CSK vs RCB 
ಕ್ರಿಕೆಟ್

ಐಪಿಎಲ್​ ಇತಿಹಾಸದಲ್ಲಿ ಈ ದಾಖಲೆ ಬರೆದ ಮೊದಲ... ಮಾತ್ರೆ ವಿಕೆಟ್​ ತೆಗೆದ ಬೆನ್ನಲ್ಲೇ ಭುವಿ ಹೆಸರಿಗೆ ಸೇರಿದ ರೆಕಾರ್ಡ್​ | CSK vs RCB

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್​ 19ನೇ ಆವೃತ್ತಿಯ 11ನೇ ಪಂದ್ಯ
  • ಚೆನ್ನೈ ಸೂಪರ್​ ಕಿಂಗ್ಸ್​ಗೆ 251 ರನ್​ಗಳ ಬೃಹತ್ ಗುರಿ
  • ಐಪಿಎಲ್​ ಇತಿಹಾಸದಲ್ಲಿ ಈ ದಾಖಲೆ ಬರೆದ ಮೊದಲ ವೇಗಿ ಭುವನೇಶ್ವರ್ ಕುಮಾರ್​
CSK vs RCB: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಐಪಿಎಲ್​ 19ನೇ ಆವೃತ್ತಿಯ 11ನೇ ಪಂದ್ಯದಲ್ಲಿ ಆರ್​ಸಿಬಿ ವೇಗಿ ಭುವನೇಶ್ವರ್​ ಕುಮಾರ್ ಹೊಸ ದಾಖಲೆಗೆ ಸಾಕ್ಷಿಯಾಗಿದ್ದಾರೆ.
ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ, 251 ರನ್​ಗಳ ಬೃಹತ್ ಸ್ಕೋರ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸಿಎಸ್​ಕೆ ಉತ್ತಮ ಆರಂಭ ಸಿಗಲಿಲ್ಲ. ಮತ್ತೊಮ್ಮೆ ಚೆನ್ನೈ ಪಡೆಯ ಬ್ಯಾಟರ್​ಗಳು ತಂಡಕ್ಕೆ ಗೆಲುವಿನ ಭರವಸೆಯನ್ನು ನೀಡಲಿಲ್ಲ. ಆರಂಭಿಕರಾದ ಸಂಜು ಸ್ಯಾಮ್ಸನ್​, ರುತುರಾಜ್ ಗಾಯಕ್ವಾಡ್​ ಬಹುಬೇಗನೇ ಪೆವಿಲಿಯನ್​ ಹಾದಿ ಹಿಡಿಯುವ ಮೂಲಕ ತಮ್ಮ​ ಕಳಪೆ ಪ್ರದರ್ಶನ ಮುಂದುವರಿಸಿದರು.
ಇನ್ನು ಆರ್​ಸಿಬಿ ಪರ ಬೌಲಿಂಗ್​ ಅಟ್ಯಾಕ್​ಗಿಳಿದ ಭುವನೇಶ್ವರ್ ಕುಮಾರ್, ಸಿಎಸ್​ಕೆ ಬ್ಯಾಟರ್​ ಆಯುಷ್ ಮ್ಹಾತ್ರೆ ವಿಕೆಟ್​ ಪಡೆಯುವ ಮೂಲಕ ಐಪಿಎಲ್ ಇತಿಹಾಸದಲ್ಲಿ 200 ವಿಕೆಟ್‌ಗಳನ್ನು ಪಡೆದ ಮೊದಲ ವೇಗಿ ಆಗಿ ಹೊರಹೊಮ್ಮಿದರು. ಇದು ಆರ್​ಸಿಬಿ ಅಭಿಮಾನಿಗಳಿಗೆ ಖುಷಿ ನೀಡಿದೆ. ಮತ್ತೊಂದೆಡೆ, ಬ್ಯಾಕ್ ಟು ಬ್ಯಾಕ್​ ವಿಕೆಟ್​ ಕಳೆದುಕೊಳ್ಳುತ್ತಿರುವ ಸಿಎಸ್​ಕೆ, ಗೆಲುವಿನಿಂದ ಅದಾಗಲೇ ಬಹುದೂರ ಸರಿದಿದೆ.
ಪಡಿಕಲ್​, ರಜತ್​, ಡೇವಿಡ್ ಅಬ್ಬರ
10 ಓವರ್​ವರೆಗೆ 90 ರನ್​ಗಳನ್ನು ಹೊಂದಿದ್ದ ಆರ್​ಸಿಬಿಗೆ ಬಲ ತುಂಬಿದ್ದೇ ದೇವದತ್ತ ಪಡಿಕಲ್, ಟಿಮ್ ಡೇವಿಡ್​ ಮತ್ತು ರಜತ್ ಪಾಟಿದಾರ್​​ ಅವರ ಸ್ಫೋಟಕ ಇನ್ನಿಂಗ್ಸ್​. ಸಿಎಸ್​ಕೆ ಬೌಲರ್​ಗಳ ಬೆವರಿಳಿಸಿದ ರಾಯಲ್​ ಚಾಲೆಂಜರ್ಸ್​ ಬ್ಯಾಟರ್​ಗಳು, ತಮ್ಮ ತಂಡದ ಒಟ್ಟು ಮೊತ್ತವನ್ನು ಕೇವಲ 3 ವಿಕೆಟ್​ ನಷ್ಟಕ್ಕೆ 251ಕ್ಕೆ ಕೊಂಡೊಯ್ದರು.