ವೈಭವ್ ಸೂರ್ಯವಂಶಿ  
ಕ್ರಿಕೆಟ್

ಮಧ್ಯರಾತ್ರಿ ಐಸ್​ಕ್ರೀಂ... ಚೆನ್ನೈ ವಿರುದ್ಧ ಸ್ಫೋಟಕ ಅರ್ಧಶತಕ ಬಾರಿಸುವ ಮುನ್ನ ಈ ಸ್ವೀಟ್​ ಚಪ್ಪರಿಸಿ ತಿಂದಿದ್ದ ವೈಭವ್​

ಪ್ರಮುಖ ಮುಖ್ಯಾಂಶಗಳು

  • ಸಿಎಸ್​ಕೆ ವಿರುದ್ಧ ಸ್ಫೋಟಕ ಅರ್ಧಶತಕ ಬಾರಿಸಿದ ವೈಭವ್ ಸೂರ್ಯವಂಶಿ
  • 15 ಎಸೆತಗಳಲ್ಲಿ 52 ರನ್​ ದಾಖಲಿಸಿದ 'ಬೇಬಿ ಬಾಸ್​'
  • ಬ್ಯಾಟಿಂಗ್​ಗೆ ಹೋಗುವ ಮುನ್ನ ವಿಶೇಷ ಸ್ವೀಟ್​ ತಿಂದು ಹೋದ ಸ್ಟಾರ್ ಬ್ಯಾಟರ್​
Vaibhav Sooryvanshi: ನಿನ್ನೆ (ಮಾ.30) ಗುವಾಹಟಿಯಲ್ಲಿ ನಡೆದ ಐಪಿಎಲ್​ 19ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ಸಿಎಸ್​ಕೆ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾದವು. ಈ ಮ್ಯಾಚ್​ನಲ್ಲಿ, ಸ್ಫೋಟಕ ಅರ್ಧಶತಕ ಬಾರಿಸಿದ ವೈಭವ್ ಸೂರ್ಯವಂಶಿ, ತಂಡದ ಗೆಲುವಿಗೆ ಪ್ರಮುಖ ಕಾರಣರಾದರು. ಪಂದ್ಯ ಮುಗಿದ ಬಳಿಕ ವೈಭವ್ ಆಡಿದ ಒಂದಷ್ಟು ಮಾತುಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಗಮನ ಸೆಳೆದಿದೆ. 
15 ವರ್ಷದ ವೈಭವ್, 19ನೇ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಪರ ಸಿಕ್ಸರ್​, ಬೌಂಡರಿಗಳನ್ನು ಹರಿಸಿದರು. ಸಿಎಸ್​ಕೆ ವಿರುದ್ಧ ಕೇವಲ 15 ಎಸೆತಗಳಲ್ಲಿ 52 ರನ್​ ಬಾರಿಸುವ ಮೂಲಕ ಐಪಿಎಲ್​ ಇತಿಹಾಸದಲ್ಲಿ ಮೂರನೇ ಅತಿ ವೇಗದ ಅರ್ಧಶತಕ ದಾಖಲಿಸಿದ ಆಟಗಾರ ಎಂಬ ದಾಖಲೆಗೆ ವೈಭವ್ ಸಾಕ್ಷಿಯಾದರು. ಐದು ಸಿಕ್ಸರ್‌ ಮತ್ತು ನಾಲ್ಕು ಬೌಂಡರಿಗಳನ್ನು ಬಾರಿಸಿ, ಕ್ರಿಕೆಟ್​ ಪ್ರಿಯರ ಗಮನ ಸೆಳೆದ ವೈಭವ್, ತಮ್ಮ ಪವರ್​ಹಿಟ್ಟಿಂಗ್​ಗೆ ಆ ಸ್ವೀಟ್​ ಕಾರಣ ಎಂದು ಹೇಳಿದ್ದಾರೆ.
ಮಧ್ಯರಾತ್ರಿಯಲ್ಲಿ ಐಸ್​ಕ್ರೀಂ, ಚಾಕೊಲೇಟ್​ ತಿನ್ನುವ ಆಸೆ ಸೂರ್ಯವಂಶಿಗೆ. ಹೀಗಿರುವಾಗ, ಸ್ವೀಟ್​ ತಿನ್ನದೆ ಇರುತ್ತಾರಾ? ಖಂಡಿತ ಆ ಬಯಕೆಯನ್ನು ಈಡೇಸಿಕೊಂಡಿರುತ್ತಾರೆ. ಪಂದ್ಯ ಮುಗಿದ ಬಳಿಕ ತಮ್ಮ ಸಹ ಆಟಗಾರರೊಂದಿಗೆ ಬಸ್​ನಲ್ಲಿ ಹೊರಟ ವೈಭವ್​ಗೆ, ಸಿಎಸ್​ಕೆ ವಿರುದ್ಧ ಅಂತಹ ಬ್ಯಾಟಿಂಗ್ ಪ್ರದರ್ಶನ ನೀಡಲು ಏನು ಕಾರಣ ಎಂದು ಕೇಳಲಾಯಿತು. 
ಸ್ಪಿನ್ನರ್​ ರವಿ ಬಿಷ್ಣೋಯಿ ಅವರ ಈ ಪ್ರಶ್ನೆಗೆ ಉತ್ತರಿಸಿದ ವೈಭವ್​, ಬ್ಯಾಟಿಂಗ್​ಗೂ ಮುನ್ನ ರಾಜ್​ಭೋಗ್​ ಸ್ವೀಟ್​ ತಿಂದಿದ್ದೆ ಎಂದರು. ಸೂರ್ಯವಂಶಿ ಆಡಿದ ಮಾತನ್ನು ಕೇಳಿ ಒಂದು ನಿಮಿಷ ಬಸ್​ನಲ್ಲಿದ್ದ ಸಹ ಆಟಗಾರರು ನಗು ಚೆಲ್ಲಿದರು. ಕೇವಲ 15 ವರ್ಷಕ್ಕೆ ಅಂತಾರಾಷ್ಟ್ರೀಯ ಮತ್ತು ದೇಶಿಯ ಕ್ರಿಕೆಟ್​ನಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಕೋಟ್ಯಂತರ ಕ್ರಿಕೆಟ್​ ಅಭಿಮಾನಿಗಳ ಹುಬ್ಬೇರಿಸಿರುವ ಈತ, ಶೀಘ್ರವೇ ಭಾರತ ತಂಡಕ್ಕೆ ಆಡಲಿ ಎಂದು ಹಲವರು ಆಶಿಸಿದ್ದಾರೆ,(ಏಜೆನ್ಸೀಸ್).