಲ್ 11ರಂದು ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಆಡಲಿದ್ದಾರೆ ಎಂದು ರೆವ್‌ಸ್ಪೋರ್ಟ್ಸ್ ವರದಿ ಮಾಡಿದೆ.
ಬ್ರೆವಿಸ್ ಹೇಳಿದ್ದೇನು?
ರವಿಚಂದ್ರನ್ ಅಶ್ವಿನ್ನೊಂದಿಗೆ ಮಾತನಾಡಿದ ಡೆವಾಲ್ಡ್ ಬ್ರೆವಿಸ್, ಆಟವನ್ನು ಇಷ್ಟಪಡುವ ಒಬ್ಬ ಯುವ ಆಟಗಾರನಿಗೆ ಮೈದಾನದ ಹೊರಗೆ ಕುಳಿತು ಪಂದ್ಯ ನೋಡುವುದು ತುಂಬಾ ಕಷ್ಟ. ಆದರೆ, ಈ ವಿರಾಮ ನನ್ನಲ್ಲಿ ಆಟದ ಹಸಿವನ್ನು ಮತ್ತಷ್ಟು ಹೆಚ್ಚಿಸಿದೆ. ನಿನ್ನೆ ಅಭ್ಯಾಸದ ಅವಧಿಯು ತುಂಬಾ ಚೆನ್ನಾಗಿ ಮೂಡಿಬಂದಿದೆ. ಬ್ಯಾಟ್ ಬೀಸಿದಾಗ ಚೆಂಡು ಸಂಪರ್ಕಕ್ಕೆ ಬರುತ್ತಿರುವ ರೀತಿ ಅತ್ಯದ್ಭುತವಾಗಿದ್ದು, ಪಂದ್ಯ ಆಡಲು ನಾನು ತುಂಬಾ ಉತ್ಸುಕನಾಗಿದ್ದೇನೆ," ಎಂದು ತಮ್ಮ ಕಂಬ್ಯಾಕ್ ಬಗ್ಗೆ ಖಚಿತಪಡಿಸಿದ್ದಾರೆ. (ಏಜೆನ್ಸೀಸ್)