ಕಾವ್ಯ ಮಾರನ್ (ಎಡ), ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ
- ಎಸ್ಆರ್ಎಚ್ ಸಹ ಮಾಲೀಕರಾದ ಕಾವ್ಯಾ ಮಾರನ್ ನಿರ್ಧಾರಕ್ಕೆ ಛೀಮಾರಿ
- ಸನ್ರೈಸರ್ಸ್ ಲೀಡ್ಸ್ ತಂಡಕ್ಕೆ ಪಾಕ್ ಆಟಗಾರನ ಖರೀದಿ ವಿರುದ್ಧ ಆಕ್ರೋಶ
- ಕಾವ್ಯ ಮಾರನ್ ತಂಡವನ್ನು ಐಪಿಎಲ್ನಿಂದ ಕಿತ್ತುಬಿಸಾಡಿ ಎಂದ ಕ್ರಿಕೆಟ್ ಪ್ರಿಯರು
- ಕಡೆಗೂ ವಿವಾದಕ್ಕೆ ಪ್ರತಿಕ್ರಿಯಿಸಿದ ಬಿಸಿಸಿಐ ಉಪಾಧ್ಯಕ್ಷ
ನವದೆಹಲಿ: ಇಂಗ್ಲೆಂಡ್ನಲ್ಲಿ ನಡೆಯಲಿರುವ ಈ ಬಾರಿಯ 'ದಿ ಹಂಡ್ರೆಡ್' 2026ರ ಟಿ20 ಲೀಗ್ನ ಹರಾಜು ಪ್ರಕ್ರಿಯೆ ನಡೆಯಿತು. ಈ ಆಕ್ಷನ್ನಲ್ಲಿ ಕಾವ್ಯ ಮಾರನ್ ಒಡೆತನದ ಸನ್ರೈಸರ್ಸ್ ಲೀಡ್ಸ್ ಫ್ರಾಂಚೈಸಿಯು ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್ನನ್ನು 2.34 ಕೋಟಿ (190,000 ಪೌಂಡ್‌ಗಳು) ರೂ.ಗೆ ಖರೀದಿಸಿದ್ದು ಸದ್ಯ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಕಾವ್ಯ ಮಾರನ್ ಹಿಗ್ಗಾಮುಗ್ಗಾ ಟ್ರೋಲ್
ಇಷ್ಟೇ ಅಲ್ಲದೇ, ಪಾಕಿಸ್ತಾನದ ಇತರೆ ಕ್ರಿಕೆಟಿಗರ ಮೇಲೂ ಕಣ್ಣಿಟ್ಟಿದ್ದ ಫ್ರಾಂಚೈಸಿಯ ನಡೆಯನ್ನು ತೀವ್ರವಾಗಿ ಖಂಡಿಸಿರುವ ಭಾರತೀಯ ಕ್ರಿಕೆಟ್ ಅಭಿಮಾನಿಗಳು, ಐಪಿಎಲ್ 19ನೇ ಆವೃತ್ತಿಯಿಂದ ಮೊದಲು ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಕಿತ್ತುಬಿಸಾಡಿ. ವೈರಿ ರಾಷ್ಟ್ರದ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವ ಇಂಥ ತಂಡ ನಮಗೆ ಬೇಕಿಲ್ಲ ಎಂದು ಬಿಸಿಸಿಐಗೆ ಆಗ್ರಹಿಸಿದ್ದಾರೆ. ಸನ್ರೈಸರ್ಸ್ ಲೀಡ್ಸ್ನ ಸಹ ಒಡತಿ ಕಾವ್ಯ ಮಾರನ್ ವಿರುದ್ಧ ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ.
ಬಿಸಿಸಿಐ ಉಪಾಧ್ಯಕ್ಷ ಪ್ರತಿಕ್ರಿಯೆ
ಈ ವಿಷಯ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ನೇರವಾಗಿ ಬಿಸಿಸಿಐ ಅಂಗಳಕ್ಕೆ ತಲುಪಿದೆ. ಸನ್ರೈಸರ್ಸ್ ಫ್ರಾಂಚೈಸಿಯನ್ನು ಮಾ.28ರಿಂದ ಆರಂಭವಾಗಲಿರುವ ಐಪಿಎಲ್ ಲೀಗ್ನಿಂದ ತೆಗೆಯುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಿಸಿಸಿಐ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್ ಸಂಸದ ರಾಜೀವ್ ಶುಕ್ಲಾ, ಇದು ನಮ್ಮ (ಐಪಿಎಲ್) ಡೊಮೈನ್ಗೆ ಬರಲ್ಲ. ಅವರು ವಿದೇಶಿ ನೆಲದ ಟೂರ್ನಿಗಾಗಿ ಮಾಡಿಕೊಂಡಿದ್ದಾರೆ. ಹೀಗಾಗಿ, ಇಲ್ಲಿ ನಿರ್ಧಾರ ಅವರದ್ದೇ ಆಗಿದೆ ಹೊರತು ನಮ್ಮದು ಏನಿಲ್ಲ ಎಂದಿದ್ದಾರೆ.
ಸನ್ರೈಸರ್ಸ್ ಕೋಚ್ ಪ್ರತಿಕ್ರಿಯೆ
'ಬಿಬಿಸಿ ಸ್ಫೋರ್ಟ್' ಪ್ರಶ್ನೆಗೆ ಉತ್ತರಿಸಿದ ಫ್ರಾಂಚೈಸಿ ಕೋಚ್ ಡೆನಿಯಲ್ ವೆಟೋರಿ, ಸ್ಪಿನ್ನಲ್ಲಿ ಹಲವು ವೇರಿಯಷನ್ ಮಾಡುವ ಕಲೆ ಅಬ್ರಾರ್ನಲ್ಲಿದೆ. ಅದರಲ್ಲೂ ಒಬ್ಬ ದೇಶಿಯ ಆಟಗಾರನಾಗಿ. ಪಾಕ್ ಆಟಗಾರರ ಖರೀದಿಯಿಂದ ಏನಾದರೂ ಸಮಸ್ಯೆ ಆಗುತ್ತೆ ನಮಗೆ ಮುಂಚೆಯೇ ಒಂದು ಕಲ್ಪನೆ ಇತ್ತು. ಆದರೆ, ನಮ್ಮ ಮುಂದೆ ಬೇರೆ ದಾರಿ ಇರಲಿಲ್ಲ. ಮುಖ್ಯವಾಗಿ, ಅಬ್ರಾರ್ ಮೇಲೆ ಫ್ರಾಂಚೈಸಿ ಮೊದಲೇ ಖರೀದಿಸಲು ಕಣ್ಣಿಟ್ಟಿತ್ತು. ಅಷ್ಟಕ್ಕೂ, ತಂಡಕ್ಕೆ ಪಾಕ್ ಆಟಗಾರರನ್ನು ಖರೀದಿ ಮಾಡಬಾರದು ಎಂಬ ಯಾವುದೇ ಮಾಹಿತಿಯೂ ನಮಗೆ ಸಿಕ್ಕಿಲ್ಲ ಎಂದಿದ್ದಾರೆ,(ಏಜೆನ್ಸೀಸ್).