ವೈಭವ್​ನ ದೂರುವುದು ಸರಿಯಲ್ಲ... 4 ರನ್​ಗೆ ಔಟ್​ ಆದ 'ವಂಡರ್​ ಕಿಡ್​' ಬೆನ್ನಿಗೆ ನಿಂತ ಮಾಜಿ ಕ್ರಿಕೆಟಿಗ | Vaibhav Sooryavanshi  
ಕ್ರಿಕೆಟ್

ವೈಭವ್​ನ ದೂರುವುದು ಸರಿಯಲ್ಲ... 4 ರನ್​ಗೆ ಔಟ್​ ಆದ 'ವಂಡರ್​ ಕಿಡ್​' ಬೆನ್ನಿಗೆ ನಿಂತ ಮಾಜಿ ಕ್ರಿಕೆಟಿಗ | Vaibhav Sooryavanshi

ಭಾನುವಾರ ನಡೆದ ಎರಡನೇ ಟಿ20 ಮ್ಯಾಚ್​ಗೆ ಇಶಾನ್​ ಕಿಶಾನ್ ಇಂಜುರಿ ಹಿನ್ನೆಲೆ ವೈಭವ್​ಗೆ ಓಪನಿಂಗ್​ ಬಿಟ್ಟು ಮೂರನೇ ಕ್ರಮಾಂಕದಲ್ಲಿ ಆಡುವಂತೆ ಕ್ರೀಸ್​ಗೆ ಕಳುಹಿಸಲಾಯಿತು. ಆದರೆ, ಕೇವಲ 4 ರನ್​ ಬಾರಿಸಲಷ್ಟೇ ವಂಡರ್​ ಕಿಡ್​ ಶಕ್ತವಾಗಿದ್ದು ಈಗ ಪ್ರಶ್ನೆಗಳಿಗೆ ಕಾರಣವಾಗಿದೆ.

Vaibhav Sooryavanshi: ನ್ಯೂಜಿಲೆಂಡ್​ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಕೇವಲ 4 ರನ್​ಗೆ ಔಟ್​ ಆಗಿ ಪೆವಿಲಿಯನ್​ ಹಾದಿ ಹಿಡಿದ ಟೀಮ್ ಇಂಡಿಯಾದ ಯುವ ಬ್ಯಾಟಿಂಗ್ ಸೆನ್ಸೇಷನ್​ ವೈಭವ್ ಸೂರ್ಯವಂಶಿ ಕುರಿತು ಕೆಲವರು ನೆಗೆಟಿವ್ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಚಾನ್ಸ್ ಕೊಡುತ್ತಿಲ್ಲ ಎನ್ನುವಾಗ ಮೂರನೇ ಕ್ರಮಾಂಕದಲ್ಲಿ ಆಡಲು ಅವಕಾಶ ಕೊಟ್ಟಾಗಲೂ ಆಡದಿದ್ದರೆ ಹೇಗೆ ಎಂಬ ಮಾತುಗಳು ಕೇಳಿಬರುತ್ತಿದ್ದಂತೆಯೇ ಇದೀಗ ಮಾಜಿ ಕ್ರಿಕೆಟಿಗ ಮುರುಳಿ ಕಾರ್ತಿಕ್​ ವೈಭವ್ ಪರ ಬ್ಯಾಟ್​ ಬೀಸಿದ್ದಾರೆ. ​

ವೆಸ್ಟ್ ಇಂಡೀಸ್​ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಒಂದೇ ಒಂದು ಪಂದ್ಯದಲ್ಲಿಯೂ ವೈಭವ್​ಗೆ ಚಾನ್ಸ್ ಕೊಡದೆ, ಕೇವಲ ಬೆಂಚ್​ನಲ್ಲಿ ಕೂರಿಸಲಾಗಿತ್ತು. ಈಗ ನ್ಯೂಜಿಲೆಂಟ್​ ಎದುರಿಗಿನ ಸರಣಿಯಲ್ಲೂ ಅದೇ ನಡೆದಿದ್ದು, ಮೊದಲ ಪಂದ್ಯದಿಂದ ಸೂರ್ಯವಂಶಿಯನ್ನು ಕೈಬಿಡಲಾಗಿತ್ತು. ಆದರೆ, ಭಾನುವಾರ ನಡೆದ ಎರಡನೇ ಟಿ20 ಮ್ಯಾಚ್​ಗೆ ಇಶಾನ್​ ಕಿಶಾನ್ ಇಂಜುರಿ ಹಿನ್ನೆಲೆ ವೈಭವ್​ಗೆ ಓಪನಿಂಗ್​ ಬಿಟ್ಟು ಮೂರನೇ ಕ್ರಮಾಂಕದಲ್ಲಿ ಆಡುವಂತೆ ಕ್ರೀಸ್​ಗೆ ಕಳುಹಿಸಲಾಯಿತು. ಆದರೆ, ಕೇವಲ 4 ರನ್​ ಬಾರಿಸಲಷ್ಟೇ ವಂಡರ್​ ಕಿಡ್​ ಶಕ್ತವಾಗಿದ್ದು ಈಗ ಪ್ರಶ್ನೆಗಳಿಗೆ ಕಾರಣವಾಗಿದೆ.

ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪಂದ್ಯದ ಬಳಿಕ ನಡೆದ ಚರ್ಚೆಯೊಂದರಲ್ಲಿ ಮಾತನಾಡಿದ ಕಾರ್ತಿಕ್, "ತಂಡದಲ್ಲಿ ಹಿರಿಯ ಆಟಗಾರನಾಗಿ ಸಂಜು ಸ್ಯಾಮ್ಸನ್ ಮೂರನೇ ಬ್ಯಾಟರ್​ ಆಗಿ ಪಾತ್ರವನ್ನು ವಹಿಸಬೇಕಾಗಿತ್ತು. ಓಪನಿಂಗ್​ ಆಟಗಾರನಾಗಿ ಬಲಿಷ್ಠವಾಗಿರುವ ಸೂರ್ಯವಂಶಿಯನ್ನು ಅವರ ಸ್ಥಾನದಲ್ಲೇ ಕಳುಹಿಸಿದ್ದರೆ ಚೆನ್ನಾಗಿರುತ್ತಿತ್ತು. ಪಂದ್ಯ ಶುರುವಾಗುವ ಮುನ್ನವೇ, ಅದರಲ್ಲೂ ನಮ್ಮ ಬ್ಯಾಟಿಂಗ್‌ಗೆ ಮೊದಲೇ, ವೈಭವ್ ಸೂರ್ಯವಂಶಿ ಆಡುವಾಗ, ಎಲ್ಲಿದ್ದಾರೆ ಅಂತ ನಾನು ಪದೇ ಪದೇ ಕೇಳುತ್ತಿದ್ದೆ" ಎಂದರು.

"ಓಪನರ್‌ ಆಗಿ ಸ್ಫೋಟಕ ಬ್ಯಾಟಿಂಗ್ ಮಾಡುವುದರಲ್ಲಿ ಅವರು ನಿಸ್ಸೀಮರು. ಮಧ್ಯಮ ಕ್ರಮಾಂಕದಲ್ಲಿ ಹಾಕಿದಾಗ, ಅವರಿಗೆ ಹೇಗೆ ಆಡಬೇಕು ಎಂಬುದು ಅಷ್ಟಾಗಿ ತಿಳಿಯುವುದಿಲ್ಲ. ಆತ ಈ ಹಿಂದೆ ಆಡಿಯೇ ಇಲ್ಲ, ಇನ್ನೂ ಚಿಕ್ಕವನು. ಹೀಗಾಗಿ, ಸೀನಿಯರ್​ ಬ್ಯಾಟರ್​ಗಳು ಹಲವು ಕ್ರಮಾಂಕದಲ್ಲಿ ಆಡಿ " ಎಂದರು.

"ಇಲ್ಲಿ ಅಭಿಷೇಕ್ ಶರ್ಮಾ ಮತ್ತು ಸಂಜು ಇಬ್ಬರೂ ಒಂದೇ ಪ್ರೋಫೈಲ್​ ಹೊಂದಿದ್ದಾರೆ. ಆದರೆ, ಸಂಜು ಎಲ್ಲಾ ಕ್ರಮಾಂಕದಲ್ಲಿಯೂ ಆಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹೀಗಿರುವಾಗ, ಸಂಜು ಸ್ಯಾಮ್ಸನ್ ನಿಮಗೆ ಬ್ಯಾಂಕಿಂಗ್​ ಆಗಿರುವ ಆಟಗಾರ. ವೈಭವ್ ಸೂರ್ಯವಂಶಿ ಆಡದೆ ಹೋಗಿದ್ದರೆ ಅದು ಬೇರೆ ವಿಷಯ. ಮಧ್ಯಮ ಕ್ರಮಾಂಕವನ್ನು ಯಾರಾದರೂ ನಿಭಾಯಿಸಲು ಬಯಸಿದ್ದೇ ಆದರೂ ಶಿವಂ ದುಬೆ ಕೂಡ ಲಭ್ಯವಿದ್ದರು. ನನ್ನ ಪ್ರಕಾರ, ವೈಭವ್ ಸೂರ್ಯವಂಶಿ ಓಪನಿಂಗ್ ಆಡುವುದು ಸೂಕ್ತ" ಎಂದು ಹೇಳಿದರು,(ಏಜೆನ್ಸೀಸ್).