T20 Worlc Cup: ಜಿಂಬಾಬ್ವೆಗೆ ಓಮನ್​ ಸುಲಭ ತುತ್ತು 
ಕ್ರಿಕೆಟ್

T20 Worlc Cup: ಜಿಂಬಾಬ್ವೆಗೆ ಓಮನ್​ ಸುಲಭ ತುತ್ತು

ಕೊಲಂಬೊ: ತ್ರಿವಳಿ ವೇಗಿಗಳ ಮಾರಕ ಬೌಲಿಂಗ್​ ದಾಳಿಯ ಬಲದಿಂದ ಜಿಂಬಾಬ್ವೆ ತಂಡ ಟಿ20 ವಿಶ್ವಕಪ್​ (T20 World Cup) ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ಓಮನ್​ ಎದುರು 8 ವಿಕೆಟ್​ಗಳಿಂದ ಸುಲಭ ಗೆಲುವು ಸಾಧಿಸಿ ಶುಭಾರಂಭ ಕಂಡಿದೆ.

ಸಿಂಹಾಳೀಸ್​ ಸ್ಟೇಡಿಯಂನಲ್ಲಿ ಸೋಮವಾರ ಮಧ್ಯಾಹ್ನ ನಡೆದ ಬಿ ಗುಂಪಿನ ಕಾದಾಟದಲ್ಲಿ ಜಿಂಬಾಬ್ವೆ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್​ಗೆ ಇಳಿದ ಓಮನ್​, ಬ್ಲೆಸಿಂಗ್​ ಮುಜರಬಾನಿ (16ಕ್ಕೆ 3), ರಿಚರ್ಡ್​ ಎನ್​ಗರವ (17ಕ್ಕೆ 3) ಮತ್ತು ಬ್ರಾಡ್​ ಇವಾನ್ಸ್​ (18ಕ್ಕೆ 3) ದಾಳಿಗೆ ತತ್ತರಿಸಿ 19.5 ಓವರ್​ಗಳಲ್ಲಿ 103 ರನ್​ಗಳಿಗೆ ಸರ್ವಪತನ ಕಂಡಿತು.

ಓಮನ್​ ಒಂದು ಹಂತದಲ್ಲಿ 27 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡು ನಲುಗಿತ್ತು. ಬಳಿಕ ಯುವ ಆರಂಭಿಕ ಬ್ರಿಯಾನ್​ ಬೆನ್ನೆಟ್​ (48*ರನ್​, 36 ಎಸೆತ, 7 ಬೌಂಡರಿ) ಬಿರುಸಿನಾಟದಿಂದ ಜಿಂಬಾಬ್ವೆ 13.3 ಓವರ್​ಗಳಲ್ಲಿ 2 ವಿಕೆಟ್​ಗೆ 106 ರನ್​ ಗಳಿಸಿ ಜಯಿಸಿತು. 2022ರ ಬಳಿಕ ಟೂರ್ನಿಗೆ ಮತ್ತೆ ಅರ್ಹತೆ ಗಳಿಸಿರುವ ಜಿಂಬಾಬ್ವೆ ಗೆಲುವಿನ ಪುನರಾಗಮನ ಕಂಡಿತು.
ಓಮನ್​: 19.5 ಓವರ್​ಗಳಲ್ಲಿ 103 (ಸುಫ್ಯಾನ್​ 25, ವಿನಾಯಕ್​ ಶುಕ್ಲಾ 28, ನದೀಂ ಖಾನ್​ 20, ಎನ್​ಗರವ 17ಕ್ಕೆ 3, ಮುಜರಬಾನಿ 16ಕ್ಕೆ 3, ಬ್ರಾಡ್​ ಇವಾನ್ಸ್​ 18ಕ್ಕೆ 3), ಜಿಂಬಾಬ್ವೆ: 13.3 ಓವರ್​ಗಳಲ್ಲಿ 2 ವಿಕೆಟ್​ಗೆ 106 (ಬೆನ್ನೆಟ್​ 48*, ಮರುಮನಿ 21, ಬ್ರೆಂಡನ್​ ಟೇಲರ್​ 31, ಸುಫ್ಯಾನ್​ 12ಕ್ಕೆ 2), ಪಂದ್ಯಶ್ರೇಷ್ಠ: ಬ್ಲೆಸಿಂಗ್​ ಮುಜರಬಾನಿ.