ಬಿಸಿಸಿಐ ಶತಮಾನೋತ್ಸವಕ್ಕೆ ಭಾರತ-ವಿಶ್ವ ಇಲೆವೆನ್ ತಂಡಗಳ ಕಾದಾಟ?
ಮುಂಬೈ: ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿರುವ ಬಿಸಿಸಿಐ 2028ಕ್ಕೆ 100 ವರ್ಷ (BCCI centenary celebrations) ಪೂರೈಸಲಿದೆ. ಈ ಹಿನ್ನೆಲೆಯಲ್ಲಿ ಭಾರತ ಮತ್ತು ವಿಶ್ವ ಇಲೆವೆನ್ ತಂಡಗಳ ನಡುವೆ ವಿಶೇಷ ಪಂದ್ಯವೊಂದನ್ನು ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ.
ಇತ್ತೀಚೆಗೆ ನಡೆದ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ 2027ರ ಡಿಸೆಂಬರ್ನಿಂದಲೇ ಒಂದು ವರ್ಷ ಕಾಲ ಶತಮಾನೋತ್ಸವವನ್ನು ವಿಶೇಷವಾಗಿ ಆಚರಿಸಲು ಅವಿರೋಧವಾಗಿ ನಿರ್ಧರಿಸಲಾಗಿದೆ. ಇದರನ್ವಯ ಶತಮಾನೋತ್ಸವದ ಸಂಭ್ರಮಾಚರಣೆ ಯಾವ ರೀತಿ ಇರಬೇಕೆಂದು ಯೋಜನೆ ರೂಪಿಸಲು ಸಮಿತಿಯೊಂದನ್ನು ರಚಿಸಲಾಗಿದೆ.
ಕ್ರಿಕೆಟ್ನಲ್ಲಿ ಈ ಹಿಂದೆ ವಿಶ್ವ ಇಲೆವೆನ್ ತಂಡ ವಿಶೇಷ ಸಂದರ್ಭಗಳಲ್ಲಿ 9 ಪಂದ್ಯಗಳನ್ನು ಆಡಿದ ದೃಷ್ಟಾಂತವಿದೆ. ಆದರೆ ಈ ಪಂದ್ಯ ನಡೆದರೆ, ಭಾರತ ತಂಡ ಇದೇ ಮೊದಲ ಬಾರಿಗೆ ವಿಶ್ವ ಇಲೆವೆನ್ ವಿರುದ್ಧ ಆಡಿದಂತಾಗಲಿದೆ.