ಶ್ರೇಯಸ್ ಅಯ್ಯರ್, ಗೌತಮ್ ಗಂಭೀರ್
- ಐರ್ಲೆಂಡ್ ಎದುರು ಪ್ರಪ್ರಥಮ ಬಾರಿಗೆ ಟಿ20 ಸರಣಿ ಸೋಲು
- ಈಗ ಇಂಗ್ಲೆಂಡ್ ವಿರುದ್ಧವು ಸರಣಿ ಸೋತ ಶ್ರೇಯಸ್ ಅಯ್ಯರ್ ಪಡೆ
- ಕ್ಯಾಪ್ಟನ್ ಶ್ರೇಯಸ್ ಮತ್ತು ಗಂಭೀರ್ಗೆ ಬಿಸಿಸಿಐ ಡ್ರಿಲ್
ನವದೆಹಲಿ: ಐರ್ಲೆಂಡ್ ಎದುರು ಎರಡು ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮೂಲಕ ಸೋತ ಭಾರತ, ಬಿಸ್ಟಾಲ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿಯೂ ಸೋತು, ಸರಣಿ ಕೈಚೆಲ್ಲಿದ ಟೀಮ್ ಇಂಡಿಯಾ ಆಟಗಾರರು ಮತ್ತು ಕೋಚಿಂಗ್ ಪಡೆ ವಿರುದ್ಧ ಬಿಸಿಸಿಐ ಕೆರಳಿದೆ.
2019ರ ನಂತರ ಇಂಗ್ಲೆಂಡ್ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ ಭಾರತದ ಸೋಲು ಇದೇ ಮೊದಲು. ಈ ಸರಣಿ ಹೀನಾಯ ಸೋಲುಗಳು ಹೆಡ್ ಕೋಚ್ ಗೌತಮ್ ಗಂಭೀರ್ ಅವರ ಒಪ್ಪಂದಕ್ಕೆ ಈಗ ದೊಡ್ಡ ಮುಳ್ಳಾಗಿದೆ. ಗೌತಿ ಮತ್ತು ಬಿಸಿಸಿಐ ನಡುವಿನ ಒಪ್ಪಂದ ಮುಂದಿನ ವರ್ಷದವರೆಗೆ ಇದ್ದರೂ, ಇತ್ತೀಚಿನ ಕಳಪೆ ಪ್ರದರ್ಶನ ಮಂಡಳಿಯು ಬ್ಯಾಟಿಂಗ್ ಯೂನಿಟ್ ಮಾತ್ರವಲ್ಲದೆ ಸಂಪೂರ್ಣ ಕೋಚಿಂಗ್ ಸೆಟಪ್‌ನ ತರಾಟೆಗೆ ತೆಗೆದುಕೊಳ್ಳಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಗೌತಮ್ ಗಂಭೀರ್ ಅವರನ್ನು ಜವಾಬ್ದಾರಿಯಿಂದ ಕೆಳಗಿಳಿಸಲು ಬಿಸಿಸಿಐ ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.
ಈ ವಿಷಯವನ್ನು ನೇರವಾಗಿ ಪ್ರಸ್ತಾಪಿಸದಿದ್ದರೂ, ಸರಣಿ ಸೋಲಿನ ಹಿನ್ನೆಲೆಯಲ್ಲಿ ಬದಲಾವಣೆ ಮಾಡುವುದು ಅನಿವಾರ್ಯ ಎಂದು ಬಿಸಿಸಿಐ ಮೂಲಗಳು ಸ್ಪಷ್ಟಪಡಿಸಿವೆ. "ಟೀಮ್ ಇಂಡಿಯಾ ಪ್ರದರ್ಶನದ ಬಗ್ಗೆ ನಮಗೆ ತುಂಬಾ ಬೇಸರವಿದೆ. ಸರಣಿ ಮುಗಿದ ನಂತರ, ನ್ಯೂನತೆಗಳು ಎಲ್ಲಿವೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಕ್ಯಾಪ್ಟನ್ ಮತ್ತು ಹೆಡ್ಕೋಚ್ ಜತೆಗೆ ಪರಿಶೀಲನಾ ಸಭೆ ಕೈಗೊಳ್ಳುತ್ತೇವೆ" ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆ.
ಮತ್ತೊಂದೆಡೆ, ಈ ಸರಣಿಯಲ್ಲಿ ಬ್ಯಾಕ್ ಟು ಬ್ಯಾಕ್ ಫ್ಲಾಪ್ ಶೋ ತೋರಿದ ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ ಅವರ ಪ್ರದರ್ಶನದ ಬಗ್ಗೆಯೂ ಬಿಸಿಸಿಐ ಅತೃಪ್ತಿ ಹೊಂದಿದೆ. ಪ್ರತಿ ಬಾಲ್ನಲ್ಲೂ ಸಿಕ್ಸರ್‌ಗಳನ್ನು ಹೊಡೆಯುವ ಉದ್ದೇಶದಿಂದ ಮೈದಾನಕ್ಕಿಳಿಯುವುದು ತಂಡವನ್ನು ತೊಂದರೆಗೆ ಸಿಲುಕಿಸುತ್ತದೆ ಎಂದು ಮ್ಯಾನೇಜ್‌ಮೆಂಟ್ ಭಾವಿಸಿದೆ. ಇವರೊಂದಿಗೆ ಬ್ಯಾಟರ್ ತಿಲಕ್ ವರ್ಮಾ ಅವರ ಫಾರ್ಮ್ ಮೇಲೆಯೂ ಮಂಡಳಿ ಕಣ್ಣಿಟ್ಟಿದೆ.
ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ರನ್ನು ಹೇಗೆ ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿದರು ಎಂಬ ಕಾರಣಕ್ಕೆ ತಂಡದಿಂದ ಕೈಬಿಡಲಾಯಿತೋ, ಅಂತೆಯೇ ಈಗ ಯಾರೆಲ್ಲ ಫ್ಲಾಪ್ ಶೋ ತೋರಿದ್ದಾರೋ, ಆ ಆಟಗಾರರ ವಿರುದ್ಧ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದು ಆಯ್ಕೆಗಾರರು ಪರೋಕ್ಷವಾಗಿ ಹೇಳಿರುವುದು ಗಮನಾರ್ಹ,(ಏಜೆನ್ಸೀಸ್).